ಬಸವಾದಿ ಶರಣ ಹೂಗಾರ ಮಾದಯ್ಯನವರ ಜಯಂತಿ ಆಚರಣೆ ಹಾಗೂ ಜಿಲ್ಲಾಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ
ಧಾರವಾಡ
ಹೂಗಾರ ಸಮಾಜದ ಮಕ್ಕಳಿಗಾಗಿ ಶೈಕ್ಷಣಿಕ ಕೇಂದ್ರಗಳು, ವಿದ್ಯಾರ್ಥಿಗಳಿಗೆ ವಸತಿ ನಿಲಯ ನಿರ್ಮಾಣ ಸೇರಿದಂತೆ ಇಂಥ ಚಟುವಟಿಕೆಗಳಿಗೆ ಸುಮಾರು 50 ಲಕ್ಷಕ್ಕೂ ಅಧಿಕ ಆರ್ಥಿಕ ಸಹಾಯ ಒದಗಿಸುತ್ತೇವೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಭರವಸೆ ನೀಡಿದರು.
ಹೂಗಾರ 12ನೇ ಶತಮಾನದ ಶರಣ ಹೂಗಾರ ಮಾದಯ್ಯನವರ ಜಯಂತಿ ಆಚರಣೆ ಮತ್ತು ಹೂಗಾರ ಸಮುದಾಯದ ಮಕ್ಕಳಿಗೆ ಆಯೋಜಿಸಿದ್ದ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಸತ್ಕರಿಸಿ ಮಾತನಾಡುತ್ತಿದ್ದರು.
ಹೂಗಾರ ಸಮುದಾಯವು ತಮ್ಮ ಕಾಯಕ, ನಿಷ್ಠೆ, ಪೂಜಾರಿಕೆ, ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸುತ್ತ ಅತ್ಯಂತ ಕಡುಬಡತನದಲ್ಲಿ ಜೀವನ ನಿರ್ವಹಿಸುತ್ತಿರುವ ಈ ಸಮುದಾಯ ತೀರಾ ತಳಮಟ್ಟದ ಹಿಂದುಳಿದ ಮತ್ತು ಸಂಪ್ರದಾಯಸ್ಥ ಸಮಾಜ ತಮ್ಮದಾಗಿದೆ ಎಂದರು.
ಇಂದಿನ ಆಧುನಿಕ ಕಾಲಘಟ್ಟದಲ್ಲಿ ತಮ್ಮ ಸಮುದಾಯ, ಸಾಂಪ್ರದಾಯಿಕ ಸೇವೆಗಳನ್ನು ನೆರವೇರಿಸುತ್ತ ತಮ್ಮ ಮಕ್ಕಳಿಗೆ ಭವಿಷ್ಯದ ಶೈಕ್ಷಣಿಕ ಚಟುವಟಿಕೆಗಳಲ್ಲಿ ಭಾಗವಹಿಸಿ ಉನ್ನತ ಹುದ್ದೆಗಳನ್ನು ಅಲಂಕರಿಸಲು ತಾವು ಅಗತ್ಯ ಕ್ರಮ ವಹಿಸಿರಿ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಪಿಯುಸಿಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಮಕ್ಕಳ ಪ್ರತಿಭಾ ಪುರಸ್ಕಾರವನ್ನು ಕುಮಾರಿ ಸಿಂಧು ಪಂಚಾಕ್ಷರಿ ಪೂಜಾರ ಸುಲ್ತಾನಪುರ ಪ್ರತಿಶತ 96, ಕುಮಾರಿ ಸಹನಾ ಶಶಿಧರ ಹೂಗಾರ ಹೊಸಯಲ್ಲಾಪುರ ಧಾರವಾಡ ಪ್ರತಿಶತ ೯೪, ಕುಮಾರಿ ರಾಜೇಶ್ವರಿ ಶಿವಲಿಂಗಪ್ಪ ಹೂಗಾರ ಕೃಷಿ ವಿಶ್ವವಿದ್ಯಾಲಯ ಧಾರವಾಡ ಪ್ರತಿಶತ 92, ಪಿಯುಸಿ ದ್ವಿತೀಯ ಹಂತದಲ್ಲಿ ಕು. ಶಂಕರ ಮಲ್ಲಿಕಾರ್ಜುನ ಹೂಗಾರ ಮರಾಠ ಕಾಲನಿ ಪ್ರತಿಶತ 87, ಕು ಸೃಜನ ಕಾಡಸಿದ್ದೇಶ್ವರ ಹೂಗಾರ ಮರಾಠಿ ಕಾಲೋನಿ ಮಲ್ಲಸಜ್ಜನ ಶಾಲೆ ಹತ್ತಿರ ಪ್ರತಿಶತ 84, ಕು ನಿರಂಜನ ಪ್ರಕಾಶ ಹೂಗಾರ ಕುಮಾರೇಶ್ವರನಗರ ಧಾರವಾಡ ಪ್ರತಿಶತ 83, ಪಿಯುಸಿ ತೃತೀಯ ಹಂತ ಕು.ರೋಹಿಣಿ ಹೂಗಾರ ನವಲಗುಂದ ಪ್ರತಿಶತ 79, ಹಾಗೂ ಎಸ್ ಎಸ್ ಎಲ್ ಸಿ ಪ್ರಥಮ ಹಂತದಲ್ಲಿ ಕು ಐಶ್ವರ್ಯ ನಾಗಪ್ಪ ಹೂಗಾರ್ ಬಸ್ತಿ ಓಣಿ ನವಲಗುಂದ ಪ್ರತಿಶತ 95, ಕು ಲಕ್ಷ್ಮಿ ಆರ್ ಹೂಗಾರ ಗಿರಿಯಾಲ ರಸ್ತೆ ಹಳೆ ಹುಬ್ಬಳ್ಳಿ ಪ್ರತಿಶತ ೯೩, ಎಸ್ ಎಸ್ ಎಲ್ ಸಿ ಯಲ್ಲಿ ದ್ವಿತೀಯ ಹಂತದಲ್ಲಿ ಕು ಶಶಿಧರ ಮಹೇಶ ಹೂಗಾರ ಕುರುಬಗಟ್ಟಿ ಪ್ರತಿಶತ 86, ಕು ವಂಶಿಕಾ ವಿ ಸಾವಳಗಿ ಧಾರವಾಡ ಪ್ರತಿಶತ 85, ಕು ಆಕಾಶ ಅಪ್ಪಣ್ಣ ಹೂಗಾರ ಮೃತ್ಯುಂಜಯ ನಗರ ಪ್ರತಿಶತ 85, ತೃತೀಯ ಹಂತದಲ್ಲಿ ಸಿದ್ದಾರೋಡ ಮಠ ಅಂದರೆ ಶಾಲೆಯ ಬಾಲಕ ಅಮರೇಶ ಶಿವಪುತ್ರಪ್ಪ ಹೂಗಾರ ಪ್ರತಿಶತ 82, ಕು ಚಿನ್ಮಯ ಹೆಚ್ ಪೂಜಾರ ಮರಾಠಕಾಲನಿ ಧಾರವಾಡ 81, ಕು ಚೈತ್ರ ಪ್ರ ಹೂಗಾರ ಶಿರೂರು ತಾ. ನವಲಗುಂದ ಪ್ರತಿಶತ 81, ಕು ಸೋಹಲಿ ಬಸವರಾಜ ಹೂಗಾರ ಉಪ್ಪಿನಬೆಟಗೇರಿ ಪ್ರತಿಶತ 80, ಕು ಸುದರ್ಶನ ಶಿವಯೋಗಿ ಹೂಗಾರ ರಾಜನಗರ ಪ್ರತಿಶತ 80, ಕು ಪ್ರತಿಕ್ಷಾ ಮಹೇಶ ಹೂಗಾರ ಗುಡಿಗೇರಿ ತಾ.ಕುಂದಗೋಳ ಪ್ರತಿಶತ 80, ಕು ನಿವೇದಿತಾ ಕೊಟ್ರಪ್ಪ ಹೂಗಾರ ಯಾಲಕ್ಕಿ ಶೆಟ್ಟರು ಕಾಲೋನಿ ಧಾರವಾಡ ಪ್ರತಿಶತ 79, ಸೇರಿದಂತೆ ವಿವಿಧ ಹಂತಗಳಲ್ಲಿ ಸಾಧನೆ ಮಾಡಿದ ಮಕ್ಕಳಿಗೆ ಪಾರಿತೋಷಕ, ಹಾರ, ಶಾಲು ಗೌರವ ಧನ ನೀಡಿ ಗೌರವಿಸಿ, ಮಕ್ಕಳ ಭವಿಷ್ಯದ ಶಿಕ್ಷಣಕ್ಕೆ ಉನ್ನತ ಮಾರ್ಗದತ್ತ ಸಾಗುವಂತೆ ಹಿತೋಪದೇಶ ನೀಡಿ ಹುರುದುಂಬಿಸಿದರು.
ಅಖಂಡ ಕರ್ನಾಟಕ ಹೂಗಾರ ಮಹಾಸಭಾ ರಾಜ್ಯ ಅಧ್ಯಕ್ಷ ಬಸವರಾಜ ಹೂಗಾರ ಅವರು, ಬಸವಾದಿ ಶರಣ ಹೂಗಾರ ಮಾದಯ್ಯನವರ ಭಾವಚಿತ್ರಕ್ಕೆ ಪುಷ್ಪ ಸಮರ್ಪಣೆ ಸಲ್ಲಿಸಿ ಮಾತನಾಡಿ, ನಮ್ಮ ಹೂಗಾರ್ ಸಮುದಾಯ ಸಾಮಾಜಿಕವಾಗಿ ಆರ್ಥಿಕವಾಗಿ ಅತ್ಯಂತ ಹಿಂದುಳಿದ ಸಮಾಜವಾಗಿದೆ, ಈ ತಳಮಟ್ಟರೂಪಾಯದ ಸುಧಾರಣೆಗಾಗಿ ರಾಜ್ಯ ಸರ್ಕಾರ ಈಗಾಗಲೇ ಹೂಗಾರ ಅಭಿವೃದ್ಧಿ ನಿಗಮವನ್ನು ಅನುಷ್ಠಾನಗೊಳಿಸಿದೆ ಆದರೆ ಸೂಕ್ತ ಅನುದಾನ ವದಗಿಸಿ ಹೂಗಾರ ಸಮುದಾಯದವರನ್ನೇ ಅಧ್ಯಕ್ಷರನ್ನಾಗಿ ನೇಮಿಸುವಂತೆ ಆಗ್ರಹಿಸಿದರು.
ಪ್ರಾಸ್ತಾವಿಕವಾಗಿ ಪತ್ರಕರ್ತ ಹಾಗೂ ಹೂಗಾರ ಸಮುದಾಯ ನೇತಾರ ನಾಗರಾಜ ಹೂಗಾರ ಕಾಲವಾಡ ಮಾತನಾಡಿ, ಈಗಾಗಲೇ ಧಾರವಾಡ ಜಿಲ್ಲಾ ಹೂಗಾರ ಸಮುದಾಯ ಹಾಗೂ ವಿವಿಧ ಸಂಘಟನೆಗಳ ಸಹಕಾರದಲ್ಲಿ ಹೂಗಾರ ಸಮಾಜದ ಸಾಂಪ್ರದಾಯಿಕ ಬಾಸಿಂಗ ತಯಾರಿಕೆ ಮತ್ತು ಲಲಿತ ಕಲೆಗಳ ಪ್ರದರ್ಶನವನ್ನು ರಾಷ್ಟ್ರಮಟ್ಟದಲ್ಲಿ ಆಚರಿಸಿದ್ದೇವೆ, ಜೊತೆಗೆ ಸಮಾಜದ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು, 12ನೇ ಶತಮಾನದ ಕಾಯಕಯೋಗಿ ಶರಣ ಹೂಗಾರ ಮಾದಯ್ಯನವರ ಜಯಂತಿಯನ್ನು ಕಾಲ ಕಾಲಕ್ಕೆ ಆಯೋಜಿಸಿ ಸಮುದಾಯದ ಜನತೆ ಸಂಘಟಿಸುತ್ತ ಮುನ್ನಡೆಯುತ್ತಿದ್ದೇವೆ ಎಂದು ತಿಳಿಸಿದರು.
ಅಖಂಡ ಕರ್ನಾಟಕ ಹೂಗಾರ ಮಹಾಸಭಾ ರಾಜ್ಯ ಗೌರವಾಧ್ಯಕ್ಷ ಗುರುರಾಜೇಂದ್ರ ಶಿವಯೋಗಿ ಸ್ವಾಮಿಗಳು ಸಾನಿಧ್ಯ ವಹಿಸಿ ಮಾತನಾಡಿದರು. ಧಾರವಾಡ ಜಿಲ್ಲಾ ಹೂಗಾರ ಸಮಾಜ ಸಂಘಟನೆ ಅಧ್ಯಕ್ಷ ಸುರೇಶ ಪೂಜಾರ ಅಧ್ಯಕ್ಷತೆ ವಹಿಸಿದ್ದರು.
ಪ್ರಖ್ಯಾತ ರಂಗ ಕಲಾವಿದ ಹಾಗೂ ಸಮಾಜದ ಸಂಘಟಕ ಶಂಕ್ರಪ್ಪ ಎಂ ಹೂಗಾರ, ಮಹೇಶ ಹೂಗಾರ, ಕು ಶ್ರದ್ಧಾ ಹೂಗಾರ, ಕು ವಿವಂತ ನೇತೃತ್ವದಲ್ಲಿ ಕಲ್ಯಾಣದ ಅನುಭವ ಮಂಟಪ ಮತ್ತು 12ನೇ ಶತಮಾನದ ಶರಣರ ನೃತ್ಯರೂಪಕ ಜರುಗಿತು.
ಪಾಲಿಕೆ ಮಾಜಿ ಮಹಾಪೌರ ಈರೇಶ ಅಂಚಟಗೇರಿ, ಪಾಲಿಕೆ ಉಪ ಮಹಾಪೌರ ರತ್ನಬಾಯಿ ನಾಜರೆ, ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಭಾರತಿ ಭೂಯ್ಯಾರ, ರಾಜ್ಯ ಮಹಿಳಾ ಪ್ರಧಾನ ಕಾರ್ಯದರ್ಶಿ ಶೋಭಾ ಹೂಗಾರ, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಅಕ್ಕರವರು, ರಾಜ್ಯ ಮಹಿಳಾ ಪ್ರತಿನಿಧಿ ವೀಣಾ ಎಸ್ ಪೂಜಾರ, ಶಾಂತ ಶಂಕರ ಹೂಗಾರ, ಎಸ್.ಎಫ್ ಹೂಗಾರ, ಶಂಕರಪ್ಪ ಪೂಜಾರ, ಶಿವಾನಂದ ಪೂಜಾರ, ಶಂಕರಪ್ಪ ಎಂ ಹೂಗಾರ, ಸಂಗಮೇಶ ಗುರವ, ಮಹಾಂತೇಶ ಹೂಗಾರ, ಮುತ್ತಣ್ಣ ಹೂಗಾರ ಉಪಸ್ಥಿತರಿದ್ದರು.
ಶಾಂತಾ ಮತ್ತು ಮಲ್ಲವ್ವ ಹೂಗಾರ ತಂಡದಿಂದ ಪ್ರಾರ್ಥನೆ ಜರುಗಿತು. ಜಿಲ್ಲಾ ಹಿರಿಯ ಉಪಾಧ್ಯಕ್ಷ ಎಚ್.ಎಂ. ಹೂಗಾರ ಸ್ವಾಗತಿಸಿದರು. ಹಿರಿಯ ಶಿಕ್ಷಕರಾದ ಪ್ರಕಾಶ ಹೂಗಾರ, ಎಸ್.ಪಿ ಹೂಗಾರ, ಕಾಡಸಿದ್ದೇಶ್ವರ ಹೂಗಾರ ನಿರೂಪಣೆ ಮಾಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಎನ್. ಹೂಗಾರ ವಂದಿಸಿದರು.

