ಬಣಜಿಗ ಸಂಘದ ಜಿಲ್ಲಾಧ್ಯಕ್ಷರಾಗಿ ಶಿವಾನಂದ ಕವಳಿ

ಹಂಚಿಕೊಳ್ಳಿ

ಧಾರವಾಡ
ಕರ್ನಾಟಕ ರಾಜ್ಯ ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ಧಾರವಾಡ ಜಿಲ್ಲಾ ಘಟಕದ ನೂತನ ಅಧ್ಯಕ್ಷರಾಗಿ ಶಿವಾನಂದ ಕವಳಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ನಗರದ ಬಣಜಿಗ ಭವನದಲ್ಲಿ ಭಾನುವಾರ ನಡೆದ ಸಂಘದ ಸರ್ವಸಾಮಾನ್ಯ ಸಭೆಯಲ್ಲಿ ಸಮಾಜದ ಮುಖಂಡರು ಒಮ್ಮತದಿಂದ ಶಿವಾನಂದ ಕವಳಿ ಅವರನ್ನು ಜಿಲ್ಲಾಧ್ಯಕ್ಷರಾಗಿ ಆಯ್ಕೆ ಮಾಡಿದರು. ಬಳಿಕ ನಿಕಟಪೂರ್ವ ಅಧ್ಯಕ್ಷ ಶೇಖರ ಕವಳಿ ಅವರು ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರಿಸಿದರು.

ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ ಸಂತೋಷ ಆನಿಶೆಟ್ಟರ ಅವರು ಶಿವಾನಂದ ಕವಳಿ ಅವರ ಆಯ್ಕೆಯನ್ನು ಅಧಿಕೃತವಾಗಿ ಘೋಷಿಸಿದರು. ಮತ್ತು ಈ ವೇಳೆ ಸಭೆಯಲ್ಲಿ ಉಪಸ್ಥಿತರಿದ್ದ ಸಮಾಜದ ಮುಖಂಡರು ಚಪ್ಪಾಳೆ ತಟ್ಟಿ ಒಮ್ಮತ ಸೂಚಿಸಿದರು.

ಈ ಸಂದರ್ಭದಲ್ಲಿ ಧಾರವಾಡ ಗ್ರಾಮೀಣ ಘಟಕದ ಬಣಿಜಗ ಸಮಾಜದ ಅಧ್ಯಕ್ಷ ವೀರಭದ್ರಪ್ಪ ರೇಷ್ಮೆ, ಧಾರವಾಡ ನಗರದ ಅಧ್ಯಕ್ಷ ವಿಶ್ವನಾಥ ಅಂಗಡಿ, ಶಿವಾನಂದ ಬಿದರಿ, ಈರಣ್ಣ ಹಪ್ಪಳಿ, ಯಲ್ಲಪ್ಪ, ಶರಣಪ್ಪ ಕೊಟಗಿ, ಶಿವಾನಂದ ಬಿದರಿ, ಈರಣ್ಣ ಹಪಳಿ, ಹಾಗು ಮೋಹನ ರಾಮದುರ್ಗ, ಮಲ್ಲಿಕಾರ್ಜುನ ಹೀರೆಮಠ, ವೀರೆಶ ಮದ್ದುರ, ಈರಣ್ಣ ಮಳಗಿಬಾಗಿ, ಗುರುಪಾದಪ್ಪ ಸಿರೂರ, ಅಣ್ಣಪ್ಪ ಸೇರಿದಂತೆ ಸಮಾಜದ ಮುಖಂಡರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶಿವಾನಂದ ಕವಳಿ ಅವರನ್ನು ಸಮಾಜದ ಮುಖಂಡರು ಅಭಿನಂದಿಸಿ, ಸಂಘದ ಸಂಘಟನೆ ಹಾಗೂ ಸಮಾಜದ ಅಭಿವೃದ್ಧಿಗೆ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುವ ಆಶಯ ವ್ಯಕ್ತಪಡಿಸಿದರು.


ಹಂಚಿಕೊಳ್ಳಿ

Leave a Reply

Your email address will not be published. Required fields are marked *