ವಿಧಾನ ಪರಿಷತ್ ನಾಲ್ಕು ಕ್ಷೇತ್ರಗಳಲ್ಲಿ NDA ಗೆಲುವು

ಹಂಚಿಕೊಳ್ಳಿ

ಇವಿಎಂ ಮತ್ತು ಎಸ್‌ಐಆರ್ ಬಗ್ಗೆ ನಿರಂತರ ಆರೋಪ ಮಾಡುವ ಕಾಂಗ್ರೆಸ್‌ಗೆ ಮತದಾರರ ತಕ್ಕ ಉತ್ತರ!

ಧಾರವಾಡ
ಕರ್ನಾಟಕ ವಿಧಾನ ಪರಿಷತ್ತಿನ ನಾಲ್ಕು ಕ್ಷೇತ್ರಗಳ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಗಳು ಸಾಧಿಸಿರುವ ಗೆಲುವು ಪಕ್ಷದ ಸಂಘಟನಾ ಶಕ್ತಿ, ಕಾರ್ಯಕರ್ತರ ಪರಿಶ್ರಮ ಹಾಗೂ ಮತದಾರರ ವಿಶ್ವಾಸಕ್ಕೆ ಸಂದ ಜಯವಾಗಿದೆ.

ನಿರಂತರವಾಗಿ ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಾ, ಚುನಾವಣಾ ವ್ಯವಸ್ಥೆಯ ಮೇಲೆ ಆರೋಪ ಮಾಡುತ್ತಾ ಬಂದಿರುವ ಕಾಂಗ್ರೆಸ್ ಪಕ್ಷಕ್ಕೆ ಕರ್ನಾಟಕದ ಮತದಾರರು ಬ್ಯಾಲೆಟ್ ಪೇಪರ್ ಮೂಲಕವೇ ತಕ್ಕ ಉತ್ತರ ನೀಡಿದ್ದಾರೆ. ವಿಧಾನ ಪರಿಷತ್ತಿನ ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿ ಸಾಧಿಸಿರುವ ಗೆಲುವು ಕಾಂಗ್ರೆಸ್ ಪಕ್ಷದ ಆರೋಪಗಳಿಗೆ ಸ್ಪಷ್ಟ ಉತ್ತರವಾಗಿದೆ.

ಬ್ಯಾಲೆಟ್ ಪೇಪರ್ ಮೂಲಕ ನಡೆದ ಚುನಾವಣೆಯಲ್ಲಿಯೂ ಬಿಜೆಪಿ ಗೆಲುವು ಸಾಧಿಸಿರುವುದು ಕಾಂಗ್ರೆಸ್ ಪಕ್ಷದ ಆರೋಪಗಳಲ್ಲಿನ ದ್ವಂದ್ವ ನಿಲುವನ್ನು ಜನರ ಮುಂದೆ ತೆರೆದಿಟ್ಟಿದೆ. ಇನ್ನು ಮುಂದೆ ಇವಿಎಂ ಬಗ್ಗೆ ನಿರಂತರವಾಗಿ ಆರೋಪ ಮಾಡುವ ನೈತಿಕತೆಯನ್ನು ಕಾಂಗ್ರೆಸ್ ಪಕ್ಷ ಕಳೆದುಕೊಂಡಿದೆ.

ಕರ್ನಾಟಕದ ಜನತೆಯ ವಿಶ್ವಾಸವನ್ನು ಕಾಂಗ್ರೆಸ್ ಪಕ್ಷ ಕಳೆದುಕೊಂಡಿದೆ…. ಚುನಾವಣೆಯಲ್ಲಿ ಸೋಲು ಕಂಡಾಗಲೆಲ್ಲ ಇವಿಎಂ ಮತ್ತು ಎಸ್‌ಐಆರ್ ಬಗ್ಗೆ ಸುಖಾಸುಮ್ಮನೆ ಆರೋಪ ಮಾಡುವುದನ್ನು ಬಿಟ್ಟು, ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸವನ್ನು ಕಾಂಗ್ರೆಸ್ ಮಾಡಲಿ.

ಧಾರವಾಡ ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವು ಹಣದ ಆಮಿಷದ ಮೂಲಕ ಗೆಲುವು ಸಾಧಿಸಲು ಪ್ರಯತ್ನಿಸಿದರೂ, ಭಾರತೀಯ ಜನತಾ ಪಕ್ಷದ ಬಲಿಷ್ಠ ಸಂಘಟನೆ, ಕಾರ್ಯಕರ್ತರ ನಿರಂತರ ಪರಿಶ್ರಮ ಹಾಗೂ ಪದವೀಧರ ಮತದಾರರ ವಿಶ್ವಾಸದ ಮುಂದೆ ಯಾವುದೇ ಆಟ ನಡೆಯಲಿಲ್ಲ. ಹಣದ ಪ್ರಭಾವಕ್ಕಿಂತ ಸಂಘಟನೆಯ ಶಕ್ತಿ ಮತ್ತು ಮತದಾರರ ವಿಶ್ವಾಸವೇ ದೊಡ್ಡದು ಎಂಬುದನ್ನು ಈ ಚುನಾವಣೆ ಮತ್ತೊಮ್ಮೆ ಸಾಬೀತುಪಡಿಸಿದೆ.

ಶಂಕರ ಕೋಮಾರದೇಸಾಯಿ
ಅಧ್ಯಕ್ಷರು
ಭಾರತೀಯ ಜನತಾ ಪಾರ್ಟಿ
ಧಾರವಾಡ-71 ಗ್ರಾಮೀಣ ಮಂಡಲ
(ಧಾರವಾಡ-71 ಮತಕ್ಷೇತ್ರ)


ಹಂಚಿಕೊಳ್ಳಿ

Leave a Reply

Your email address will not be published. Required fields are marked *