ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಜಗದ್ಗುರುಗಳವರಿಗೆ ಭಕ್ತರಿಂದ ಸನ್ಮಾನ, ಬೀಳ್ಕೋಡುಗೆ

ಹಂಚಿಕೊಳ್ಳಿ

ಹುಬ್ಬಳ್ಳಿ
ನಗರದ ರಂಭಾಪುರಿ ಕಲ್ಯಾಣ ಮಂಟಪದಲ್ಲಿ ಶ್ರಿಮದ್ವೀರಶೈವ ಸದ್ಭೋದನಾ ಸಂಸ್ಥೆ ಮತ್ತು ಶ್ರೀ ರಂಭಾಪುರೀಶ ಸಾಂಸ್ಕೃತಿಕ ಸೇವಾ ಸಂಘದ ಸಂಯುಕ್ತ ಆಶ್ರಯದಲ್ಲಿ ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಜಗದ್ಗುರುಗಳವರ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನಕ್ಕೆ ಜಮಖಂಡಿಗೆ ತೆರಳುತ್ತಿರುವ ಸಂದರ್ಭದಲ್ಲಿ ಭಕ್ತರ ಸಮ್ಮುಖದಲ್ಲಿ ಜಗದ್ಗರುಗಳನ್ನು ಶನಿವಾರ ಸನ್ಮಾನಿಸಿ, ಕಾರ್ಯಕ್ರಮಕ್ಕೆ ಶುಭ ಹಾರೈಸಿ ಬೀಳ್ಕೊಡಲಾಯಿತು.

ಈ ಸಂದರ್ಭದಲ್ಲಿ ಯಡೆಯೂರು ಹಿರೇಮಠದ ಶ್ರೀ ರೇಣುಕ ಶಿವಾಚಾರ್ಯರು, ಸುಳ್ಳ ಪಂಚಗೃಹ ಹಿರೇಮಠದ ಶ್ರೀ ಶಿವ ಸಿದ್ಧರಾಮೇಶ್ವರ ಸ್ವಾಮೀಜಿ, ಮಳಲಿಯ ಶ್ರೀ ನಾಗಭೂಷಣ ಶಿವಾಚಾರ್ಯರು, ಶ್ರಿಮದ್ವೀರಶೈವ ಸದ್ಭೋದನಾ ಸಂಸ್ಥೆ ಅಧ್ಯಕ್ಷ ಪ್ರಕಾಶ ಬೆಂಡಿಗೇರಿ, ಶ್ರೀ ರಂಭಾಪುರೀಶ ಸಾಂಸ್ಕೃತಿಕ ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ ಹಿರೇಗೌಡ್ರ, ಅದರಗುಂಚಿ ಶಿವರುದ್ರಯ್ಯ ಸ್ವಾಮೀಜಿ, ಸಿಎ ಎನ್.ಎ. ಚರಂತಿಮಠ, ಶಿವಾನಂದ ಅದೃಶ್ಯಪ್ಪನಮಠ, ಬಸವರಾಜ ಸುಳ್ಳದ, ವಿ.ಜಿ. ಪಾಟೀಲ, ಗದಗಯ್ಯ ಹಿರೇಮಠ, ಮಲ್ಲಿಕಾರ್ಜುನ ಭರಮಗೌಡ್ರ, ಎಂ.ಡಿ. ಖಾನಗೌಡ್ರ, ಸುರೇಶ ಹಿರೇಮಠ, ಈರಣ್ಣ ಪುಂಡಪ್ಪನವರ, ಗಂಗಾಧರ ತೋಟದ, ಎನ್ಎಸ್ ಯುಐ ಅಧ್ಯಕ್ಷ ಶಿವಾ ಬೆಂಡಿಗೇರಿ, ಎಂ. ಕೆ. ಪಾಟೀಲ, ಎಸ್.ಸಿ. ಕಮ್ಮಾರ, ವೀರೇಶ್ ಪಾಟೀಲ್ ನೂರಾರು ಭಕ್ತರು ಇದ್ದರು.


ಹಂಚಿಕೊಳ್ಳಿ

Leave a Reply

Your email address will not be published. Required fields are marked *