ಮೂರನೇ ಸುತ್ತಿನಲ್ಲಿ 1,396 ಮತಗಳ ಮುನ್ನಡೆ; ಬಿಜೆಪಿ ಪಾಳಯದಲ್ಲಿ ವಿಶ್ವಾಸ ಹೆಚ್ಚಳ
ಧಾರವಾಡ
ಕರ್ನಾಟಕ ವಿಧಾನ ಪರಿಷತ್ತಿನ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯ ಮತ ಎಣಿಕೆಯ ಮೂರನೇ ಸುತ್ತಿನಲ್ಲಿಯೂ ಬಿಜೆಪಿ ಅಭ್ಯರ್ಥಿ ಎಸ್.ವಿ. ಸಂಕನೂರ ಅವರು ಮುನ್ನಡೆ ಕಾಯ್ದುಕೊಂಡಿದ್ದಾರೆ.
ಮೂರನೇ ಸುತ್ತಿನಲ್ಲಿ ಎಣಿಕೆಯಾದ ಒಟ್ಟು 14,000 ಮತಗಳಲ್ಲಿ ಬಿಜೆಪಿ ಅಭ್ಯರ್ಥಿ ಎಸ್.ವಿ. ಸಂಕನೂರ ಅವರು 6,191 ಮತಗಳನ್ನು ಪಡೆದರೆ, ಕಾಂಗ್ರೆಸ್ ಅಭ್ಯರ್ಥಿ ಮೋಹನ ಲಿಂಬಿಕಾಯಿ ಅವರು 4,795 ಮತಗಳನ್ನು ಗಳಿಸಿದ್ದಾರೆ. ಈ ಮೂಲಕ ಸಂಕನೂರ ಅವರು ಮೂರನೇ ಸುತ್ತಿನಲ್ಲಿ 1,396 ಮತಗಳ ಮುನ್ನಡೆ ಸಾಧಿಸಿದ್ದಾರೆ.
ಮೂರನೇ ಸುತ್ತಿನಲ್ಲಿಯೂ ಬಿಜೆಪಿ ಅಭ್ಯರ್ಥಿ ಮುನ್ನಡೆ ಕಾಯ್ದುಕೊಂಡಿರುವುದು ಚುನಾವಣಾ ಫಲಿತಾಂಶದ ಕುತೂಹಲವನ್ನು ಹೆಚ್ಚಿಸಿದೆ. ಈಗಾಗಲೇ ಬಿಜೆಪಿ ಕಾರ್ಯಕರ್ತರು ಹಾಗೂ ಅಭಿಮಾನಿಗಳು ವಿಜಯೋತ್ಸವ ಆಚರಿಸುತ್ತಿದ್ದಾರೆ. ಮುಂದಿನ ಸುತ್ತುಗಳ ಮತ ಎಣಿಕೆಯತ್ತ ಅಭ್ಯರ್ಥಿಗಳು ಹಾಗೂ ಬೆಂಬಲಿಗರ ಗಮನ ಇಟ್ಟಿದ್ದು, ಘೋಷಣೆಯೊಂದೆ ಬಾಕಿ ಇದೆ ಎಂದು ಸಂಭ್ರಮ ಕೃಷಿ ವಿವಿ ಆವರಣದಲ್ಲಿ ಕಂಡು ಬಂದಿತು.
