ಧಾರವಾಡ ತಾಲೂಕು ಬರಪೀಡಿತವೆಂದು ಘೋಷಣೆ

ಹಂಚಿಕೊಳ್ಳಿ

ಧಾರವಾಡ
ಧಾರವಾಡ ತಾಲೂಕನ್ನು ಬರಪೀಡಿತ ತಾಲೂಕು ಎಂದು ಸರಕಾರ ಘೋಷಣೆ ಮಾಡಿರುವುದನ್ನು ಧಾರವಾಡ-೭೧ ಕ್ಷೇತ್ರದ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈಶ್ವರ ಶಿವಳ್ಳಿ ಸ್ವಾಗತಿಸಿದ್ದಾರೆ.

ಮಳೆ ಅಭಾವದಿಂದ ಮುಂಗಾರು ಹಂಗಾಮಿನ ಬೆಳೆಗಳು ಸಂಪೂರ್ಣ ರೈತರ ಕೈಗೆ ಸಿಗದಂತಾದವು.
ಅಲ್ಲದೇ ‌ಭೂಮಿಯಲ್ಲಿನ ತೇವಾಂಶ ಕೊರತೆಯಿಂದ ಹಿಂಗಾರು ಬಿತ್ತನೆಗೂ ಸಮಸ್ಯೆ ಎದುರಾಗಿದೆ. ಖಷ್ಕಿ ಕೃಷಿಯನ್ನೇ ಅವಲಂಬಿಸಿರುವ ಧಾರವಾಡ ತಾಲೂಕಿನ ರೈತರ‌ ನೆರವಿಗೆ ಸರಕಾರ ಸ್ಪಂದಿಸುವುದು ಅನಿವಾರ್ಯ ಆಗಿತ್ತು.

ಈ ಹಿನ್ನೆಲೆಯಲ್ಲಿ ಶಾಸಕ ವಿನಯ ಕುಲಕರ್ಣಿ ಅವರು, ತಾಲೂಕನ್ನು ಬರಪೀಡಿತ ಎಂದು ಘೋಷಿಸುವಂತೆ ಮನವಿ ಮಾಡಿದ್ದರು. ನಂತರ ಸರಕಾರದ ಮೇಲೆ
ನಿರಂತರ ಒತ್ತಡ ತಂದು ಇದೀಗ ಬರಪೀಡಿತ ತಾಲೂಕಗಳ ಪಟ್ಟಿಗೆ ಸೇರ್ಪಡೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಸ್ವತಃ ಕೃಷಿಕರು ಆದ ಶಾಸಕರು ತೋರಿದ ಕಾಳಜಿ ಮತ್ತು ಹೊಣೆಗಾರಿಕೆಯಿಂದ ರೈತರು‌ ನಿಟ್ಟುಸಿರು ಬಿಡುವಂತಾಗಿದೆ. ಈ ಬೇಡಿಕೆಗೆ ಸ್ಪಂದಿಸಿದ ಸರಕಾರಕ್ಕೆ ಮತ್ತು ನಿರಂತರ ಶ್ರಮಿಸಿದ ಶಾಸಕರಿಗೆ ಈಶ್ವರ ಶಿವಳ್ಳಿ ಅವರು ಕೃತಜ್ಞತೆ ಸಲ್ಲಿಸುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಹಂಚಿಕೊಳ್ಳಿ

Leave a Reply

Your email address will not be published. Required fields are marked *