ಧಾರವಾಡ
ಅಜ್ಞಾನವೆಂಬ ಅಂಧಕಾರವನ್ನು ಓಡಿಸಿ ಶಿಷ್ಯರಿಗೆ ಜ್ಞಾನೋಪದೇಶ ಮಾಡಿ ಉದ್ಧಾರ ಮಾಡಿದ ಗುರುಗಳ ನೂರ ಎಂಟನೆಯ ಜಯಂತಿ ಉತ್ಸವ ಹಾಗೂ ಧಾರವಾಡ ಚಾತುರ್ಮಾಸ್ಯದ ಸಂದರ್ಭದಲ್ಲಿ ಹೊರತರುತ್ತಿರುವ ಸ್ಮರಣ ಸಂಚಿಕೆ “ಪ್ರಮೋದ ಭಾನು” ಹೆಸರು ತುಂಬಾ ಔಚಿತ್ಯ ಪೂರ್ಣವಾಗಿದೆ ಎಂದು ಶ್ರೀ ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮತೀರ್ಥರು ಹೇಳಿದರು.
ಧಾರವಾಡ ಉತ್ತರಾದಿ ಮಠದ ನೂತನ ಕಟ್ಟಡ ಆವರಣದಲ್ಲಿ ೩೧ ನೆಯ ಚಾತುರ್ಮಾಸ್ಯವನ್ನು ಕೈಗೊಂಡಿರುವ ಉತ್ತರಾದಿ ಮಠದ ಶ್ರೀಪಾದಂಗಳಾದ
ಶ್ರೀ ಸತ್ಯಾತ್ಮತೀರ್ಥರು ನಾಲ್ವತ್ತೈದನೆಯ ದಿನದ ಆಶೀರ್ವಚನ ಸಂದೇಶದಲ್ಲಿ ಸ್ಮರಣ ಸಂಚಿಕೆ ‘ಪ್ರಮೋದ ಭಾನು’ ಲೋಕಾರ್ಪಣೆಗೊಳಿಸಿ ಮಾತನಾಡೊದರು.
ಸಂಸಾರದಲ್ಲಿರುವ ಕತ್ತಲೆ, ಅಜ್ಞಾನ, ವಿಪರೀತ ಜ್ಞಾನ ದೂರವಾಗಿ ಶಾಸ್ತ್ರಗಳ ಜ್ಞಾನ, ಭಗವಂತನ ಜ್ಞಾನ ಸಿಗಲಿ. ವಿದ್ವಾಂಸರು ಮತ್ತು ಗೃಹಸ್ಥರು ಈ ಸಂಚಿಕೆಗೆ ಉತ್ತಮ ಲೇಖನಗಳನ್ನು ನೀಡಿದ್ದಾರೆ. ಸಂಪಾದಕ ಮಂಡಳಿಯ ಎಲ್ಲಾ ಸದಸ್ಯರು ಈ ಸ್ಮರಣ ಸಂಚಿಕೆ ಹೊರಬರಲು ಸಾಕಷ್ಟು ಶ್ರಮಿಸಿದ್ದಾರೆ. ಅದೇ ರೀತಿ ತಮ್ಮ ಲೇಖನಗಳನ್ನು ನೀಡಿದ ಎಲ್ಲಾ ಲೇಖಕರಿಗೆ, ಸಂಪಾದಕ ಮಂಡಳಿ ಸದಸ್ಯರಿಗೆ ಗುರುಗಳು ಅನುಗ್ರಹಿಸಲಿ ಎಂದು ಹಾರೈಸುತ್ತೇವೆ ಎಂದರು.
ಸಂಪಾದಕ ಮಂಡಳಿ ಸದಸ್ಯರಾದ ಕೃಷ್ಣ ಕಟ್ಟಿ, ಹ.ವೆಂ. ಕಾಖಂಡಿಕಿ, ಸಮೀರ ಜೋಶಿ, ಆರ್.ಎಮ್. ಕುಲಕರ್ಣಿ, ಹನುಮಂತ ಕೊಟಬಾಗಿ, ಪಂ. ಕಪಿಲಾಚಾರ್ಯ ಗಲಗಲಿ, ಪಂ.ಭೀಮಸೇನಾಚಾರ್ಯ ಮಳಗಿ, ಪಂ.ಪ್ರಮೋದಾಚಾರ್ಯ ಚಂದಿ, ಬಿ.ಎಸ್. ಮುಳಗುಂದ, ಹನುಮಂತ ಬಿ ಕುಲಕರ್ಣಿ, ಜಯತೀರ್ಥ ಜಹಗೀರದಾರ ಉಪಸ್ಥಿತರಿದ್ದರು.
