೧೪ ವರ್ಷದವರೊಳಗಿನ ಅಂತರ-ಕ್ಲಬ್ ಕ್ರಿಕೆಟ್ ಟೂರ್ನಿ ಇಂದಿನಿಂದ

ಹಂಚಿಕೊಳ್ಳಿ

ಹುಬ್ಬಳ್ಳಿ:
೨೦೨೬-೨೭ನೇ ಸಾಲಿಗಾಗಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆ.ಎಸ್.ಸಿ.ಎ.) ಧಾರವಾಡ ವಲಯ ೧೪ ವರ್ಷದವರೊಳಗಿನ ಬಾಲಕರ ಅಂತರ-ಕ್ಲಬ್ ಕ್ರಿಕೆಟ್ ಪಂದ್ಯಾವಳಿ ಶನಿವಾರ, ದಿನಾಂಕ ೧೦ರಿಂದ ಪ್ರಾರಂಭವಾಗಲಿದೆ.

ಧಾರವಾಡ, ಹುಬ್ಬಳ್ಳಿ, ಬೆಳಗಾವಿ, ಗದಗ ಹಾಗೂ ಭಟ್ಕಳಗಳ ಒಟ್ಟು ೩೫ ತಂಡಗಳು ಈ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿದ್ದು ಆ ತಂಡಗಳನ್ನು ಎಂಟು ಗುಂಪುಗಳಲ್ಲಿ ವಿಂಗಡಿಸಲಾಗಿದೆ ಎಂದು ಧಾರವಾಡ ವಲಯ ನಿಮಂತ್ರಕ ವೀರಣ್ಣ ಸವಡಿ ತಿಳಿಸಿದ್ದು ಲೀಗ್ ಪಂದ್ಯಗಳ ಮುಕ್ತಾಯದ ನಂತರ ದಿನಾಂಕ ೨೫ ಹಾಗೂ ೨೬ ರಂದು ಪ್ರಿ-ಕ್ವಾರ್ಟರ್‌ಫೈನಲ್ಸ್, ೨೮ರಂದು ಕ್ವಾರ್ಟರ್‌ಫೈನಲ್ಸ್, ೨೯ರಂದು ಸೆಮಿಫೈನಲ್ಸ್ ಹಾಗೂ ೩೧ರಂದು ಫೈನಲ್ ಪಂದ್ಯ ನಡೆಯಲಿವೆಯೆಂದು ತಿಳಿಸಿದ್ದಾರೆ.

ದಿನಾಂಕ ೧೦ ರಂದು ನಡೆಯಲಿರುವ ಪಂದ್ಯಗಳು: ಶ್ರೀ ದುರ್ಗಾ ಸ್ಪೋರ್ಟ್ಸ್ ಅಕಾಡೆಮಿ, ಹುಬ್ಬಳ್ಳಿ ಎದುರು ಯೂನಿಯನ್ ಜಿಮಖಾನಾ(ಎ)(ಎ ಗುಂಪು, ಬೆಳಗಾವಿಯ ಕೆಎಸ್‌ಸಿಎ ಮೈದಾನ), ಲಕ್ಷ್ಯ ಕ್ರಿಕೆಟ್ ಅಕಾಡೆಮಿ, ಬೆಳಗಾವಿ ಎದುರು ಟ್ಯಾಲೆಂಟ್ ಸ್ಪೋರ್ಟ್ಸ್ ಕ್ಲಬ್, ಹುಬ್ಬಳ್ಳಿ(ಬಿ ಗುಂಪು, ಎಸ್‌ಕೆಇ ಪ್ಲಾಟಿನಂ ಮೈದಾನ, ಬೆಳಗಾವಿ), ಕ್ರಿಕೆಟ್ ಕ್ಲಬ್ ಆಫ್ ಕರ್ನಾಟಕ(ಸಿಸಿಕೆ), ಧಾರವಾಡ ಎದುರು ಹುಬ್ಬಳ್ಳಿ ಸ್ಪೋರ್ಟ್ಸ್ ಕ್ಲಬ್(ಬಿ)(ಸಿ ಗುಂಪು, ಕೆಎಸ್‌ಸಿಎ ಮೈದಾನ, ಹುಬ್ಬಳ್ಳಿ) ಹಾಗೂ ನೀನಾ ಸ್ಪೋರ್ಟ್ಸ್ ಕ್ಲಬ್, ಬೆಳಗಾವಿ ಎದುರು ವಿಲಾಸ ಬೇಂದ್ರೆ ಕ್ರಿಕೆಟ್ ಅಕಾಡೆಮಿ, ಧಾರವಾಡ(ಇ ಗುಂಪು, ಕರ್ನಾಟಕ ಜಿಮಖಾನಾ ಮೈದಾನ, ಹುಬ್ಬಳ್ಳಿ).


ಹಂಚಿಕೊಳ್ಳಿ

Leave a Reply

Your email address will not be published. Required fields are marked *