ರಾಂಚಿ:
ಪ್ರಾರಂಭಿಕ ಬ್ಯಾಟರ್ ಶಾಯ್ ಹೋಪ್ ಅಬ್ಬರದ ಅಜೇಯ ಶತಕ ಸಿಡಿಸುವುದರೊಂದಿಗೆ ಪ್ರವಾಸಿ ವೆಸ್ಟ್ ಇಂಡೀಸ್ ಶುಕ್ರವಾರ ಇಲ್ಲಿ ನಡೆದ ಎರಡನೇ ಟಿ೨೦ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಇನ್ನೂ ೯ ಎಸೆತಗಳು ಬಾಕಿಯಿರುವಂತೆಯೇ ಭಾರತವನ್ನು ೬ ವಿಕೆಟ್‌ಗಳಿಂದ ಪರಾಭವಗೊಳಿಸಿತು. ಇದರೊಂದಿಗೆ ೫ ಪಂದ್ಯಗಳ ಸರಣಿ ೧-೧ರ ಸಮಸ್ಥಿತಿ ಕಂಡಿತು.
ತಾವೆದುರಿಸಿದ ೪೫ ಎಸೆತಗಳಲ್ಲಿ ೬ ಬೌಂಡರಿ ಹಾಗೂ ೯ ಸಿಕ್ಸರ್‌ಗಳಿದ್ದ ೧೦೨ ರನ್ ಸಿಡಿಸಿ ಅಜೇಯರಾಗುಳಿದ ಶಾಯ್ ಹೋಪ್ ವಿಂಡೀಸ್ ಗೆಲುವಿನ ರೂವಾರಿಯೆನಿಸಿದರು.
ಜೆ.ಎಸ್.ಸಿ.ಎ. ಅಂತಾರಾಷ್ಟ್ರೀಯ ಸ್ಟೇಡಿಯಂ ಕಾಂಪ್ಲೆಕ್ಸ್ ನಲ್ಲಿ ಗೆಲ್ಲಲು ೨೫೦ ರನ್ ಗಳಿಸಬೇಕಿದ್ದ ವೆಸ್ಟ್ ಇಂಡೀಸ್ ೧೪೦ ಕಿ.ಮೀ. ವೇಗದಲ್ಲಿ ಬೌಲೀಂಗ್ ಮಾಡುವ ಮಯಾಂಕ್ ಯಾದವ್ ಎದುರು ಮೊತ್ತ ಕೇವಲ ೫ ತಲುಪುವಷ್ಟರಲ್ಲಿ ಶಿಮ್ರನ್ ಹೆಟ್ಮಾಯರ್(೦) ಹಾಗೂ ಕಾಮಿಲ್ ಪೋರನ್(೪) ವಿಕೆಟ್‌ಗಳನ್ನು ಕಳೆದುಕೊಂಡು ತೊಂದರೆಯಲ್ಲಿತ್ತು.
ಆದರೆ ಶಾಯ್ ಹೋಪ್ ಮೂರನೇ ವಿಕೆಟ್ ಜೊತೆಯಾಟದಲ್ಲಿ ರೋವ್ಮನ್ ಪೊವೆಲ್(೨೪, ೧೩ ಎಸೆತ, ೪ ಬೌಂಡರಿ, ೧ ಸಿಕ್ಸರ್) ಜೊತೆ ೨೭ ಎಸೆತಗಳಲ್ಲಿ ೫೩ ರನ್, ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ ಶೆರ್ಫಾನ್ ರುಧರ್‌ಫೋರ್ಡ್(೮೪, ೩೭ ಎಸೆತ, ೭ ಬೌಂಡರಿ, ೭ ಸಿಕ್ಸರ್) ಜೊತೆ ಕೇವಲ ೫೪ ಎಸೆತಗಳಲ್ಲಿ ಭರ್ಜರಿ ೧೨೦ ರನ್ ಹಾಗೂ ಮುರಿಯದ ಐದನೇ ವಿಕೆಟ್ ಜೊತೆಯಾಟದಲ್ಲಿ ರೊಮಾರಿಯೋ ಶೆಪರ್ಡ್(ಔಟಾಗದೇ ೩೪, ೧೩ ಎಸೆತ, ೩ ಬೌಂಡರಿ, ೩ ಸಿಕ್ಸರ್) ಜೊತೆ ೨೬ ಎಸೆತಗಳಲ್ಲಿ ೭೪ ರನ್ ಸೇರಿಸಿ ಪಂದ್ಯವನ್ನು ಭಾರತದಿಂದ ಕಿತ್ತುಕೊಂಡರು. ಮಯಾಂಕ್ ಯಾದವ್(೩/೩೬) ಬಿಟ್ಟರೆ ಇನ್ನುಳಿದವರಾರಿಗೂ ವಿಂಡೀಸ್ ಆರ್ಭಟವನ್ನು ತಡೆಯಲಾಗಲಿಲ್ಲ.
ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗಿಗೆ ಇಳಿಸಲ್ಪಟ್ಟ ಭಾರತ ೨೦೦ರ ಸ್ಟೆçöÊಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದ ಪ್ರಾರಂಭಿಕ ಬ್ಯಾಟರ್ ಸಂಜು ಸ್ಯಾಮ್ಸನ್ ಅವರ ಸ್ಫೋಟಕ ಅರ್ಧ ಶತಕ(೮೨, ೪೧ ಎಸೆತ, ೯ ಬೌಂಡರಿ, ೪ ಸಿಕ್ಸರ್) ಹಾಗೂ ತಿಲಕ್ ವರ್ಮಾ(ಔಟಾಗದೇ ೪೪, ೧೮ ಎಸೆತ, ೩ ಬೌಂಡರಿ, ೩ ಸಿಕ್ಸರ್), ಇಶಾನ್ ಕಿಶನ್(೪೩, ೨೨ ಎಸೆತ, ೬ ಬೌಂಡರಿ, ೨ ಸಿಕ್ಸರ್) ಹಾಗೂ ಶ್ರೇಯಸ್ ಅಯ್ಯರ್(೪೦, ೧೮ ಎಸೆತ, ೩ ಬೌಂಡರಿ, ೩ ಸಿಕ್ಸರ್) ಉಪಯುಕ್ತ ಬ್ಯಾಟಿಂಗ್ ನೆರವಿನಿಂದ ಎದುರಾಳಿಗೆ ೨೫೦ರ ಟಾರ್ಗೆಟ್ ನೀಡುವಲ್ಲಿ ಯಶ ಕಂಡಿತು. ರೋಸ್ಟನ್ ಚೇಸ್(೩/೨೪) ಹಾಗೂ ಶಮಾರ್ ಸ್ಪಿçಂಗರ್(೨/೬೪) ವಿಂಡೀಸ್ ಪರ ಅತ್ಯಧಿಕ ವಿಕೆಟ್ ಪಡೆದ ಬೌಲರ್‌ಗಳು.
ಲಖನೌದಲ್ಲಿ ನಡೆದ ಮೊದಲ ಟಿ೨೦ ಅಂತಾರಾಷ್ಟ್ರೀಯ ಪಂದ್ಯವನ್ನು ಭಾರತ ೮ ವಿಕೆಟ್‌ಗಳಿಂದ ಜಯಿಸಿತ್ತು.
• ಸಂಕ್ಷಿಪ್ತ ಸ್ಕೋರುಗಳು:
ಭಾರತ: ೨೦ ಓವರ್‌ಗಳಲ್ಲಿ ೫ ವಿಕೆಟ್‌ಗಳಿಗೆ ೨೪೯(ಸಂಜು ಸ್ಯಾಮ್ಸನ್ ೮೨, ತಿಲಕ್ ವರ್ಮಾ ಔಟಾಗದೇ ೪೪, ಇಶಾನ್ ಕಿಶನ್ ೪೩, ಶ್ರೇಯಸ್ ಅಯ್ಯರ್ ೪೦, ಅಭಿಷೇಕ ಶರ್ಮಾ ೨೦, ಶಿವಮ್ ದುಬೆ ೭, ನಮನ್ ಧೀರ್ ಔಟಾಗದೇ ೪, ರೋಸ್ಟನ್ ಚೇಸ್ ೩/೨೪, ಶಮಾರ್ ಸ್ಪಿçಂಗರ್ ೨/೬೪), ವೆಸ್ಟ್ ಇಂಡೀಸ್: ೧೮.೩ ಓವರ್‌ಗಳಲ್ಲಿ ೪ ವಿಕೆಟ್‌ಗಳಿಗೆ ೨೫೨ (ಶಾಯ್ ಹೋಪ್ ಔಟಾಗದೇ ೧೦೨, ಶೆರ್ಫಾನ್ ರುಧರ್‌ಫೋರ್ಡ್ ೮೪, ರೋವ್ಮನ್ ಪೊವೆಲ್ ೨೪, ಕಾಮಿಲ್ ಪೋರನ್ ೪, ಶಿಮ್ರನ್ ಹೆಟ್ಮಾಯರ್ ೦, ಮಯಾಂಕ್ ಯಾದವ್ ೩/೩೬, ಕುಲ್ದೀಪ್ ಯಾದವ ೧/೫೩). ಫಲಿತಾಂಶ: ವೆಸ್ಟ್ ಇಂಡೀಸ್‌ಗೆ ೬ ವಿಕೆಟ್‌ಗಳ ಜಯ.

