ನವರಾತ್ರಿ ಉತ್ಸವ: ಕರಿಯಮ್ಮ ದೇವಸ್ಥಾನದಲ್ಲಿ ಕುಂಕುಮಾರ್ಚಣೆ

ಹಂಚಿಕೊಳ್ಳಿ

ಧಾರವಾಡ
ನವರಾತ್ರಿ ಉತ್ಸವದ ಆರನೆಯ ದಿನ ಹಾಗೂ ಶುಭ ಶುಕ್ರವಾರವಾದಂದು ಶಾಂತಿ ನಿಕೇತನ ನಗರದ ಶ್ರೀ ಕರಿಯಮ್ಮ ದೇವಸ್ಥಾನದಲ್ಲಿ ಸುಮಗಂಲೆಯರಿಂದ ಸಾಮೂಹಿಕ ಕುಂಕುಮಾರ್ಚಣೆ ನೆರವೇರಿತು.

ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದ ಮಹಿಳೆಯರು ದೇವಿಯ ಸಹಸ್ರ ನಾಮವನ್ನು ಜಪಿಸುತ್ತಾ ದೇವಿಯ ಪಾದಗಳಿಗೆ ಶುದ್ಧವಾದ ಕುಂಕಮ ಸಮರ್ಪಿಸಿದರು.

ಕುಟುಂಬದಲ್ಲಿ ಶಾಂತಿ, ನೆಮ್ಮದಿ ಮತ್ತು ಸಂತೋಷ ಸದಾ ಇರಲಿ. ಸಮಾಜದಲ್ಲಿ ಸಾಮರಸ್ಯ ಒಡಮೂಡಲಿ. ಲೋಕ ಕಲ್ಯಾಣದ ಜೊತೆಗೆ ಅಭಿವೃದ್ಧಿಯ ಫಲ ಸರ್ವರಿಗೂ ತಲುಪವಂತಾಗಲಿ ಎಂದು ಕುಂಕುಮಾರ್ಚಣೆಯಲ್ಲಿ ಭಾಗವಹಿಸಿದ್ದ ಸುಮಗಂಲೆಯರು ದೇವಿಯಲ್ಲಿ ಪ್ರಾರ್ಥಿಸಿದರು.

ದೇವಸ್ಥಾನದ ಅರ್ಚಕ ಅರುಣ ಹನುಮಂತರಾವ್ ಕುಲಕರ್ಣಿ ಅವರು ಕುಂಕುಮಾರ್ಚಣೆ ಕಾರ್ಯಕ್ರಮ ನಡೆಸಿಕೊಟ್ಟರು. ಶಾಂತಿ ನಿಕೇತನ ನಗರ ಮತ್ತು ಸುತ್ತ ಮುತ್ತಲಿನ ಬಡಾವಣೆಯ ನೂರಾರು ಮಹಿಳೆಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.


ಹಂಚಿಕೊಳ್ಳಿ

Leave a Reply

Your email address will not be published. Required fields are marked *