ದೇವಿಯ ಆರಾಧನೆ ಸಮುದಾಯವನ್ನು ಒಂದುಗೂಡಿಸುವ ದೈವಿಕ ಪ್ರೇರಣೆ: ಅನಿತಾ ಚಳಗೇರಿ
ಧಾರವಾಡ
ಭಕ್ತಿಭಾವದಿಂದ ನಾವು ಶ್ರೀ ಕರೆಮ್ಮದೇವಿಯನ್ನು ಆರಾಧಿಸುತ್ತೇವೆ. ಭಕ್ತರ ಪಾಲಿಗೆ ದೇವಿಯು ಕೇವಲ ಆರಾಧನೆಯ ಮೂರ್ತಿಯಲ್ಲ; ಆಕೆ ನಂಬಿಕೆಯ ಶಕ್ತಿ, ಕಷ್ಟಕಾಲದ ಧೈರ್ಯ, ಬದುಕಿನ ಭರವಸೆ ಹಾಗೂ ಸಮುದಾಯವನ್ನು ಒಂದುಗೂಡಿಸುವ ದೈವಿಕ ಪ್ರೇರಣೆ ಎಂದು ಹು-ಧಾ ಮಹಾನಗರ ಪಾಲಿಕೆ ಸದಸ್ಯೆ ಅನಿತಾ ನಾರಾಯಣ ಚಳಗೇರಿ ಹೇಳಿದರು.
ಇಲ್ಲಿನ ಕುಮಾರೇಶ್ವರನಗರದ ಶ್ರೀ ಕರಿಯಮ್ಮ ದೇವಿ ದೇವಸ್ಥಾನ ನಿರ್ವಹಣಾ ಸಂಘವು ಶ್ರೀ ಕರಿಯಮ್ಮ ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ಏರ್ಪಡಿಸಿದ್ದ ಸಂಗೀತ ನೃತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದೇವಿಯ ಆರಾಧನೆ ನಮ್ಮ ಭಾರತೀಯ ಸಂಸ್ಕೃತಿಯ ಜೀವಾಳವಾಗಿದೆ. ಜಾತ್ರಾ ಮಹೋತ್ಸವಗಳಿಂದ ನಾವು ಸಾಮಾಜದ ಜನರೊಟ್ಟಿಗೆ ಬೆರೆತು ಒಳ್ಳೆಯ ಸಾಮರಸ್ಯ ಜೀವನ ನಡೆಸಬಹುದಾಗಿದೆ ಎಂದರು.
ಶ್ರೀ ಕರಿಯಮ್ಮ ದೇವಸ್ಥಾನ ನಿರ್ವಹಣಾ ಸಂಘದ ಅಧ್ಯಕ್ಷ ಎನ್.ಬಿ. ಪಾಟೀಲ್ ಅಧ್ಯಕ್ಷತೆ ವಹಿಸಿ ದೇವಸ್ಥಾನವು ನಡೆದ ಬಂದ ಕುರಿತು ತಿಳಿಸಿದರು. ಉಪಾಧ್ಯಕ್ಷ ಜೆ.ವೈ. ತೋಟದ, ಬಸವರಾಜ ಕೊಂಗವಾಡ, ಪ್ರಭು ಹಿರೇಮಠ, ಪುಷ್ಪಾವತಿ ಚವ್ಹಾಣ, ಉದಯ ನಾಯಕ ಉಪಸ್ಥಿತರಿದ್ದರು. ಶಂಕರ ಗಸ್ತೆ ಮತ್ತು ಪ್ರಕಾಶ ಬಾಳಿಕಾಯಿ ನಿರೂಪಿಸಿದರು. ಕಾರ್ಯದರ್ಶಿ ಜಿ.ಎಂ. ಹುಲ್ಲೂರ ಪ್ರಾಸ್ತಾವಿಕ ಮಾತನಾಡಿದರು. ಬಸವರಾಜ ನಿಗದಿ ಸ್ವಾಗತಿಸಿದರು. ನಂದಾ ಗುಳೇದಗುಡ್ಡ ವಂದಿಸಿದರು.
ನಂತರ ಸಂಗೀತ ನೃತ್ಯೋತ್ಸವ ಕಾರ್ಯಕ್ರಮದಲ್ಲಿ ವಿದುಷಿ ಸುಜಾತಾ ಗುರವ ಕಮ್ಮಾರ, ವಿದುಷಿ ಭಾರ್ಗವಿ ಕುಲಕರ್ಣಿ ಅವರ ಭಕ್ತಿ ಸಂಗೀತ ಕಾರ್ಯಕ್ರಮಕ್ಕೆ ತಬಲಾದಲ್ಲಿ ದಯಾನಂದ ಸುತಾರ, ಹಾರ್ಮೊನಿಯಂದಲ್ಲಿ ಬಸವರಾಜ ಹೂಗಾರ ಸಮರ್ಥ ಸಾಥ್ ನೀಡಿದರು. ದರ್ಬಾರ್ ಸಂಗೀತ ವಿದ್ಯಾಲಯದ ಕಲಾವಿದರಿಂದ ಸಮೂಹ ಗಾಯನ ಜರುಗಿತು, ಲಯ ಫೌಂಡೇಶನ್ ಕಲಾವಿದರಿಂದ ನೃತ್ಯ ಕಾರ್ಯಕ್ರಮಗಳು ಜರುಗಿದವು.
ಸಿದ್ದು ಹೊಳೆಯಣ್ಣವರ, ಎ.ವಿ. ಗುಬ್ಬಣ್ಣವರ, ಪ್ರದೀಪ ಜಾಧವ, ಬಿ.ಎ. ಹಿರೇಮಠ, ಬಿ.ಎನ್. ಪಾಟೀಲ, ಎಚ್.ಟಿ. ಚನ್ನಾಳ, ವಿರಕ್ತಮಠ, ರಾಜೇಶ್ವರಿ ಕಬ್ಬೂರ, ಸವದತ್ತಿಮಠ, ವೈಷ್ಣವಿ ಜೋಶಿ, ಭೀಮಸಿ ಜಾಧವ, ಪ್ರಕಾಶ ಕುಲಕರ್ಣಿ, ಆತ್ಮಾನಂದ ಕಬ್ಬೂರ, ಗುರುರಾಜ ಅಕ್ಕಿ ಮುಂತಾದವರು ಉಪಸ್ಥಿತರಿದ್ದರು.

