ಧಾರವಾಡ
ಸನ್ಮತಿ ಕಿಡ್ಸ್ ವರ್ಲ್ಡ್ ಪ್ರಿ-ಪ್ರೈಮರಿ ಸ್ಕೂಲ್‌ನಲ್ಲಿ ಅಜ್ಜ–ಅಜ್ಜಿಯರ ದಿನಾಚರಣೆಯನ್ನು ಶನಿವಾರ ಸಂಭ್ರಮದಿಂದ ಆಚರಿಸಲಾಯಿತು.
ಈ ವಿಶೇಷ ಕಾರ್ಯಕ್ರಮದಲ್ಲಿ ಅಜ್ಜ–ಅಜ್ಜಿಯರು ಪಾಲ್ಗೊಂಡು ಮಕ್ಕಳೊಂದಿಗೆ ವಿವಿಧ ಚಟುವಟಿಕೆಗಳಲ್ಲಿ ಉತ್ಸಾಹದಿಂದ ಭಾಗವಹಿಸಿದರು. ಮಕ್ಕಳೊಂದಿಗೆ ಸಮಯ ಕಳೆಯುವ ಮೂಲಕ ಹಿರಿಯರು ತಮ್ಮ ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿದರು.
ಮಕ್ಕಳಿಗೆ ಅಜ್ಜ–ಅಜ್ಜಿಯರ ಮಹತ್ವ, ಅವರ ಪ್ರೀತಿ, ಅನುಭವ ಹಾಗೂ ಕುಟುಂಬದಲ್ಲಿ ಹಿರಿಯರ ಪಾತ್ರವನ್ನು ಪರಿಚಯಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಿದ್ದು ವಿಶೇಷವಾಗಿತ್ತು. ಮಕ್ಕಳೊಂದಿಗೆ ಹಿರಿಯರು ಬೆರೆತು ಸಂಭ್ರಮಿಸಿದ ಕ್ಷಣಗಳು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದವು.
ಅಜ್ಜ–ಅಜ್ಜಿಯರ ಪ್ರೀತಿ ಮತ್ತು ಆಶೀರ್ವಾದ ಮಕ್ಕಳ ಬೆಳವಣಿಗೆಗೆ ಅಮೂಲ್ಯ ಎಂಬ ಸಂದೇಶವನ್ನು ಕಾರ್ಯಕ್ರಮ ಸಾರಿತು. ಮುಖ್ಯ ಅತಿಥಿಗಳಾಗಿ ಕವಿತ್ರಿ ಸುಜಾತಾ ಹಡಗಲಿ ಆಗಮಿಸಿ, ಅಜ್ಜ ಅಜ್ಜಿಯವರ ಮಹತ್ವದ ಕುರಿತು ಮಾತನಾಡಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಅನುಪಮಾ ರೋಖಡೆ ಅಧ್ಯಕ್ಷತೆ ವಹಿಸಿದ್ದರು.
