ಧಾರವಾಡ
‘ಅತ್ರಿ ಋಷಿಗಳು ತಪಸ್ಸು ಮಾಡಿದಾಗ ಬ್ರಹ್ಮ, ವಿಷ್ಣು, ಮಹೇಶ್ವರ ಮೂರೂ ಜನ ಬಂದಿದ್ದಾರೆ. ಅತ್ರಿ ಋಷಿಗಳು ನಾರಾಯಣನನ್ನು ಸ್ಮರಿಸಿದರೂ ಬಂದವರು ಮೂರು ಜನ. ಭಗವಂತ ಯಾರನ್ನೂ ಬಿಟ್ಟು ಬರುವವರಲ್ಲ. ದುರ್ವಾಸರು ಅನುಗ್ರಹ ಮಾಡಬಲ್ಲರು ಹಾಗೆಯೇ ಶಾಪವನ್ನೂ ಕೊಡಬಲ್ಲವರು. ಆತ್ಮ ಎಂದರೆ ವಿಷ್ಣು. ಅಂದರೆ ಸ್ವಾಮಿ.ಒಡಯ. ದೇವರು ಪರಿಪೂರ್ಣ. ದತ್ತಾತ್ರೇಯ ಯೋಗ ಶಾಸ್ತ್ರ ಪ್ರವರ್ತಕ. ಆ ದತ್ತಾತ್ರೇಯನನ್ನು ಆತ್ಮ ಅಂದರೆ ವಿಷ್ಣು ಅಂದರೆ ಸ್ವಾಮಿ. ರುದ್ರದೇವರು ಮಹಾನುಭಾವರು. ದಕ್ಷಪ್ರಜಾಪತಿ ತನ್ನ ಮಗಳನ್ನು ಕೊಟ್ಟು ಮದುವೆ ಮಾಡುತ್ತಾನೆ. ಆದರೆ ರುದ್ರದೇವರು ಒಂದು ಸಂದರ್ಭದಲ್ಲಿ ದಕ್ಷಪ್ರಜಾಪತಿಗೆ ಗೌರವ ಕೊಡಲಿಲ್ಲ ಎಂದು ಕೋಪ ಮಾಡಿಕೊಂಡ. ಗುರುಗಳ ಮನೆಗೆ, ಗಂಡನ ಮನೆಗೆ ಹೋಗಲು ಸಂಕೋಚ ಬೇಡ ಎಂದು ಶ್ರೀ ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮತೀರ್ಥರು ಹೇಳಿದರು.
ಧಾರವಾಡ ಉತ್ತರಾದಿ ಮಠದ ನೂತನ ಕಟ್ಟಡ ಆವರಣದಲ್ಲಿ ೩೧ ನೆಯ ಚಾತುರ್ಮಾಸ್ಯವನ್ನು ಕೈಗೊಂಡಿರುವ ಉತ್ತರಾದಿ ಮಠದ ಶ್ರೀಪಾದಂಗಳಾದ ಶ್ರೀ ಸತ್ಯಾತ್ಮತೀರ್ಥರು ನಾಲ್ವತ್ತೊಂದನೆಯ ದಿನದ ಗುರುವಾರದಂದು ಆಶೀರ್ವಚನ ಸಂದೇಶದಲ್ಲಿ ಮೇಲಿನಂತೆ ತಿಳಿಸಿದರು.
ಮುಂದುವರೆದು ‘ರುದ್ರ ದೇವರು ಮಹಾನುಭಾವರು. ವೀರಭದ್ರನನ್ನು ಸೃಷ್ಟಿ ಮಾಡಿದರು. ನಮ್ಮ ನಮ್ಮ ಸಾಧನೆಯನ್ನು ನಾವು ಮಾಡೋಣ. ಪರಿಣಾಮ ಭಗವಂತನಿಗೆ ಬಿಡೋಣ. ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ. ಸುತ್ತಲೂ ಪರಮಾತ್ಮ ಇದ್ದಾನೆ ಎಂದು ನಂಬುವವರಿಗೆ ಏಕಾಕಿ ಎಂದು ಅನಿಸುವುದೇ ಇಲ್ಲ ಎಂದು ಶ್ರೀ ಸತ್ಯಾತ್ಮತೀರ್ಥ ಗುರುಗಳು ಹೇಳಿದರು.

