ಹುಬ್ಬಳ್ಳಿ ಕರ್ನಾಟಕದ ಪ್ರಮುಖ ವಾಣಿಜ್ಯ ಮತ್ತು ಕೈಗಾರಿಕಾ ಕೇಂದ್ರವಾಗಿದೆ, ಇದನ್ನು “ಛೋಟಾ ಮುಂಬೈ” ಎಂದೂ ಕರೆಯುತ್ತಾರೆ.
ಇದು ವಿಶ್ವದ ಅತಿ ಉದ್ದದ ರೈಲ್ವೆ ಪ್ಲಾಟ್‌ಫಾರ್ಮ್, ಐತಿಹಾಸಿಕ ಸಿದ್ಧಾರೂಢ ಮಠ, ಉಣಕಲ್ ಕೆರೆ ಮತ್ತು ಸಾಂಸ್ಕೃತಿಕ ಪರಂಪರೆಗೆ ಪ್ರಸಿದ್ಧವಾಗಿದೆ. ಉತ್ತರ ಕರ್ನಾಟಕದ ಪ್ರಮುಖ ವ್ಯಾಪಾರ ಕೇಂದ್ರವಾಗಿ, ಇದು ಶಿಕ್ಷಣ ಮತ್ತು ರೈಲ್ವೆ ವಲಯದಲ್ಲಿ ವಿಶೇಷ ಸ್ಥಾನ ಪಡೆದಿದೆ.
ಮುಖ್ಯ ವಿಶೇಷತೆಗಳು:

- ರೈಲ್ವೆ ಕೇಂದ್ರ: ವಿಶ್ವದ ಅತಿ ಉದ್ದನೆಯ ರೈಲ್ವೆ ಪ್ಲಾಟ್‌ಫಾರ್ಮ್ ಹುಬ್ಬಳ್ಳಿ ನಿಲ್ದಾಣದಲ್ಲಿದೆ.
- ವಾಣಿಜ್ಯ ನಗರಿ: ಸುಮಾರು 100,000ಕ್ಕೂ ಹೆಚ್ಚು ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನು ಹೊಂದಿರುವ, ಹತ್ತಿ ಮತ್ತು ಕಡಲೆಕಾಯಿ ವ್ಯಾಪಾರಕ್ಕೆ ಪ್ರಸಿದ್ಧವಾದ ನಗರ.
- ಆಧ್ಯಾತ್ಮಿಕ ಕೇಂದ್ರ: ಸಿದ್ಧಾರೂಢ ಸ್ವಾಮಿ ಮಠ ಮತ್ತು ಮೂರುಸಾವಿರ ಮಠಗಳು ಇಲ್ಲಿನ ಪ್ರಮುಖ ಧಾರ್ಮಿಕ ಸ್ಥಳಗಳು.
- ಪ್ರವಾಸಿ ತಾಣಗಳು: ಉಣಕಲ್ ಕೆರೆ, ಚಂದ್ರಮೌಳೇಶ್ವರ ದೇವಾಲಯ ಮತ್ತು ನವಗ್ರಹ ತೀರ್ಥ.
- ಶೈಕ್ಷಣಿಕ ಮತ್ತು ಸಾಂಸ್ಕೃತಿಕ: ಅವಳಿ ನಗರವಾದ ಧಾರವಾಡದೊಂದಿಗೆ ಸೇರಿ, ಇದು ಸಾಹಿತ್ಯ ಮತ್ತು ಹಿಂದೂಸ್ತಾನಿ ಸಂಗೀತ ಪರಂಪರೆಗೆ ಹೆಸರುವಾಸಿಯಾಗಿದೆ.
ಉತ್ತರ ಕರ್ನಾಟಕದ ಆರ್ಥಿಕ ಚಟುವಟಿಕೆಗಳ ಬೆನ್ನೆಲುಬಾಗಿರುವ ಹುಬ್ಬಳ್ಳಿ, ಅಭಿವೃದ್ಧಿಶೀಲ ನಗರವಾಗಿ ಮುನ್ನುಗ್ಗುತ್ತಿದೆ. ಹುಬ್ಬಳ್ಳಿ ಗಂಡು ಮೆಟ್ಟಿನ ನಾಡು ಹುಬ್ಬಳ್ಳಿ ರಂಗಕಲೆಗೂ ಪ್ರಸಿದ್ದಿ. ಇಲ್ಲಿನ ರಂಗ ಕಲಾವಿದರು ರಾಜ್ಯ, ಹೊರ ರಾಜ್ಯದಲ್ಲಿಯೂ ಹೆಸರು ಮಾಡಿದವರು. ಒಂದು ಕಾಲದಲ್ಲಿ ಸಮೃದ್ಧವಾಗಿ ಮೆರೆದಿದ್ದ ರಂಗಭೂಮಿ ಆಧುನಿಕ ಭರಾಟೆಗೆ ಸಿಲುಕಿ ಗುಟುಕು ಜೀವ ಹಿಡಿದಿದೆ. ಕಲಾವಿದರಿಗೆ ಸುಸ್ಸಜ್ಜಿತ ರಂಗಮಂದಿರವಿಲ್ಲದೆ, ಪರದಾಡಬೇಕಾಗಿದೆ. ಅಲ್ಲದೆ, ರಂಗಭೂಮಿ ಕಲೆಗೆ ಆಶ್ರಯವಾಗಿದ್ದ ೭೦ ವರ್ಷಗಳಿಗೂ ಹಳೆಯದಾದ ಹುಬ್ಬಳ್ಳಿಯ ಟೌನ್ ಹಾಲ್ ಇದ್ದು ಇಲ್ಲದಂತಾಗಿದೆ.
೭೦ ವರ್ಷಗಳಿಗೂ ಹಳೆಯದಾದ ಹುಬ್ಬಳ್ಳಿಯ ಟೌನ್ ಹಾಲ್ ನವೀಕರಣ ಮಾಡಬೇಕು ಎಂಬ ಯೋಜನೆಯು ಕೇವಲ ಕಾಗದದ ಮೇಲೆ ಮಾತ್ರ ಉಳಿದಿದೆ. ೧೯೫೧ ರಲ್ಲಿ ಮೈಸೂರಿನ ರಾಜಪ್ರಮುಖ ಜಯಚಾಮರಾಜೇಂದ್ರ ಒಡೆಯರ್ ಬಹದ್ದೂರ್ ಅವರು ಟೌನ್ ಹಾಲ್ ಅನ್ನು ಉದ್ಘಾಟಿಸಿದ್ದರು. ಇಂತಹ ಒಂದು ಟೌನ್ ಹಾಲ್ ನಗರದ ಮಧ್ಯಭಾಗದಲ್ಲಿದ್ದರೂ ಉಪಯೋಗಕ್ಕೆ ಬಾರದಿರುವುದು ವಿಂಪರ್ಯಾಸವೇ ಸರಿ.
ಕೇವಲ ಒಂದು ಲಕ್ಷ ರೂಗಳಲ್ಲಿ ಅಂದು ನಿರ್ಮಾಣವಾಗಿದ್ದ ಟೌನ್ ಹಾಲ್ ಕಲಾವಿದರ ಪಾಲಿನ ಹಬ್ ಆಗಿತ್ತು. ನಿತ್ಯ ನಾಟಕಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುತ್ತಿದ್ದವು. ಆದರೆ ೨೦೧೭ ರಿಂದ ಕಟ್ಟಡದ ದುರಸ್ಥಿ ಕಾರಣ ಇಲ್ಲಿನ ರಂಗ ಚಟುವಟಿಕೆಗಳು ನಿಂತು ಹೋಗಿವೆ. ಇಡೀ ಕಟ್ಟಡದ ಅಲ್ಪ ಭಾಗ ಮಾತ್ರ ಮಹಾನಗರ ಪಾಲಿಕೆ ಬಳಸುತ್ತಿದ್ದು, ಉಳಿದ ಕಟ್ಟಡ ಉಪಯೋಗಕ್ಕೆ ಬಾರದಂತಾಗಿದೆ.
ಈಡೇರದ ನವೀಕರಣ ಕನಸು:
ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಬಳಸಲಾಗುತ್ತಿದ್ದ ಈ ಕಟ್ಟಡ ಅನೇಕ ಕಲಾವಿದರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಸಹಾಯ ಮಾಡಿದೆ. ಆದರೆ, ಆಳವಾದ ನಿದ್ರೆಯಲ್ಲಿರುವ ಚುನಾಯಿತ ಪ್ರತಿನಿಧಿಗಳು ಮತ್ತು ಅಧಿಕಾರಿಗಳ ಸ್ಪಷ್ಟ ನಿರ್ಲಕ್ಷ್ಯದಿಂದಾಗಿ ಟೌನ್ ಹಾಲ್ ತನ್ನ ಹೆಸರು ಮತ್ತು ಖ್ಯಾತಿಯನ್ನು ಕಳೆದುಕೊಂಡಿದೆ. ೨೦೧೭ ರಲ್ಲಿ ನವೀಕರಣದ ಕಾರಣ ಸಂಗೀತ ಕಾರ್ಯಕ್ರಮಗಳು ಮತ್ತು ರಂಗಭೂಮಿ ಚಟುವಟಿಕೆಗಳಂತಹ ಸಾಂಸ್ಕೃತಿಕ ಚಟುವಟಿಕೆಗಳನ್ನು ನಿಲ್ಲಿಸಲಾಯಿತು. ೨೦೨೨ ರಿಂದ ನವೀಕರಣ ಕಾರ್ಯಕ್ಕೆ ಮುಂದಾದರೂ ಅನುದಾನ ಬಾರದೇ ಇರುವುದರಿಂದ ಟೌನ್ ಹಾಲ್ ಮಾತ್ರ ಇದುವರೆಗೂ ಬಳಕೆಗೆ ಸಿದ್ಧವಾಗಿಲ್ಲ.
ರಂಗಭೂಮಿ ಕೊರತೆ…
ವೃತ್ತಿ ರಂಗಭೂಮಿ ಕಾಲವಿದರಿಗೆ ‘ಹುಬ್ಬಳ್ಳಿ’ ಹಾಲಿವುಡ್ ಇದ್ದ ಆಗಿತ್ತು. ರಾಜ್ಯದ ಯಾವುದೇ ಕಡೆಗೆ ಸೋತರು ಇಲ್ಲಿಗೆ ಬಂದು ಕ್ಯಾಂಪ್ ಹಾಕಿದರೆ ಹೆಸರು, ಹಣ ಮಾಡುತ್ತಿದ್ದ ಕಾಲವೊಂದಿತ್ತು. ಈಗ ಸುಸಜ್ಜಿತ ರಂಗಮಂದಿರಗಳ ಕೊರತೆಯಿಂದಾಗಿ ನಾಟಕ ಪ್ರದರ್ಶನ ಸಾಧ್ಯವಾಗದೆ ಕಲಾವಿದರು ಪರದಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಅಳಿದುಳಿದ ಕೆಲವೇ ಕೆಲವು ಕಲಾವಿದರು ಕಷ್ಟದಿಂದ ರಂಗಭೂಮಿ ಕ್ಷೇತ್ರವನ್ನು ಜೀವಂತವಾಗಿ ಇಡಲು ಇಂದಿಗೂ ಶ್ರಮಿಸುತ್ತಿದ್ದಾರೆ. ಆದರೆ ದುಬಾರಿ ವೆಚ್ಚದ ಬಾಡಿಗೆ, ಸ್ವತಂತ್ರವಾಗಿ ರಂಗಸಜ್ಜಿಕೆ ಹಾಕಲು ಬೇಕಾಗುವ ಆರ್ಥಿಕ ಸಂಪನ್ಮೂಲವಿಲ್ಲದೆ ಕೈಚೆಲ್ಲಿ ಕುಳಿತಿದ್ದಾರೆ. ಇದರಿಂದ ನಾಟಕ ಮಾಡುವ ಸಾಹಸಕ್ಕೆ ಹೋಗದೆ ಕೊರಗುವಂತೆ ಆಗಿದೆ. ಹುಬ್ಬಳ್ಳಿ ನಗರದ ಟೌನ್‌ಹಾಲ್ ರಂಗಮಂದಿರ ಮಾಡಲು ಸೂಕ್ತವಾದ ವೇದಿಕೆಯಾಗಿದೆ. ವಿಶ್ವೇಶ್ವರ ನಗರದ ಕನ್ನಡ ಭವನ, ಸವಾಯಿ ಗಂಧರ್ವ ಹಾಲ್ ದುಬಾರಿಯಾಗಿದೆ. ಬಾಡಿಗೆ ಕೊಟ್ಟರೂ ರಂಗ ಪರಿಕರ, ಧ್ವನಿ ವ್ಯವಸ್ಥೆ, ಮೈಕ್, ಲೈಟಿಂಗ್ ಬಾಡಿಗೆ ಪಡೆದೇ ಪ್ರದರ್ಶನ ನೀಡಬೇಕಿರುವುದರಿಂದ ಬಡ ಕಲಾವಿದರಿಗೆ ಅದು ಸಾಧ್ಯವಾಗುತ್ತಿಲ್ಲ.
ವೃತ್ತಿರಂಗ ಭೂಮಿ ಕ್ಷೇತ್ರ ಉಳಿಸಲು ಹಾಗೂ ಜೀವಂತವಾಗಿಡಲು ಸುಮಾರು ೫೦ ವರ್ಷ ಶ್ರಮಿಸಿದ್ದೇನೆ. ಉತ್ತಮ ರಂಗಮAದಿರ ಪಡೆಯಲು ಹೋರಾಟ ನಡೆದಿದೆ. ಈ ಹಿಂದೆ ಕಲಾವಿದರಿಗಾಗಿ ನಿವೇಶನಗಳನ್ನು ಕೊಡಿಸಿದ್ದೇವೆ. ಸಂಬಂಧಿಸಿದ ಇಲಾಖೆ ಕಲೆ ಕಲಾವಿದರನ್ನು ಉಳಿಸುವ ಜವಾಬ್ದಾರಿ ತೆಗೆದುಕೊಳ್ಳಬೇಕು. ಟೌನ್‌ಹಾಲ್ ಅಭಿವೃದ್ಧಿ ಪಡಿಸಿ ರಂಗಚಟುವಟಿಕೆಗೆ ನೀಡಬೇಕು.
-ಡಾ.ಗೋವಿಂದ ಮಣ್ಣೂರು ಹಿರಿಯ ರಂಗಕರ್ಮಿ
