ಧಾರವಾಡ
ಇಲ್ಲಿನ ಕುಮಾರೇಶ್ವರ ನಗರದ ಶ್ರೀಕರಿಯಮ್ಮ ದೇವಿ ದೇವಸ್ಥಾನ ನಿರ್ವಹಣಾ ಸಂಘವು ಶ್ರೀಕರಿಯಮ್ಮ ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ಸಂಗೀತ ನೃತ್ಯೋತ್ಸವ ಕಾರ್ಯಕ್ರಮ ದಿ. 26.10. 2026 ಸಂಜೆ 5:30ಕ್ಕೆ ಶ್ರೀಕರಿಯಮ್ಮ ದೇವಸ್ಥಾನದ ಆವರಣದಲ್ಲಿ ಆಯೋಜಿಸಲಾಗಿದೆ.
ಈ ಕಾರ್ಯಕ್ರಮವನ್ನು ಮಹಾನಗರ ಪಾಲಿಕೆ ಸದಸ್ಯ ಅನಿತಾ ಚಳಗೇರಿ ಉದ್ಘಾಟಿಸುವರು, ಶ್ರೀಕರಿಯಮ್ಮ ದೇವಸ್ಥಾನ ನಿರ್ವಹಣಾ ಸಂಘದ ಅಧ್ಯಕ್ಷ ಎನ್.ಬಿ. ಪಾಟೀಲ್, ಉಪಾಧ್ಯಕ್ಷ ಜೆ.ವಾಯ್. ತೋಟದ, ಕಾರ್ಯದರ್ಶಿ ಜಿ.ಎಂ. ಹುಲ್ಲೂರ ಉಪಸ್ಥಿತರಿರುವರು.
ಸಂಗೀತ ನೃತ್ಯೋತ್ಸವ ಕಾರ್ಯಕ್ರಮದಲ್ಲಿ ವಿದುಷಿ ಸುಜಾತಾ ಕಮ್ಮಾರ ಗುರವ, ವಿದುಷಿ ಭಾರ್ಗವಿ ಕುಲಕರ್ಣಿ ಅವರ ಭಕ್ತಿ ಸಂಗೀತ ಕಾರ್ಯಕ್ರಮ ಹಾಗೂ ದರ್ಬಾರ್ ಸಂಗೀತ ವಿದ್ಯಾಲಯ, ಲಯ ಫೌಂಡೇಶನ್ ವತಿಯಿಂದ ಸಂಗೀತ ಹಾಗೂ ನೃತ್ಯ ಕಾರ್ಯಕ್ರಮಗಳು ಜರುಗಲಿವೆ.
ದಿನಾಂಕ 27.10.2026ರಂದು ಮುಂಜಾನೆ 8.00 ಗಂಟೆಗೆ ಶ್ರೀಕರಿಯಮ್ಮ ದೇವಿಗೆ ಸುಮಂಗಲೆಯರಿಂದ ಉಡಿತುಂಬುವುದು, ದೇವಿಯ ಪಲ್ಲಕ್ಕಿ ಉತ್ಸವ ಹಾಗೂ ಮಧ್ಯಾಹ್ನ 1 ಗಂಟೆಗೆ ಅನ್ನಪ್ರಸಾದ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ದೇವಸ್ಥಾನ ಸಮಿತಿಯ ಪ್ರಭು ಹಿರೇಮಠ ತಿಳಿಸಿದ್ದಾರೆ.
