ಧಾರವಾಡ
ಡಾಟಾ ಸೈನ್ಸ್ ಮತ್ತು ಎಐ ತಂತ್ರಜ್ಞಾನದ ಬೆಳವಣಿಗೆಯಲ್ಲಿ ಸಂಖ್ಯಾಶಾಸ್ತ್ರದ ಕೊಡುಗೆ ಬಹಳ ಇದೆ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಸಂಖ್ಯಾಶಾಸ್ತ್ರದ ವಿಭಾಗದ ಮುಖ್ಯಸ್ಥ ಪ್ರೊ. ಎ.ಎಸ್. ತಳವಾರ ಅಭಿಪ್ರಾಯಪಟ್ಟರು.
ಕರ್ನಾಟಕ ಕಾಲೇಜಿನ ಸಂಖ್ಯಾಶಾಸ್ತ್ರ ವಿಭಾಗದ ವತಿಯಿಂದ ಬಿಸಿಎ ಸಭಾಂಗಣದಲ್ಲಿ ಆಯೋಜಿಸಿದ ಪ್ರಥಮ ವರ್ಷದ ಸಂಖ್ಯಾಶಾಸ್ತ್ರ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಮತ್ತು ಸಂಖ್ಯಾಶಾಸ್ತ್ರದ ಸ್ಟಡಿ ಸರ್ಕಲ್ ದ ‘ಸ್ಟ್ಯಾಟೋರಾ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಂಖ್ಯಾಶಾಸ್ತ್ರವು ದತ್ತಾಂಶಗಳ ವಿಶ್ಲೇಷಣೆ, ಕೃಷಿ ವಿಜ್ಞಾನ ಸಂಶೋಧನೆ, ವಿಮೆ, ಮಾರುಕಟ್ಟೆ ಸಂಶೋಧನೆ, ವೈದ್ಯಕೀಯ, ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನದ ಕ್ಷೇತ್ರದಲ್ಲಿ ಸಂಖ್ಯಾಶಾಸ್ತ್ರವನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಲಾಗುತ್ತದೆ. ತಂತ್ರಾಂಶದ ಅಭಿವೃದ್ಧಿಯಲ್ಲಿ ಸಂಖ್ಯಾಶಾಸ್ತ್ರದ ಮಹತ್ವದ ಪಾತ್ರ ವಹಿಸಿದೆ. ಸ್ಟಡಿ ಸರ್ಕಲ್ ಗಳ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಬೇಕು ಎಂದರು.
ಸ್ಟಡಿ ಸರ್ಕಲ್ ಗಳು ವಿದ್ಯಾರ್ಥಿಗಳು ನಾಯಕತ್ವ, ಸಂವಹನ ಕೌಶಲಗಳ ವೃದ್ಧಿಗೆ ಸ್ಟಡಿ ಸರ್ಕಲ್ ಗಳು ಬಹಳ ಸಹಕಾರಿಯಾಗಿವೆ. ಯಾವ ಕ್ಷೇತ್ರದಲ್ಲಿ ಸ್ಪರ್ಧೆ ಕಡಿಮೆ ಇದ್ದು, ಭವಿಷ್ಯತ್ತಿನಲ್ಲಿ ಅವಕಾಶವಿರುವ ವಿಷಯಗಳನ್ನು ಆಯ್ಕೆ ಮಾಡಿಕೊಳ್ಖುವದು ಇಂದಿನ ಅಗತ್ಯವಿದೆ ಎಂದ ಅವರು ಸಂಖ್ಯಾಶಾಸ್ತ್ರದ ವಿಭಾಗದ ಹಳೆಯ ವಿದ್ಯಾರ್ಥಿಗಳನ್ನು ಸ್ಟಡಿ ಸರ್ಕಲ್ ಚಟುವಟೆಕೆಗಳಲ್ಲಿ ಬಳಸಿಕೊಳ್ಳಬೇಕು ಎಂದರು.
ಸಂಖ್ಯಾಶಾಸ್ತ್ರದ ನಿವೃತ್ತ ಪ್ರಾಧ್ಯಾಪಕ ಪ್ರೊ. ಎಂ.ಎನ್. ಮ್ಯಾಗೇರಿ ಮಾತನಾಡಿ ವಿಭಾಗದ ಜೊತೆಗೆ ಅನ್ಯೋನ್ಯ ಸಂಬಂಧವನ್ನು ಹೊಂದಿದ್ದೆ ಕರ್ನಾಟಕ ಕಾಲೇಜಿನಲ್ಲಿ ಬೋಧನೆ ಮಾಡುವುದು ಒಂದು ಹೆಮ್ಮೆಯ ಸಂಗತಿ. ಉನ್ನತ ಹುದ್ದೆಗೆ ಏರಬೇಕು ಎಂಬುದು ಉತ್ಕಟ ಬಯಕೆ ಹೊಂದಿದ್ದರಿಂದ ಕರ್ನಾಟಕ ಕಾಲೇಜಿಗೆ ಆಯ್ಕೆಯಾದೆ. ಕರ್ನಾಟಕ ಕಾಲೇಜು ವಿದ್ಯಾರ್ಥಿಗಳಿಗೆ ಭವಿಷ್ಯವನ್ನು ರೂಪಿಸುವಲ್ಲಿ ತನ್ನದೇ ಕೊಡುಗೆ ನೀಡಿದೆ. ಸಂಖ್ಯಾಶಾಸ್ತ್ರದ ಅಧ್ಯಯನದಿಂದ ಸಂಶೋಧನೆ, ಬೋಧನೆಯಲ್ಲಿ ಖಾಸಗಿ ಕಂಪನಿಗಳಲ್ಲಿ ವಿಪುಲವಾದ ಅವಕಾಶಗಳು ಹೊಂದಿವೆ. ಸಂಖ್ಯಾಶಾಸ್ತ್ರದ ಸಮಾಜ ವಿಜ್ಞಾನ, ವಿಜ್ಞಾನ ತಂತ್ರಜ್ಞಾನ, ಸಾಹಿತ್ಯ ಭಾಷಾ ವಿಜ್ಞಾನದಲ್ಲಿ ಸಂಖ್ಯಾಶಾಸ್ತ್ರ ಬಳಸಲಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಕಲಾ ಕಾಲೇಜಿನಲ್ಲಿ ಪ್ರಾಚಾರ್ಯ ಪ್ರೊ. ಐ.ಸಿ. ಮುಳಗುಂದ ಮಾತನಾಡಿ, ಸ್ಟಡಿ ಸರ್ಕಲ್ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಬೇಕು. ಪ್ರೊ.ಮ್ಯಾಗೇರಿ ಅವರು ಸಂಖ್ಯಾಶಾಸ್ತ್ರ ವಿಭಾಗದಕ್ಕೆ ತಮ್ಮದೇ ಆದ ಸ್ಮರಣೀಯ ಸೇವೆ ಸಲ್ಲಿಸಿದ್ದಾರೆ.
780 ಕಾಲೇಜು ವಿಶ್ವವಿದ್ಯಾಲಯಗಳಲ್ಲಿ ಸಂಖ್ಯಾಶಾಸ್ತ್ರವನ್ನು ಬೋಧಿಸಲಾಗುತ್ತದೆ ಎಂದರು.
ಪ್ರಸ್ತುತ ಸಂಖ್ಯಾಶಾಸ್ತ್ರವನ್ನು ಹಣಕಾಸು, ವ್ಯವಹಾರ, ಸಂಶೋಧನೆ, ಯೋಜನೆಗಳನ್ನು ರೂಪಿಸಲು ಮತ್ತು ಯೋಜನೆಗಳ ನಿಖರತೆಯನ್ನು ತಿಳಿಯಲು ಸಂಖ್ಯಾಶಾಸ್ತ್ರವನ್ನು ಉಪಯೋಗಿಸಲಾಗುತ್ತದೆ ಎಂದರು.
ಕರ್ನಾಟಕ ಕಾಲೇಜಿನ ಸಂಖ್ಯಾಶಾಸ್ತ್ರದ ವಿಭಾಗದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಪ್ರೊ.ಎಂ.ಎನ್.ಮ್ಯಾಗೇರಿ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ
ಪ್ರಥಮ ವರ್ಷದ ಸಂಖ್ಯಾಶಾಸ್ತ್ರದ ವಿದ್ಯಾರ್ಥಿಗಳು ಅಭಿಪ್ರಾಯ ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಸಂಖ್ಯಾಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಕೀರ್ತಿ ಅಷ್ಠಗಿಮಠ, ಪ್ರಾಧ್ಯಾಪಕರಾದ ಡಾ ಶ್ರೀಶೈಲ ಗಣಿ, ಡಾ. ಶ್ರೀದೇವಿ ಹಾಲವರ, ಡಾ.ಭಿಮಣ್ಣ , ಡಾ. ಪ್ರಭಾಕರ ಕಾಂಬಳೆ
ಸೇರಿದಂತೆ ವಿದ್ಯಾರ್ಥಿಗಳು ಹಾಜರಿದ್ದರು
