ಮತದಾರರ ನೋಂದಣಿಗೆ ವಿಶೇಷ ಆಂದೋಲನ

ಹಂಚಿಕೊಳ್ಳಿ

ಧಾರವಾಡ
ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಧಾರವಾಡ ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ-2026ರ ಕಾರ್ಯವನ್ನು ಕೈಗೊಳ್ಳಲಾಗಿದ್ದು, ಸೆಪ್ಟೆಂಬರ್ 19 ಮತ್ತು 20, 2026 ರಂದು ಮತದಾರರ ನೋಂದಣಿ ಕುರಿತು ವಿಶೇಷ ಆಂದೋಲನ ಜರುಗಿಸಲಾಗುವುದು. ಎಲ್ಲ ಮತಗಟ್ಟೆಯಲ್ಲಿ ಬಿಎಲ್‍ಓ ಹಾಗೂ ಬಿಎಲ್‍ಎ ಅವರು ಉಪಸ್ಥಿತರಿದ್ದು, ಸಾರ್ವಜನಿಕರು ಸದರಿ ಆಂದೋಲನದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ಸ್ನೇಹಲ್ ಆರ್. ಹೇಳಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಭವನದಲ್ಲಿ ಗುರಿವಾತ ಆಯೋಜಿಸಿದ್ದ ಪತ್ರಿಕಾಗೋಷ್ಠಿ ಜರುಗಿಸಿ, ಮಾತನಾಡಿದರು.

ಜಿಲ್ಲೆಯಲ್ಲಿದ್ದ ಒಟ್ಟು 16,21,961 ಮತದಾರರ ಪೈಕಿ ಶೇ. 83.48 ರಷ್ಟು ಅಂದರೆ 13,53,946 ಮತದಾರರ ಮಾಹಿತಿ ಪರಿಶೀಲಿಸಿ ಕರಡು ಪಟ್ಟಿಗೆ ತರಲಾಗಿದೆ. ASSDOಪಟ್ಟಿಯಲ್ಲಿ ಮತದಾರರ ಪಟ್ಟಿಯ ಪರಿಶೀಲನೆ ಸಂದರ್ಭದಲ್ಲಿ ಗೈರು, ವಲಸೆ, ಮರಣ, ದ್ವಿಪ್ರತಿ, ಇತರೆ ವರ್ಗಕ್ಕೆ ಸೇರಿದ ಒಟ್ಟು 2,68,015 ಮತದಾರರನ್ನು ಗುರುತಿಸಲಾಗಿದೆ. ಈ ಪೈಕಿ ನವಲಗುಂದದಲ್ಲಿ 22,628, ಕುಂದಗೋಳದಲ್ಲಿ 19,078, ಧಾರವಾಡದಲ್ಲಿ 32,007, ಹುಬ್ಬಳ್ಳಿ-ಧಾರವಾಡ ಪೂರ್ವದಲ್ಲಿ 47,034, ಹುಬ್ಬಳ್ಳಿ-ಧಾರವಾಡ ಕೇಂದ್ರದಲ್ಲಿ 65,844, ಹುಬ್ಬಳ್ಳಿ-ಧಾರವಾಡ ಪಶ್ಚಿಮದಲ್ಲಿ 64,623 ಹಾಗೂ ಕಲಘಟಗಿಯಲ್ಲಿ 16,801 ಮತದಾರರು ಸೇರಿದ್ದಾರೆ. ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಸ್ತುತ 1,665 ಮತಗಟ್ಟೆಗಳಿದ್ದು, ಚುನಾವಣಾ ಆಯೋಗದ ಅನುಮೋದನೆಯಂತೆ ಒಟ್ಟು 1,707 ಮತಗಟ್ಟೆಗಳನ್ನು ಹೊಂದಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ನಮೂನೆ 6, 7 ಮತ್ತು 8 ಅರ್ಜಿಗಳ ಸ್ವೀಕೃತಗೊಂಡ ವಿವರ:
ಜಿಲ್ಲೆಯಲ್ಲಿ ಜುಲೈ 16, 2026 ರಿಂದ ಸೆಪ್ಟೆಂಬರ್ 15, 2026 ರ ವರೆಗೆ ಒಟ್ಟು 51,172 ಅರ್ಜಿಗಳು ಸ್ವೀಕೃತವಾಗಿದ್ದು, ಅದರಲ್ಲಿ ನವಲಗುಂದದಲ್ಲಿ 3,681, ಕುಂದಗೋಳದಲ್ಲಿ 3689, ಧಾರವಾಡದಲ್ಲಿ 8,637, ಹುಬ್ಬಳ್ಳಿ-ಧಾರವಾಡ ಪೂರ್ವದಲ್ಲಿ 9,582, ಹುಬ್ಬಳ್ಳಿ-ಧಾರವಾಡ ಕೇಂದ್ರದಲ್ಲಿ 10,310, ಹುಬ್ಬಳ್ಳಿ-ಧಾರವಾಡ ಪಶ್ಚಿಮದಲ್ಲಿ 10,962, ಕಲಘಟಗಿಯಲ್ಲಿ 4,311 ಅರ್ಜಿಗಳು ಸ್ವೀಕೃತವಾಗಿರುತ್ತದೆ.

ಯುವ ಮತದಾರರ ವಿವರ:
ಜಿಲ್ಲೆಯಲ್ಲಿ ಸೆಪ್ಟೆಂಬರ್ 16, 2026 ವರೆಗೆ ಒಟ್ಟು 7941 ಅಭ್ಯರ್ಥಿಗಳು ಯುವ ಮತದಾರರು ಸೇರ್ಪಡೆಗೊಂಡಿರುತ್ತಾರೆ. ನವಲಗುಂದ 1,159, ಕುಂದಗೋಳ 937, ಧಾರವಾಡ 1,174, ಹುಬ್ಬಳ್ಳಿ-ಧಾರವಾಡ ಪೂರ್ವ 1,206, ಹುಬ್ಬಳ್ಳಿ-ಧಾರವಾಡ ಕೇಂದ್ರ 991, ಹುಬ್ಬಳ್ಳಿ-ಧಾರವಾಡ ಪಶ್ಚಿಮ 1,053 ಹಾಗೂ ಕಲಘಟಗಿ 1,421 ಯುವ ಮತದಾರರು ಸೇರ್ಪಡೆಗೊಂಡಿರುತ್ತಾರೆ ಎಂದು ಹೇಳಿದರು.

ಹಕ್ಕು ಮತ್ತು ಆಕ್ಷೇಪಣೆಗಳ ವಿವರ:
ಜಿಲ್ಲೆಯಲ್ಲಿ ಅಗಸ್ಟ್ 29 ಮತ್ತು 30, 2026 ರಂದು ಜರುಗಿದ ಮತದಾರರ ನೋಂದಣಿ ವಿಶೇಷ ಆಂದೋಲನದಲ್ಲಿ ಒಟ್ಟು 3,343 ಹಕ್ಕು ಮತ್ತು ಆಕ್ಷೇಪಣೆಗಳ ಅರ್ಜಿಗಳು ಸ್ವೀಕೃತಗೊಂಡಿರುತ್ತವೆ.

ಸೆಪ್ಟೆಂಬರ್ 23, 2026 ರಂದು ಮುಕ್ತಾಯಗೊಳ್ಳುವ ಹಕ್ಕು ಮತ್ತು ಆಕ್ಷೇಪಣೆ ಅವಧಿಯಲ್ಲಿ ಸಂಬಂಧಿಸಿದ ಮತದಾರರ ನೋಂದಣಾಧಿಕಾರಿಗಳಿಗೆ, ಸಹಾಯಕ ಮತದಾರರ ನೋಂದಣಾಧಿಕಾರಿಗಳಿಗೆ, ಮತಗಟ್ಟೆ ಅಧಿಕಾರಿಗಳಿಗೆ ಮತ್ತು Voters Portal (voters.eci.gov.in)  ಅಥವಾ ECI NET MOBILE APPLICATION ದಲ್ಲಿ ಮತದಾರರ ಯಾದಿ ಸಮಗ್ರ ಪರಿಷ್ಕರಣೆ 2026 ನಿಮಿತ್ತ ಮತಗಟ್ಟೆ ಅಧಿಕಾರಿಗಳು ಮನೆ ಮೆನೆ ಭೇಟಿ ನೀಡಿ ಗಣತಿ ಕಾರ್ಯ ಕೈಗೊಂಡಾಗ ವಿಳಾಸದಲ್ಲಿ ಲಭ್ಯವಿಲ್ಲದ ಅರ್ಹ ಮತದಾರರು ಅಂದರೆ Absentee and Shifted ಮತದಾರರು ಹಾಗೂ ಭಾರತದ ಯಾವುದೇ ಪ್ರದೇಶದಲ್ಲಿ ಮತದಾರರಾಗಿ ನೋಂದಣಿಯಾಗದ ಮತ್ತು ಜಿಲ್ಲೆಯಲ್ಲಿ ಯಾವುದಾರರೂ ಮತ ಕ್ಷೇತ್ರದಲ್ಲಿ ಖಾಯಂ ರಹವಾಸಿಯಾಗಿರುವ ಅರ್ಹ ಮತದಾರರು ಹಾಗೂ ಅಗಸ್ಟ್ 24, 2026 ರಂದು ಪ್ರಸಿದ್ದಿ ಪಡಿಸಲಾದ ಕರಡು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿಯಾಗದೆ ಇರುವ ಅರ್ಹ ಮತದಾರರು ಹಾಗೂ ಅಕ್ಟೋಬರ್ 1, 2026 ಕ್ಕೆ 18 ವರ್ಷ ಪೂರ್ಣಗೂಳ್ಳುವ  ಅರ್ಹ ಮತದಾರರು ನಮೂನೆ-6 ದೊಂದಿಗೆ ನಿಗದಿತ ಘೋಷಣಾ ನಮೂನೆಯನ್ನು ಭರಣಾ ಮಾಡಿ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ ಮಾಡಲು ಅರ್ಜಿ ಸಲ್ಲಿಸಬಹುದಾಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಸೆಪ್ಟೆಂಬರ್ 16, 2026 ರವರೆಗೆ ವಿಧಾನಸಭಾ ಮತಕ್ಷೇತ್ರವಾರು ನೋಟಿಸ್‍ಗಳನ್ನು ತಯಾರಿಸಿದ, ನೋಟಿಸ್‍ಗಳನ್ನು ಮತದಾರರಿಗೆ ಪೂರೈಸಿದ್ದು, ನೋಟಿಸ್‍ಗಳನ್ನು ಪೂರೈಸಲು ಬಾಕಿ ಇರುವ, ಮತದಾರರನ್ನು ವಿಚಾರಣೆಗೆ ಕರೆಯುವ, ಕರೆದಿರುವ ವಿವರ:* ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯಡಿ ಜಿಲ್ಲೆಯಲ್ಲಿ ಇದುವರೆಗೆ 47,937 ನೋಟಿಸ್‍ಗಳನ್ನು ಜನರೇಟ್ ಮಾಡಲಾಗಿದ್ದು, ಅವುಗಳಲ್ಲಿ 41,114 ನೋಟಿಸ್‍ಗಳನ್ನು ಸಾರ್ವಜನಿಕರಿಗೆ ತಲುಪಿಸಲಾಗಿದೆ.

ಅಧಿಕಾರಿಗಳ ಮಾಹಿತಿ ಪ್ರಕಾರ, ನೋಟಿಸ್ ಪಡೆದವರಲ್ಲಿ 17,075 ಮತದಾರರ ಹಿಯರಿಂಗ್ ಪೂರ್ಣಗೊಂಡಿದೆ. 8,925 ಮತದಾರರು ಹಿಯರಿಂಗ್‍ಗೆ ಹಾಜರಾಗದ ಹಿನ್ನೆಲೆಯಲ್ಲಿ ಅವರಿಗೆ ಎರಡನೇ ಅವಕಾಶ ನೀಡಲಾಗುತ್ತಿದ್ದು, ಅಗತ್ಯ ದಾಖಲೆಗಳನ್ನು ಸಲ್ಲಿಸಿ, ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವಂತೆ ಸೂಚಿಸಲಾಗಿದೆ.

ಇದಲ್ಲದೆ, 6,231 ಪ್ರಕರಣಗಳನ್ನು ಬಾಕಿ ಇದ್ದು, 10,818 ಅರ್ಜಿಗಳನ್ನು ಅಂತಿಮ ನಿಯಮ ಪ್ರಕ್ರಿಯೆಗೆ ಕಳುಹಿಸಲಾಗಿದೆ. ಹಾಗೂ ಅಂತಿಮ ಪ್ರಕಟಣೆಗಾಗಿ ಒಟ್ಟು 11,19,627 ಮತದಾರರ ವಿವರಗಳನ್ನು  ಸಿದ್ಧಪಡಿಸಲಾಗಿದೆ ಎಂದು ಹೇಳಿದರು.

ಮತದಾರರ ಪಟ್ಟಿಗೆ ಸಂಬಂಧಿಸಿದ ಸಾರ್ವಜನಿಕರ ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸುವ ನಿಟ್ಟಿನಲ್ಲಿ ಸಹಾಯಕ ಮತದಾರರ ನೋಂದಣಿ ಅಧಿಕಾರಿಗಳ (AERO) ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲಾಗಿದೆ. ಈ ಹಿಂದೆ 67 ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದರೆ, ಪ್ರಸ್ತುತ ಹೆಚ್ಚುವರಿ ಸಹಾಯಕ ಮತದಾರರ ನೋಂದಣಿ ಅಧಿಕಾರಿಗಳು ಸೇರಿದಂತೆ ಒಟ್ಟು 78 ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ.

ಈ ಅಧಿಕಾರಿಗಳು ತಾಲೂಕು ಹಾಗೂ ನಗರ ವಾರ್ಡ್ ಮಟ್ಟದಲ್ಲಿ ಲಭ್ಯವಿದ್ದು, ಮತದಾರರ ಹೆಸರು ಸೇರ್ಪಡೆ, ತಿದ್ದುಪಡಿ, ಅಳಿಸುವಿಕೆ ಸೇರಿದಂತೆ ವಿವಿಧ ಸಮಸ್ಯೆಗಳ ಪರಿಹಾರಕ್ಕಾಗಿ ಸಾರ್ವಜನಿಕರು ಅಗತ್ಯ ದಾಖಲೆಗಳೊಂದಿಗೆ ಸಂಪರ್ಕಿಸಿ ಸೌಲಭ್ಯ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯ ನಂತರ ಎಲ್ಲ ರಾಜಕೀಯ ಪಕ್ಷಗಳ ಮುಖಂಡರ ಸಭೆ ಜರುಗಿಸಿ, ಮಾತನಾಡಿದರು.
ಈ ಸಂದರ್ಭದಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತ ಡಾ. ರುದ್ರೇಶ ಘಾಳಿ, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಸೇರಿದಂತೆ ಕಾಂಗ್ರೇಸ್ ಪಕ್ಷದ ಮುಖಂಡ ಪ್ರಕಾಶ ಹಳಿಯಾಳ, ಜೆ.ಡಿ.ಎಸ್ ಮುಖಂಡ ದೇವರಾಜ ಕಂಬಳಿ, ಬಿಎಸ್‍ಪಿ  ಮುಖಂಡ ರೇವಣಸಿದ್ದಪ್ಪ ಹೊಸಮನಿ ಹಾಗೂ ವಿವಿಧ ರಾಜಕೀಯ ಪಕ್ಷದ ಮುಖಂಡರು ಉಪಸ್ಥಿತರಿದ್ದರು.


ಹಂಚಿಕೊಳ್ಳಿ

Leave a Reply

Your email address will not be published. Required fields are marked *