ಧಾರವಾಡ
ಜೀವನದಲ್ಲಿ ಸಾಧಿಸುವ ಛಲ ಹೊಂದಿದಾಗ ಮಾತಗತ ಸಾಧನೆ ಮಾಡಲು ಸಾಧ್ಯ ಎಂದು ಕರ್ನಾಟಕ ವಿಶ್ವವಿದ್ಯಾಲಯ ಕುಲಪತಿ ಪ್ರೊ. ಎ.ಎಂ. ಖಾನ್ ಅಭಿಪ್ರಾಯಪಟ್ಟರು.
ಕರ್ನಾಟಕ ಕಾಲೇಜಿನ ಹಿಂದಿನ ವಿದ್ಯಾರ್ಥಿಗಳ ಸಂಘವು ಕರ್ನಾಟಕ ಕಲಾ ಕಾಲೇಜಿನ ಫ್ಯಾರನ್ ಸಭಾಂಗಣದಲ್ಲಿ ಆಯೋಜಿಸಿದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ಮತ್ತು ಪ್ರಮಾಣಪತ್ರಗಳನ್ನು ವಿತರಿಸಿ ಮಾತನಾಡಿದರು.
ವಿದ್ಯಾರ್ಥಿಗಳಲ್ಲಿ ಸಾಧನೆ ಮಾಡುವ ಪ್ರವೃತ್ತಿಯನ್ನು ಹೊಂದಬೇಕು. ಜೀವನದಲ್ಲಿ ಏನನ್ನಾದರೂ ಸಾಧಿಸುವ ಛಲವನ್ನು ಏಕಾಗ್ರತೆಯಿಂದ ಅಧ್ಯಯನದ ಮೂಲಕ ಸಾಧನೆ ಮಾಡಲು ಸಾಧ್ಯ. ಸಿಕ್ಕ ಅವಕಾಶಗಳನ್ನು ಸರಿಯಾಗಿ ಬೆಳೆಸಿಕೊಳ್ಳಬೇಕು, ಜೀವನದಲ್ಲಿ ಸವಾಲುಗಳನ್ನು ಎದುರಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೆ ಮಹತ್ವ ನೀಡಬೇಕು. ವಿದ್ಯಾರ್ಥಿಗಳಿಗೆ ಸಾಧನೆ ಮಾಡುವ ಹುಚ್ಚು ಇರಬೇಕು ಜೊತೆಗೆ ಹೃದಯದ ಒಳಗೆ ಸಾಧಿಸುವ ಕಿಚ್ಚನ್ನು ಹೊಂದಿರಬೇಕು. ಸಾಧನೆಗೆ ಪರಿಶ್ರಮದ ಅಗತ್ಯವಿದೆ ಎಂದರು.
ವಿದ್ಯಾರ್ಥಿಗಳು ಮೊಬೈಲ್ ಬಳಕೆ ಕಡಿಮೆ ಮಾಡಿ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಸತತ ಪ್ರಯತ್ನದಿಂದ ಗುರಿ ಮುಟ್ಟಲು ಸಾಧ್ಯವಿದೆ. ಮಾನಸಿಕ ದೈಹಿಕ ಆರೋಗ್ಯದ ಕಡೆಗೆ ವಿದ್ಯಾರ್ಥಿಗಳು ಗಮನ ಹರಿಸಬೇಕು. ಕಾಲೇಜಿನ ಬೆಳವಣಿಗೆಯಲ್ಲಿ ಹಳೆಯ ವಿದ್ಯಾರ್ಥಿಗಳ ಸಂಘದ ಪಾತ್ರ ಮತ್ತು ಸಲಹೆ ಬಹಳ ಅಗತ್ಯವಿದೆ ಎಂದ ಅವರು, ಕರ್ನಾಟಕ ಕಾಲೇಜಿನಲ್ಲಿ ಓದುವುದು ಒಂದು ಭಾಗ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಕಾಲೇಜಿನ ಹಿಂದಿನ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಡಾ.ಶಶಿಧರ ನರೇಂದ್ರ ಮಾತನಾಡಿ, ಕರ್ನಾಟಕ ಕಾಲೇಜು ಅತಿದೊಡ್ಡ ಜ್ಞಾನ ಪರಂಪರೆಯನ್ನು ಹೊಂದಿದೆ. ಹಿಂದಿನಿಂದಲೂ ಕರ್ನಾಟಕ ಕಾಲೇಜು ಕ್ರೀಡೆ ಮತ್ತು ಎನ್.ಸಿ.ಸಿ.ಯಲ್ಲಿ ಮಹತ್ವದ ಸಾಧನೆ ಮಾಡುತ್ತಲಿದೆ ಎಂದ ಅವರು ಕರ್ನಾಟಕ ಕಾಲೇಜು ದೇಶದಲ್ಲೇ ಅತಿದೊಡ್ಡ ಪರಂಪರೆಯನ್ನು ಹೊಂದಿದ ಕಾಲೇಜು ಕರ್ನಾಟಕ ಕಾಲೇಜಿನಲ್ಲಿ ಅತಿ ಧೀಮಂತ ಪ್ರಾಧ್ಯಾಪಕರನ್ನು ಹೊಂದಿತ್ತು ಎಂದು ಸ್ಮರಿಸಿದರು.
2023-24 ಮತ್ತು 2024-25 ನೇ ಸಾಲಿನ ಬಿ.ಎ, ಬಿ.ಕಾಮ್, ಬಿ.ಕಾಮ್.ಸಿ.ಎಸ್, ಬಿ.ಎಸ್ಸಿ, ಬಿ.ಬಿ.ಎ, ಬಿ.ಸಿ.ಎ, ಬಿ.ಎಸ್.ಡಬ್ಲು ಪದವಿಯಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಡಾ.ಸಿ.ಎಸ್, ಕಡ್ಡಿಪುಡಿ, ವಿದ್ಯಾ ನಿಲಕೇಣಿ ಆಚಾರ್ಯ, ಶಂಕ್ರಪ್ಪ ಶಿರಿಯಣ್ಣವರ, ಪ್ರೊ.ಎಂ.ಎನ್.ಜೋಶಿ ಅವರ ಹೆಸರಿನ ದತ್ತಿ ನಗದು ಪುರಸ್ಕಾರ ಪ್ರಮಾಣ ಪತ್ರಗಳನ್ನು ವಿದ್ಯಾರ್ಥಿಗಳಿಗೆ ಪ್ರೊ. ಎ.ಎಂ.ಖಾನ್ ವಿವರಿಸಿದರು.
ಕರ್ನಾಟಕ ಕಲಾ ಕಾಲೇಜಿನ ಪ್ರಾಚಾರ್ಯ ಡಾ.ಐ.ಸಿ. ಮುಳಗುಂದ, ಕರ್ನಾಟಕ ವಿಜ್ಞಾನ ಕಾಲೇಜಿನ ಪ್ರಾಚಾರ್ಯ ಡಾ.ಎಂ.ಎಸ್. ಸಾಳುಂಕೆ, ಕರ್ನಾಟಕ ಕಾಲೇಜಿನ ಹಿಂದಿನ ವಿದ್ಯಾರ್ಥಿಗಳ ಸಂಘದ ಉಪಾಧ್ಯಕ್ಷ ಪ್ರೊ. ಎನ್.ಆರ್. ಬಾಳಿಕಾಯಿ, ಕಾರ್ಯಧ್ಯಕ್ಷ ಡಾ.ಬಿ.ಎಚ್. ನಾಗೂರ, ಕಾರ್ಯದರ್ಶಿಗಳಾದ ಡಾ.ಮುಕುಂದ ಲಮಾಣಿ, ಡಾ. ಸ್ಟೆಲ್ಲಾ ಸ್ಟೀವನ್, ಡಾ.ಜೋನ್ ಮಾಡ್ತಾ, ಪ್ರೊ. ಗುರುಪ್ರಸಾದ ಹೆಗಡೆ, ಗುರುರಾಜ ಜಮಖಂಡಿ, ಡಾ. ಜಿನದತ್ತ ಹಡಗಲಿ, ಶಿ.ಗು. ಹಿರೇಮಠ, ಪಾರ್ವತಿ ಹಾಲಬಾವಿ, ಡಾ. ಬಿ.ಬಿ. ಬಿರಾದರ ಸೇರಿದಂತೆ ವಿದ್ಯಾರ್ಥಿಗಳು ಪ್ರಾಧ್ಯಾಪಕರು ಹಾಜರಿದ್ದರು.
