ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಸಂಕನೂರಗೆ ಹ್ಯಾಟ್ರಿಕ್ ಗೆಲುವು!

9,323 ಮತಗಳ ಅಂತರದಲ್ಲಿ ಜಯಭೇರಿ; ಮೊದಲ ಪ್ರಾಶಸ್ತ್ಯದ ಮತಗಳಲ್ಲೇ ಗೆಲುವಿನ ಮುದ್ರೆ ಧಾರವಾಡಕರ್ನಾಟಕ ವಿಧಾನ ಪರಿಷತ್ತಿನ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎಸ್.ವಿ. ಸಂಕನೂರ ಅವರು ಮತ್ತೊಮ್ಮೆ ಗೆಲುವಿನ ನಗೆ ಬೀರಿದ್ದಾರೆ. ಮೊದಲ ಪ್ರಾಶಸ್ತ್ಯದ ಮತಗಳ ಎಣಿಕೆಯಲ್ಲಿಯೇ ಸ್ಪಷ್ಟ ಮುನ್ನಡೆ ಕಾಯ್ದುಕೊಂಡ ಸಂಕನೂರ, ಕಾಂಗ್ರೆಸ್ ಅಭ್ಯರ್ಥಿ ಮೋಹನ ಲಿಂಬಿಕಾಯಿ ಅವರನ್ನು 9,323 ಮತಗಳ ಅಂತರದಿಂದ ಸೋಲಿಸಿ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ. ಈ ಮೂಲಕ ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ತಮ್ಮ ರಾಜಕೀಯ ಪ್ರಾಬಲ್ಯವನ್ನು ಮುಂದುವರಿಸಿದ್ದಾರೆ. ಆರಂಭದಿಂದಲೇ…

Read More

ಪಶ್ಚಿಮ ಪದವೀಧರ ಕ್ಷೇತ್ರ: ಹ್ಯಾಟ್ರಿಕ್ ಗೆಲುವಿನ ಹೊಸ್ತಿಲಲ್ಲಿ ಸಂಕನೂರ

ನಾಲ್ಕನೇ ಸುತ್ತಿನಲ್ಲಿಯೂ ಬಿಜೆಪಿ ಅಭ್ಯರ್ಥಿಗೆ ಮುನ್ನಡೆ; ಕೃಷಿ ವಿವಿ ಆವರಣದಲ್ಲಿ ಸಂಭ್ರಮಾಚರಣೆ ಧಾರವಾಡಕರ್ನಾಟಕ ವಿಧಾನ ಪರಿಷತ್ತಿನ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯ ಮತ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಎಸ್.ವಿ. ಸಂಕನೂರ ಅವರು ಸತತ ನಾಲ್ಕನೇ ಸುತ್ತಿನಲ್ಲಿಯೂ ಮುನ್ನಡೆ ಕಾಯ್ದುಕೊಂಡಿದ್ದು, ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆ ಹೆಚ್ಚಿಸಿದೆ. ನಾಲ್ಕನೇ ಸುತ್ತಿನ ಮತ ಎಣಿಕೆಯಲ್ಲಿ ಸಂಕನೂರ ಅವರು 6,527 ಮತಗಳನ್ನು ಪಡೆದರೆ, ಕಾಂಗ್ರೆಸ್ ಅಭ್ಯರ್ಥಿ ಮೋಹನ್ ಲಿಂಬಿಕಾಯಿ ಅವರಿಗೆ 4,714 ಮತಗಳು ಲಭಿಸಿವೆ. ಈ ಮೂಲಕ ಸಂಕನೂರ ಅವರು 1,813 ಮತಗಳ…

Read More

ಅಭಿಷೇಕ್ ಶರ್ಮಾ-ವೈಭವ್ ಸೂರ್ಯವಂಶಿ ಜುಗಲಬಂದಿ, ಟಿ೨೦ ವಿಶ್ವ ಪವರ್ ಪ್ಲೇ’ ದಾಖಲೆ ಪುಡಿಪುಡಿ

• ರಘುಸುತವೆಲ್ಲಿಂಗ್ಟನ್ಅಭಿಷೇಕ್ ಶರ್ಮಾ ಹಾಗೂ ಹದಿಹರೆಯದ ವೈಭವ್ ಸೂರ್ಯವಂಶಿ ಅವರ ಹೊಸ ಜೋಡಿ ಮಂಗಳವಾರ ನಡೆದ ನ್ಯೂಜಿಲೆಂಡ್ ಎದುರಿನ ಮುರನೇ ಟಿ೨೦ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯದಲ್ಲಿ ಅಕ್ಷರಶಃ ರಣಕೇಕೆ ಹಾಕಿದೆ. ಮೊದಲ ಎಸೆತದಿಂದಲೇ ಕೀವೀಸ್ ಬೌಲರ್‌ಗಳನ್ನು ಮನಬಂದಂತೆ ಚೆಂಡಾಡಿದ ಈ ಜೋಡಿ ಹಲವು ವಿಶ್ವ ದಾಖಲೆಗಳನ್ನು ಪುಡಿಪುಡಿ ಮಾಡಿದೆ. ಅದರಲ್ಲೂ ಟಿ೨೦ ಅಂತಾರಾಷ್ಟ್ರೀಯ ಪಂದ್ಯವೊಂದರಲ್ಲಿಯ ವಿಶ್ವಪವರ್ ಪ್ಲೇ’ ದಾಖಲೆ ಹೇಳಹೆಸರಿಲ್ಲದಂತೆ ನುಚ್ಚುನೂರಾಗಿದೆ. ನ್ಯೂಜಿಲೆಂಡ್ ದಾಳಿಯೆದುರು ಮಂಗಳವಾರ ಅಭಿಷೇಕ್-ವೈಭವ್ ಬ್ಯಾಟಿನಿಂದ ಮೊದಲ ೬ ಓವರ್‌ಗಳಲ್ಲಿ ಹರಿದಿದ್ದು ಬರೋಬ್ಬರಿ ೧೧೮…

Read More

ಈಶಾನ್ಯ ಶಿಕ್ಷಕರ ಕ್ಷೇತ್ರ ಚುನಾವಣೆ: ಪ್ರಥಮ ಪ್ರಾಶಸ್ತ್ಯ ಮತ ಎಣಿಕೆಯಲ್ಲಿಯೆ ಬಿ.ಜೆ.ಪಿ. ಅಭ್ಯರ್ಥಿ ಶಶೀಲ್ ಜಿ. ನಮೋಶಿ ಗೆಲುವು

ಕಲಬುರಗಿಈಶಾನ್ಯ ಶಿಕ್ಷಕರ ಕ್ಷೇತ್ರ ಚುನಾವಣೆಯ ಮತ ಎಣಿಕೆ ಕಾರ್ಯ ಮಂಗಳವಾರ ಗುಲಬರ್ಗಾ ವಿಶ್ವವಿದ್ಯಾಲಯ ಗಣಿತ ವಿಭಾಗದ ಭಾಸ್ಕರ್ ಹಾಲ್ ನಲ್ಲಿ ಶಾಂತಿಯುತವಾಗಿ ಜರುಗಿದ್ದು, ಪ್ರಥಮ ಪ್ರಾಶಸ್ತ್ಯ ಮತ ಎಣಿಕೆಯಲ್ಲಿಯೇ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಶಶೀಲ್ ಜಿ. ನಮೋಶಿ ಅವರು ವಿನ್ನಿಂಗ್ ಕೋಟಾಕ್ಕಿಂತ 1,415 ಮತಗಳು ಹೆಚ್ಚು ಪಡೆಯುವ ಮೂಲಕ ಸತತ ಎರಡನೇ ಬಾರಿ ಗೆಲುವು ಸಾಧಿಸಿದ್ದಾರೆ. ಕ್ಷೇತ್ರದ ಒಟ್ಟು 34,784 ಮತದಾರರ ಪೈಕಿ ಚಲಾವಣೆಯಾದ 30,253 ಮತಗಳ ಪ್ರಥಮ‌ ಪ್ರಾಶಸ್ತ್ಯ ಮತ ಎಣಿಕೆ ಕಾರ್ಯ ಒಟ್ಟು…

Read More

ಪಶ್ಚಿಮ ಪದವೀಧರರ ಕ್ಷೇತ್ರ: ಮೂರನೇ ಸುತ್ತಿನಲ್ಲೂ ಸಂಕನೂರಗೆ ಮುನ್ನಡೆ

ಮೂರನೇ ಸುತ್ತಿನಲ್ಲಿ 1,396 ಮತಗಳ ಮುನ್ನಡೆ; ಬಿಜೆಪಿ ಪಾಳಯದಲ್ಲಿ ವಿಶ್ವಾಸ ಹೆಚ್ಚಳ ಧಾರವಾಡಕರ್ನಾಟಕ ವಿಧಾನ ಪರಿಷತ್ತಿನ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯ ಮತ ಎಣಿಕೆಯ ಮೂರನೇ ಸುತ್ತಿನಲ್ಲಿಯೂ ಬಿಜೆಪಿ ಅಭ್ಯರ್ಥಿ ಎಸ್.ವಿ. ಸಂಕನೂರ ಅವರು ಮುನ್ನಡೆ ಕಾಯ್ದುಕೊಂಡಿದ್ದಾರೆ. ಮೂರನೇ ಸುತ್ತಿನಲ್ಲಿ ಎಣಿಕೆಯಾದ ಒಟ್ಟು 14,000 ಮತಗಳಲ್ಲಿ ಬಿಜೆಪಿ ಅಭ್ಯರ್ಥಿ ಎಸ್.ವಿ. ಸಂಕನೂರ ಅವರು 6,191 ಮತಗಳನ್ನು ಪಡೆದರೆ, ಕಾಂಗ್ರೆಸ್ ಅಭ್ಯರ್ಥಿ ಮೋಹನ ಲಿಂಬಿಕಾಯಿ ಅವರು 4,795 ಮತಗಳನ್ನು ಗಳಿಸಿದ್ದಾರೆ. ಈ ಮೂಲಕ ಸಂಕನೂರ ಅವರು ಮೂರನೇ ಸುತ್ತಿನಲ್ಲಿ…

Read More

ವೈಷ್ಣವಿ ಅರ್ಧ ಶತಕ, ಬೌಲಿಂಗಿನಲ್ಲಿ ಮಿಂಚಿದ ಮಾಯಕ್ಕಾ, ಸಹನಾ; ಧಾರವಾಡ ವಲಯಕ್ಕೆ ಸತತ ೨ನೇ ಗೆಲುವು

ಬೆಂಗಳೂರುನಾಯಕಿ ವೈಷ್ಣವಿ ಹೊಸಳ್ಳಿ ಅವರ ಎರಡನೇ ಅರ್ಧ ಶತಕ ಹಾಗೂ ಮಾಯಕ್ಕಾ ಕೊರವಿ ಮತ್ತು ಸಹನಾ ರಾಮದುರ್ಗ ಅವರುಗಳ ಮಾರಕ ಬೌಲಿಂಗ್ ನೆರವಿನಿಂದ ಧಾರವಾಡ ವಲಯ ತಂಡ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆ.ಎಸ್.ಸಿ.ಎ.) ಆಶ್ರಯದಲ್ಲಿ ನಡೆದಿರುವ ೧೫ ವರ್ಷದವರೊಳಗಿನ ಬಾಲಕಿಯರ ಗ್ರಾಮೀಣ ಅಂತರ-ವಲಯ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸತತ ಎರಡನೇ ಗೆಲುವು ದಾಖಲಿಸಿತು. ನಗರದ ಹೊರ ವಲಯದಲ್ಲಿರುವ ಆಲೂರು-೨(ಗೋಲ್ಡನ್ ಓವಲ್) ಮೈದಾನದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಧಾರವಾಡ ವಲಯ ನಿಗದಿತ ೩೦ ಓವರ್‌ಗಳಲ್ಲಿ ೬ ವಿಕೆಟ್‌ಗಳಿಗೆ…

Read More

ರಣಜಿ: ರೋಹನ್, ಅನೀಶ್, ಕರುಣ್ ಅರ್ಧ ಶತಕ, ಕರ್ನಾಟಕಕ್ಕೆ ತ್ರಿಪುರಾ ಎದುರು ಇನ್ನಿಂಗ್ಸ್ ಮುನ್ನಡೆ

ಮೈಸೂರುರೋಹನ್ ಪಾಟೀಲ, ಕೆ.ವಿ. ಅನೀಶ ಹಾಗೂ ಅನುಭವಿ ಕರುಣ್ ನಾಯರ್ ಸಮಯೋಚಿತ ಅರ್ಧ ಶತಕಗಳನ್ನು ದಾಖಲಿಸುವುದರೊಂದಿಗೆ ಆತಿಥೇಯ ಕರ್ನಾಟಕ ತಂಡ, ತ್ರಿಪುರಾ ಎದುರು ಇಲ್ಲಿ ನಡೆದಿರುವ ಎಲೀಟ್ ಗುಂಪಿನ ರಣಜಿ ಲೀಗ್ ಪಂದ್ಯದಲ್ಲಿ ಮಹತ್ವದ ಮೊದಲ ಸರದಿಯ ಮುನ್ನಡೆ ಸಾಧಿಸಿದೆ. ರೋಹನ್ ಪಾಟೀಲ(೭೨, ೧೩೦ ಎಸೆತ, ೯ ಬೌಂಡರಿ), ಕೆ.ವಿ. ಅನೀಶ್(೬೮, ೧೪೨ ಎಸೆತ, ೬ ಬೌಂಡರಿ) ಹಾಗೂ ಕರುಣ್ ನಾಯರ್(೬೩, ೮೫ ಎಸೆತ, ೮ ಬೌಂಡರಿ) ಅವರುಗಳ ಅರ್ಧ ಶತಕಗಳ ನೆರವಿನಿಂದ ಕರ್ನಾಟಕ ಇಲ್ಲಿಯ ಎಸ್.ಡಿ.ಎನ್.ಆರ್.ಡಬ್ಲ್ಯೂ….

Read More

ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ ಐದನೇ ಬಾರಿಗೆ ಶಶೀಲ್ ನಮೋಶಿ ಗೆಲುವು

ಮೊದಲ ಸುತ್ತಿನಿಂದಲೇ ಮುನ್ನಡೆ, ಎರಡನೇ ಸುತ್ತಿನಲ್ಲಿ 3,232 ಮತಗಳ ಅಂತರದ ಜಯ ಕಲಬುರಗಿಕರ್ನಾಟಕ ವಿಧಾನ ಪರಿಷತ್ತಿನ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಶಶೀಲ್ ನಮೋಶಿ ಐದನೇ ಬಾರಿಗೆ ಗೆಲುವು ಸಾಧಿಸುವ ಮೂಲಕ ತಮ್ಮ ರಾಜಕೀಯ ಪ್ರಾಬಲ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಮೊದಲ ಸುತ್ತಿನಿಂದಲೇ ಮುನ್ನಡೆ ಕಾಯ್ದುಕೊಂಡ ಅವರು, ಎರಡನೇ ಸುತ್ತಿನ ಅಂತ್ಯಕ್ಕೆ ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಮಟ್ಟೂರು ಅವರ ವಿರುದ್ಧ 3,232 ಮತಗಳ ಅಂತರದ ಮುನ್ನಡೆ ದಾಖಲಿಸಿ ಗೆಲುವಿನ ನಗೆ ಬೀರಿದರು. ಇಲ್ಲಿನ ಗುಲಬರ್ಗಾ ವಿಶ್ವವಿದ್ಯಾಲಯದ…

Read More

ಆಚಾರ್ಯ ಪರಂಪರೆಯಿಂದ ಸನಾತನ ಧರ್ಮ ಸಂರಕ್ಷಣೆ ಸಾಧ್ಯ

ವೀರಶೈವ ಧರ್ಮದ ಕಾಶಿ ಜ್ಞಾನ ಪೀಠಕ್ಕೆ ಮಂತ್ರಾಲಯದ ಶ್ರೀಸುಬುಧೇಂದ್ರತೀರ್ಥ ಶ್ರೀಪಾದಂಗಳ ಭೇಟಿ ವಾರಾಣಸಿ(ಉ.ಪ್ರ.)ದೇವಭೂಮಿ ಭಾರತದ ಎಲ್ಲ ಆಚಾರ್ಯ ಪರಂಪರೆಗಳು ಒಂದಾಗಿ ಧರ್ಮ ಜಾಗೃತಿ ಕೈಂಕರ್ಯಗಳಲ್ಲಿ ಭಾವನಾತ್ಮಕ ಒಗ್ಗೂಡುವಿಕೆಯಿಂದ ಮಾತ್ರ ಭಾರತದ ಸನಾತನ ಧರ್ಮ ಸಂಸ್ಕೃತಿ ಸಂರಕ್ಷಣೆ ಸಾಧ್ಯವಾಗುತ್ತದೆ ಎಂದು ಶ್ರೀಮಧ್ವಚಾರ್ಯ ಪರಂಪರೆಯ ಮಂತ್ರಾಲಯ ಶ್ರೀರಾಘವೇಂದ್ರಸ್ವಾಮಿಗಳ ಮಠದ ಪೀಠಾಧಿಪತಿಗಳಾದ ಶ್ರೀಸುಬುಧೇಂದ್ರತೀರ್ಥ ಶ್ರೀಪಾದಂಗಳು ಅಭಿಪ್ರಾಯಪಟ್ಟರು. ಉತ್ತರಪ್ರದೇಶದ ಅಯೋಧ್ಯೆಯ ಶ್ರೀರಾಮಮಂದಿರ ದರ್ಶನಾರ್ಥ ಕೈಕೊಂಡ ಧರ್ಮಯಾತ್ರೆಯ ಸಂದರ್ಭದಲ್ಲಿ ಇಲ್ಲಿಯ ವೀರಶೈವ ಧರ್ಮದ ಪಂಚಪೀಠಗಳಲ್ಲಿ ಒಂದಾದ ಶ್ರೀಕಾಶಿ ಜ್ಞಾನ ಪೀಠದ ಪರಿಸರದಲ್ಲಿ ವಾಸ್ತವ್ಯಗೈದು ಮಂಗಳವಾರ…

Read More

ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆ: ಬಿಜೆಪಿ ಅಭ್ಯರ್ಥಿ ಸಂಕನೂರ 2ನೇ ಸುತ್ತಿನಲ್ಲೂ ಮುನ್ನಡೆ

ಧಾರವಾಡಕರ್ನಾಟಕ ವಿಧಾನ ಪರಿಷತ್ತಿನ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆ-2026ರ ಮತ ಎಣಿಕೆ ಪ್ರಕ್ರಿಯೆ ಮುಂದುವರಿದಿದ್ದು, ಎರಡನೇ ಸುತ್ತಿನ ಮತ ಎಣಿಕೆ ಮುಕ್ತಾಯಗೊಂಡಿದೆ. ಎರಡನೇ ಸುತ್ತಿನಲ್ಲಿಯೂ ಬಿಜೆಪಿ ಅಭ್ಯರ್ಥಿ ಮುನ್ನಡೆ ಕಾಯ್ದುಕೊಂಡಿದ್ದು, ಎರಡನೇ ಸುತ್ತಿನಲ್ಲಿ ಬಿಜೆಪಿ ಅಭ್ಯರ್ಥಿ ಎಸ್.ವಿ. ಸಂಕನೂರ 6,161 ಮತಗಳನ್ನು ಪಡೆದರೆ, ಕಾಂಗ್ರೆಸ್ ಅಭ್ಯರ್ಥಿ ಮೋಹನ ಲಿಂಬಿಕಾಯಿ ಅವರು 4,697 ಮತಗಳನ್ನು ಪಡೆದಿದ್ದಾರೆ. ಈ ಸುತ್ತಿನಲ್ಲಿಯೂ ಬಿಜೆಪಿ ಅಭ್ಯರ್ಥಿ 1,464 ಮತಗಳ ಮುನ್ನಡೆ ಸಾಧಿಸಿದ್ದಾರೆ. ಮೊದಲ ಮತ್ತು ಎರಡನೇ ಸುತ್ತಿನ ಮತ ಎಣಿಕೆಯನ್ನು ಒಟ್ಟುಗೂಡಿಸಿದರೂ ಕೂಡಾ…

Read More