ಕೆ.ಇ. ಬೋರ್ಡಿನ ನೂತನ ಕಾರ್ಯಾಧ್ಯಕ್ಷರಾಗಿ ಡಾ. ಕೃಷ್ಣ ಕುಲಕರ್ಣಿ

ಹಂಚಿಕೊಳ್ಳಿ

ಧಾರವಾಡ
ಯುವ ಉದ್ಯಮಿ ಡಾ. ಕೃಷ್ಣ ಕುಲಕರ್ಣಿ ನಗರದ ಪ್ರತಿಷ್ಠಿತ ವಿದ್ಯಾ ಸಂಸ್ಥೆ ಕರ್ನಾಟಕ ಎಜ್ಯುಕೇಶನ್ ಬೋರ್ಡಿನ ನೂತನ ಕಾಯಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

ಕಳೆದ ಎರಡು ಅವಧಿಗಳಿಂದ ಕಾಯಾಧ್ಯಕ್ಷರಾಗಿದ್ದ ಖ್ಯಾತ ನ್ಯಾಯವಾದಿ ಶ್ರೀಕಾಂತ ಪಾಟೀಲ ಅವರಿಂದ ಅಧಿಕಾರ ವಹಿಸಿಕೊಂಡಿರುವ ಡಾ. ಕೃಷ್ಣ ಕುಲಕರ್ಣಿ ಅವರ ಅಧಿಕಾರಾವಧಿ ೨೦೨೮-೨೯ರವರೆಗೂ ಇರಲಿದೆ. ನಿವೃತ್ತ ಪ್ರಾಧ್ಯಾಪಕ ಡಾ. ರಾಘವೇಂದ್ರ ಕಟ್ಟಿ ಅವರು ಕಳೆದೆರಡು ಅವಧಿಗಳಿಂದ ಕಾರ್ಯದರ್ಶಿಗಳಾಗಿದ್ದ ಡಿ.ಎಸ್. ರಾಜಪುರೋಹಿತ ಅವರ ಸ್ಥಾನದಲ್ಲಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಕೆನರಾ ಬ್ಯಾಂಕಿನ ನಿವೃತ್ತ ವ್ಯವಸ್ಥಾಪಕ ರಾಜೀವ ದೀಕ್ಷಿತ ಈಗ ಕೆ.ಇ. ಬೋರ್ಡಿನ ನೂತನ ಖಜಾಂಚಿಗಳು.

೨೦೨೬-೨೭ ರಿಂದ ೨೦೨೮-೨೯ರ ಅವಧಿಗೆ ಸರ್ವಾನುಮತದಿಂದ ಆಯ್ಕೆಯಾದ ಕೆ.ಇ. ಬೋರ್ಡಿನ ನೂತನ ಆಡಳಿತ ಮಂಡಳಿ ಇಂತಿದೆ. ಡಾ. ಕೃಷ್ಣ ಕುಲಕರ್ಣಿ(ಕಾಯಾಧ್ಯಕ್ಷರು), ಡಾ. ರಾಘವೇಂದ್ರ ಕಟ್ಟಿ(ಕಾರ್ಯದರ್ಶಿಗಳು), ರಾಜೀವ ದೀಕ್ಷಿತ(ಖಜಾಂಚಿಗಳು), ಶ್ರೀಕಾಂತ ಪಾಟೀಲ, ಎನ್.ಎಸ್. ಕುಲಕರ್ಣಿ, ಡಾ. ಸುನೀತ ಜಿ. ಪುರೋಹಿತ, ಗೋವರ್ಧನ ಭಟ್, ಅರುಣ ಬಳ್ಳಾರಿ, ಆನಂದ ಕುಲಕರ್ಣಿ, ವಿಷ್ಣು ಹುಕ್ಕೇರಿ ಹಾಗೂ ಶ್ರೀಧರ ಉದಗಟ್ಟಿ(ಎಲ್ಲರೂ ಕಾರ್ಯಕಾರಿ ಸಮಿತಿ ಸದಸ್ಯರು).


ಹಂಚಿಕೊಳ್ಳಿ

Leave a Reply

Your email address will not be published. Required fields are marked *