
ಧಾರವಾಡ: ಗಣೇಶ ಚತುರ್ಥಿಯ ಸಂಭ್ರಮದ ನಡುವೆ ಆಕಾಶದಲ್ಲಿ ಸೋಮವಾರ ಚಂದ್ರ ದರ್ಶನವಾಗಿ, ಎಲ್ಲರ ಗಮನ ಸೆಳೆದಿದೆ.
ಗಣೇಶ ಹಬ್ಬದ ದಿನದಂದು ಸಂಜೆ ಆಕಾಶದಲ್ಲಿ ಸುಂದರವಾದ ಅರ್ಧಚಂದ್ರನ ದರ್ಶನವಾಗಿದ್ದು, ಹಬ್ಬದ ಸಂಭ್ರಮಕ್ಕೆ ಮತ್ತಷ್ಟು ಮೆರುಗು ತಂದಿತು.
ನೀಲಾಕಾಶದಲ್ಲಿ ಕಂಗೊಳಿಸಿದ ಚಂದ್ರನೊಂದಿಗೆ ಹಾರಾಡಿದ ಹಕ್ಕಿಯ ದೃಶ್ಯವೂ ಮನಮೋಹಕವಾಗಿ ಕಂಡುಬಂದಿತು. ಗಣೇಶನ ಆಗಮನದ ಸಂಭ್ರಮದ ಜೊತೆಗೆ ಆಕಾಶದಲ್ಲಿ ಚಂದ್ರ ದರ್ಶನ ಹಾಗೂ ಪ್ರಕೃತಿ ಸುಂದರ ನೋಟಕ್ಕೆ ಜನರು ಮನಸೋತರು.
ಆದರೆ, ಶ್ರೀ ಗಣೇಶ ಚತುರ್ಥಿಯ ಗಣಪನ ಪ್ರತಿಷ್ಠಾಪನೆಯ ದಿನದಂದು ದರ್ಶನವಾಗುವ ಚಂದ್ರನನ್ನು ನೋಡಬಾರದು ಎನ್ನುವ ವಾಡಿಕೆ ಇದೆ.
