
ಧಾರವಾಡ
ಶ್ರೀ ಶಾಂತಿಕುಮಾರ ಗುಬ್ಬಿ ಅವರ ೬೭ನೆಯ ಪುಣ್ಯ ಸ್ಮರಣೆಯನ್ನು ಮಂಗಳವಾರ ಜೆ.ಎಸ್.ಎಸ್. ಬನಶಂಕರಿ ಕಲಾ, ವಾಣಿಜ್ಯ ಮತ್ತು ಶಾಂತಿಕುಮಾರ ಗುಬ್ಬಿ ವಿಜ್ಞಾನ ಮಹಾವಿದ್ಯಾಲಯದ ಪ್ರಾಣಿಶಾಸ್ತ್ರ ವಿಭಾಗದಲ್ಲಿ ಆಚರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಜನತಾ ಶಿಕ್ಷಣ ಸಮಿತಿ ಕಾರ್ಯದರ್ಶಿ ಡಾ. ಅಜಿತಪ್ರಸಾದ ಅವರು, ಶ್ರೀ ಶಾಂತಿಕುಮಾರ ಗುಬ್ಬಿ ಅವರ ಭಾವಚಿತ್ರಕ್ಕೆ ಪುಷ್ಟ ನಮನ ಸಲ್ಲಿಸಿ, ಮಾತನಾಡುತ್ತಾ, ಶಾಂತಿಕುಮಾರ ಗುಬ್ಬಿ ಅವರು ಬೆಳೆದು ಬಂದ ದಾರಿ, ಅವರ ವ್ಯಕ್ತಿತ್ವವನ್ನು ಪರಿಚಯಿಸುತ್ತಾ ಅವರ ದಾನ-ಧರ್ಮದ ಗುಣ ಇಂದಿಗೂ ಸ್ಮರಣೀಯವಾದದ್ದು ಎಂದು ಹೇಳಿ ಶ್ಲಾಘಿಸಿದರು.
ಜೆ.ಎಸ್.ಎಸ್. ಆಡಳಿತಾಧಿಕಾರಿ ಅರಿಹಂತ ಪ್ರಸಾದ, ಪ್ರಾಚಾರ್ಯ ಡಾ. ವೆಂಕಟೇಶ ಮುತಾಲಿಕ, ಉಪಪ್ರಾಚಾರ್ಯ ಡಾ. ಎನ್.ಡಿ. ಕುಲಕರ್ಣಿ, ಐ.ಕ್ಯೂ.ಎ.ಸಿ. ಸಂಯೋಜಕ ಡಾ. ಶೌಕತಅಲಿ ಮೇಗಲಮನಿ, ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ರತ್ನಾ ಐರಸಂಗ, ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಆರ್.ಎಂ. ಪತ್ತಾರ, ಕ್ರೀಡಾ ವಿಭಾಗದ ಮುಖ್ಯಸ್ಥ ಡಾ. ಜೆ.ಆರ್. ಕುಂದಗೋಳ, ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಅರುಣಕುಮಾರ ಶಿರಹಟ್ಟಿ, ಭೌತಶಾಸ್ತ್ರ ವಿಭಾಗದ ಮುಖ್ಯಸ್ಥೆ ಬಿ.ಎಂ. ಬಿಂದುಶ್ರೀ, ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಸುಮಂಗಲಾದೇವಿ, ಡಾ. ಎಂ.ಎನ್. ಕೊಟ್ಯಾಳ, ಮಮತಾ ಮಾಂಡವಿ, ಮೃತುಂಜ್ಯಯ ಕೆ, ಡಾ. ಆರ್.ವ್ಹಿ. ಚಿಟಗುಪ್ಪಿ, ವಿವೇಕ ಲಕ್ಷ್ಮೇಶ್ವರ, ಕಛೇರಿ ಅಧಿಕ್ಷಕ ಜಶ್ರೀ ಆರ್.ಸಿ. ಮಠಪತಿ ಹಾಗೂ ಮನೋಜ ನಾಯರ್, ಎಲ್ಲಾ ಬೋಧಕ, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿ/ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
