ಜೆಎಸ್‌ಎಸ್ ಪಿಯು ಕಾಲೇಜ ಪ್ರಥಮ

ಹಂಚಿಕೊಳ್ಳಿ

ಧಾರವಾಡ
ಜಿಲ್ಲಾ ಮಟ್ಟದ ಬಾಲಕ ಮತ್ತು ಬಾಲಕಿಯರ ನೆಟ್ಬಾಲ್ ಪಂದ್ಯಾವಳಿಯನ್ನು ಪದವಿಪೂರ್ವ ಶಿಕ್ಷಣ ಇಲಾಖೆ ಹಾಗೂ ಮದೀನಾ ಪದವಿ ಪೂರ್ವ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಸವದತ್ತಿ ರಸ್ತೆಯ ಶ್ರೀ ಮಂಜುನಾಥೇಶ್ವರ ವಾಣಿಜ್ಯ ಮತ್ತು ಕಲಾ ಮಹಾವಿದ್ಯಾಲಯದ ಕಾಲೇಜಿನ ಆವರಣದಲ್ಲಿ ನಡೆಯಿತು.

ಬಾಲಕರ ವಿಭಾಗದಲ್ಲಿ ಜೆ.ಎಸ್.ಎಸ್ ಆರ್.ಎಸ್.ಹೆಚ್ ಪಿ.ಯು ಕಾಲೇಜು ಪ್ರಥಮ ಸ್ಥಾನ, ಕರ್ನಾಟಕ ಕಲಾ ಮಹಾವಿದ್ಯಾಲಯ ದ್ವಿತೀಯ ಸ್ಥಾನ ಪಡೆಯಿತು.

ಬಾಲಕಿಯರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಎಸ್.ಎಸ್ ಆರ್.ಎಸ್.ಹೆಚ್ ಪಿ.ಯು ಕಾಲೇಜು, ದ್ವಿತೀಯ ಸ್ಥಾನವನ್ನು ವಿದ್ಯಾರಣ್ಯ ಪದವಿ ಪೂರ್ವ ವಿದ್ಯಾಲಯ ಪಡೆದುಕೊಂಡಿತು.

ಕ್ರೀಡಾಕೂಟವನ್ನು ಕ್ರೀಡಾಸಂಯೋಜಕ ಐ.ಆರ್. ಹುಬ್ಬಳ್ಳಿ ಉದ್ಘಾಟಿಸಿದರು. ಜೆ.ಎಸ್.ಎಸ್ ಕೌಶಲ್ಯ ಐ.ಟಿ.ಐ ಕಾಲೇಜಿನ ರಾಹುಲ್ ಉಪಾದ್ಯೆ, ಜೆ.ಎಸ್.ಎಸ್ ಮಂಜುನಾಥೇಶ್ವರ ಆಂಗ್ಲ ಮಾಧ್ಯಮದ ಪ್ರಾಚಾರ್ಯೆ ತ್ರಿವೇಣಿ ಆರ್ ಬಹುಮಾನ ವಿತರಿಸಿದರು. ಶ್ರವಣಕುಮಾರ ಯೋಗಿ ವಂದಿಸಿದರು. ಚಂದ್ರಶೇಖರ್ ಹಿರೆಬಸಪ್ಪಗೌಡ್ರ, ನಾಗರಾಜ್ ತೋಟಗೇರ ಉಪಸ್ಥಿತರಿದ್ದರು.


ಹಂಚಿಕೊಳ್ಳಿ

Leave a Reply

Your email address will not be published. Required fields are marked *