ಅಳಿವಿನ ಅಂಚಿನಲ್ಲಿ ಅಂಚೆಪತ್ರ

ಹಂಚಿಕೊಳ್ಳಿ

ಧಾರವಾಡ
ಅಂಚೆ ಪತ್ರ ಇಂದು ಮೊಬೈಲ್ ಹಾವಳಿಯಿಂದ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದ್ದು, ಹಿಂದಿನ ಕಾಲದಲ್ಲಿ ಅಂಚೆ ಪತ್ರ ಮತ್ತು ಮನಿ ಆರ್ಡರ್ ಬರುವುದನ್ನು ಜನ ಕಾಯುತ್ತಿದ್ದರು. ಪೋಸ್ಟಮನ ಯಾವಾಗ ಬರುತ್ತಾರೆ, ಅವರು ಹೊತ್ತು ತರುವ ಪತ್ರಗಳು ಜನ ಕಾತುರದಿಂದ ಕಾದು ಪತ್ರ ಪಡೆಯುತ್ತಿದ್ದರು ಎಂದು ರಾಷ್ಟ್ರೀಯ ಶಿಕ್ಷಕರ ಫೆಡರೇಷನ್ ಅಧ್ಯಕ್ಷರು ಬಸವರಾಜ ಗುರಿಕಾರ ಹೇಳಿದರು.

ನಗರದ ರಂಗಾಯಣದಲ್ಲಿ ಪವರ್ ಆಫ್ ಯುತ್ಸ ಫೌಂಡೇಶನ್ ಕರ್ನಾಟಕ ವತಿಯಿಂದ ಜರುಗಿದ ಅಂಚೆ ಪತ್ರ ಕಿರುಚಿತ್ರ ಬಿಡುಗಡೆ ಮತ್ತು ಅಕ್ಷರ ತಾಯಿ ಎಂದೇ ಖ್ಯಾತರಾದ ಲೂಸಿ ಸಾಲ್ದಾನಾ ಅವರ ಜೀವನ ಕಥೆ ತ್ಯಾಗಮಯಿ ಲೂಸಿ ಕಿರುಚಿತ್ರದ ಪೋಸ್ಟರ್ ಬಿಡುಗಡೆ ಮತ್ತು ಕಲಾವಿದರ ಹಾಗೂ ಕಾಯಕರತ್ನ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಚಿಕ್ಕ ವಯಸ್ಸಿನಲ್ಲಿ ಬಂದು ಬಳಗದಿಂದ ಕಳೆದುಹೋಗಿ ಎಲ್ಲೋ ಎದ್ದು ಬಿದ್ದು ಅಕ್ಷರ ಕಲಿತು ಶಿಕ್ಷಕಿಯಾಗಿ ನೂರಾರು ಸರ್ಕಾರಿ ಶಾಲೆಗಳಿಗೆ ಒಂದು ಕೋಟಿಗೂ ಅಧಿಕ ಹಣವನ್ನು ದತ್ತಿ ನೀಡಿರುವ ಲೂಸಿ ಸಾಲ್ದಾನಾ ಶಿಕ್ಷಕರಿಗೆ ಮಾದರಿ ಎಂದರು.

ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಪರಿಸರ ಪ್ರೇಮ ತಂಡ ಕಟ್ಟಿಕೊಂಡು ಸರ್ಕಾರಿ ಶಾಲೆ ಅಂಗನವಾಡಿ ಕಟ್ಟಡಗಳಿಗೆ ಬಣ್ಣದರ್ಪಣ ಮಾಡುತ್ತಾ ಸರ್ಕಾರಿ ಶಾಲೆಗಳ ಉಳಿಶಿ ಬೆಳೆಸಲು ನಾವು ಅಳಿಲು ಸೇವೆ ಸಲ್ಲಿಸುತ್ತಿದ್ದೇವೆ ಈ ನಿಟ್ಟಿನಲ್ಲಿ ಚಿತ್ರ ಬರಹಗಾರರು ನಮಗೆ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.

ಹೆಬ್ಬಳ್ಳಿಯ ಚಿಂತಕರು ಸಾಹಿತಿಗಳು ಶ್ರೀಗುರು ಚರಂತಯ್ಯ ಕೊಣ್ಣೂರ ಹಿರೇಮಠ ದಿವ್ಯ ಸಾನಿದ್ಯದಲ್ಲಿ ಜರುಗಿದ ಈ ಸಮಾರಂಭದ ಅಧ್ಯಕ್ಷತೆಯನ್ನು ಅಂಚೆ ಪತ್ರ ಕಿರುಚಿತ್ರದ ನಿರ್ಮಾಪಕಿ ಕುಮಾರಿ ದೇವಿಕಾ ಹುಬ್ಬಳ್ಳಿ ವಹಿಸಿ ಇಂದು ಮೊಬೈಲ್ ಯುಗದಲ್ಲಿ ಹಿಂದಿನ ಕಾಲದ ಪತ್ರ ಬರೆಯುವುದನ್ನು ಮತ್ತು ಓದುವುದನ್ನು ಮರೆತಿದ್ದೇವೆ. ಇಂದಿನ ಮಕ್ಕಳಿಗೆ ಅಂಚೆ ಪತ್ರ ಕಚೇರಿಗಳೇ ಗೊತ್ತೇ ಇಲ್ಲಾ ಅವುಗಳು ಕಣ್ಮರೆ ಆಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.

ಲೂಸಿಸಾಲ್ದಾನ ಸರ್ವಧರ್ಮ ಸಮಾಜಸೇವಕ ಡಾ ರಮೇಶ ಮಹಾದೇವಪ್ಪನವರ, ತ್ಯಾಗಮಯಿ ಲೂಸಿ ಕಿರುಚಿತ್ರದ ನಿರ್ಮಾಪಕ ಡಾ ಮೋಹನಕುಮಾರ್ ಜೂಬೇದ ಬಾದಾಮಿ, ತಡಕೋಡದ ಸಮಾಜಸೇವಕ ಭೀಮಪ್ಪ ಕಸಾಯಿ, ರವಿಚಂದ್ರನ್ ದೊಡ್ಡಿಹಾಳ, ಗದಿಗೆಪ್ಪಾ ಮ್ಯಾಚರ್, ಮಂಜುನಾಥ್ ಮಟ್ಟಿ, ಜ್ಯೋತಿ ಲಿಂಗಮಪಲ್ಲಿ, ಎಲ್.ಐ. ಲಕ್ಕಮ್ಮನವರ, ಮಲ್ಲಿಕಾರ್ಜುನ ಚರಂಟಿಮಠ, ಡಾ. ಬಿ.ಎಸ್. ಪುಷ್ಪ, ಜ್ಯೋತಿ ಆಚಾರ್ಯ, ರಾಜಶೇಖರ್ ಡುಮ್ಮವಾಡ, ಬಸವರಾಜ ಬಾಗಲ, ಶ್ರೀಕಾಂತ್ ಗಡೆದವರ, ಉಷಾಲತಾ ಶೆಟ್ಟಿ, ಧರ್ಮರಾಜ್ ಚವ್ಹಾಣ ಮುಂತಾದವರು ಇದ್ದರು.


ಹಂಚಿಕೊಳ್ಳಿ

One thought on “ಅಳಿವಿನ ಅಂಚಿನಲ್ಲಿ ಅಂಚೆಪತ್ರ”

Leave a Reply

Your email address will not be published. Required fields are marked *