ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನ

ಹಂಚಿಕೊಳ್ಳಿ

ಅಕ್ಟೋಬರ್ 11ರಿಂದ 21ರ ವರಗೆ ಜಮಖಂಡಿಯಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳವರ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನ

ಬಾಳೆಹೊನ್ನೂರು
ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕ ಕೇಂದ್ರದಲ್ಲಿ ಇದೇ ಅಕ್ಟೋಬರ್ 11 ರಿಂದ 21ರ ವರೆಗೆ ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳವರ 35ನೇ ವರ್ಷದ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನ ಜರುಗಲಿದೆ.

ಜಮಖಂಡಿಯ ಕಡಪಟ್ಟಿ ಶ್ರೀ ಬಸವಣ್ಣ ದೇವಸ್ಥಾನದ ಆವರಣದಲ್ಲಿ ನಿರ್ಮಿಸಲಾಗಿರುವ ಮಾನವ ಧರ್ಮ ಮಂಟಪದಲ್ಲಿ ಪ್ರತಿ ನಿತ್ಯದ ಕಾರ್ಯಕ್ರಮಗಳು ಶ್ರೀ ರಂಭಾಪುರಿ ಜಗದ್ಗುರುಗಳ ಸಾನ್ನಿಧ್ಯದಲ್ಲಿ ನಡೆಯುತ್ತವೆ ಎಂದು ಶ್ರೀ ಜಗದ್ಗುರು ರಂಭಾಪುರಿ ಪೀಠದ ಪ್ರಕಟಣೆಯಲ್ಲಿ ತಿಳಿಸಿದೆ.

ಅಕ್ಟೋಬರ್ 11ರಂದು ಕೇಂದ್ರ ಶಿಕ್ಷಣ ಸಚಿವ ಪ್ರಹ್ಲಾದ ಜೋಶಿಯವರು ಉದ್ಘಾಟಿಸುವ ಸಮಾರಂಭದಲ್ಲಿ ಸಂಸದ ಗೋವಿಂದ ಎಂ.ಕಾರಜೋಳ, ಮಾಜಿ ಸಚಿವ ಮುರುಗೇಶ ನಿರಾಣಿ ಭಾಗವಹಿಸುವರು. ದಿನಾಂಕ 12ರಂದು ಮಾಜಿ ಮುಖ್ಯಮಂತ್ರಿ-ಸಂಸದ ಬಸವರಾಜ ಬೊಮ್ಮಾಯಿ ಇವರು ‘ಶ್ರೀ ರಂಭಾಪುರಿ ಶಿವಾನಂದ ಜಗದ್ಗುರುಗಳವರ ಜೀವನ ದರ್ಶನ’ ಕೃತಿ ಬಿಡುಗಡೆ ಮಾಡುವರು.

ಉಳಿದ ಎಲ್ಲ ದಿನಗಳಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರಾದ ಡಾ. ಶರಣಪ್ರಕಾಶ ಪಾಟೀಲ, ಎಸ್.ಎಸ್. ಮಲ್ಲಿಕಾರ್ಜುನ, ಲಕ್ಷ್ಮಣ ಸವದಿ, ಅಜಯ್ ಧರ್ಮಸಿಂಗ್, ರುದ್ರಪ್ಪ ಲಮಾಣಿ, ಮಾಜಿ ಮುಖ್ಯಮಂತ್ರಿ-ಸಂಸದ ಜಗದೀಶ ಶೆಟ್ಟರ್, ಈಶ್ವರ ಖಂಡ್ರೆ, ವಿಜಯಾನಂದ ಕಾಶಪ್ಪನವರ, ವಿಧಾನಸಭಾಧ್ಯಕ್ಷ ಜಿ.ಎಸ್.ಪಾಟೀಲ, ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ವಿಆರ್‌ಎಲ್ ಸಂಸ್ಥೆ ಚೇರ್ಮನ್ ವಿಜಯ ಸಂಕೇಶ್ವರ ಸೇರಿದಂತೆ ಸಂಸದರು, ವಿಧಾನ ಪರಿಷತ್ ಸದಸ್ಯರು, ಶಾಸಕರು, ಮಾಜಿ ಸಚಿವರು, ಗಣ್ಯರು ಮುಖ್ಯ ಅತಿಥಿಗಳಾಗಿ ಆಗಮಿಸುವರು.

ಉಪನ್ಯಾಸ:
ಪ್ರೊ. ಸಿ.ಜಿ. ಮಠಪತಿ ವಿಶ್ರಾಂತ ಉಪನ್ಯಾಸಕರು ಹಿಪ್ಪರಗಿ-ಬೆಳಗಾವಿ, ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳು ಪಂಚಗೃಹ ಹಿರೇಮಠ ಅಮ್ಮಿನಭಾವಿ, ಪ್ರಶಾಂತ್ ರಿಪ್ಪನ್‌ಪೇಟೆ ಪತ್ರಕರ್ತರು ಬೆಂಗಳೂರು, ಪ್ರೊ. ಜಿ.ಎಸ್. ನಟೇಶ್ ಆಧ್ಯಾತ್ಮ ಚಿಂತಕರು ಶಿವಮೊಗ್ಗ, ವಾಮದೇವ ಮಹಾಂತ ಶಿವಾಚಾರ್ಯ ಸ್ವಾಮಿಗಳು ಹಂಪಿ ಸಾವಿರ ದೇವರ ಮಠ ಎಮ್ಮಿಗನೂರು, ಡಾ. ಕವಿತಾ ಮಿಶ್ರಾ ಕೃಷಿ ತಜ್ಞರು ಕವಿತಾಳ, ಡಾ. ಮಲಯ ಶಾಂತಮುನಿ ಶಿವಾಚಾರ್ಯ ಸ್ವಾಮಿಗಳು ಶ್ರೀ ಮೇಲಣಗವಿ ಸಂಸ್ಥಾನ ಶಿವಗಂಗಾ ಕ್ಷೇತ್ರ, ಡಾ. ಎ.ಸಿ. ವಾಲಿ ಸಂಶೋಧಕ ಸಾಹಿತಿಗಳು ಬಂಡಿವಾಡ ಹಾಗೂ ಡಾ. ಪರಮೇಶ್ವರಿ ಮೃತ್ಯುಂಜಯ ಹಿರೇಮಠ ಉಪನ್ಯಾಸಕರು ಗುಳೇದಗುಡ್ಡ ಇವರು ವಿವಿಧ ವಿಷಯಗಳ ಕುರಿತು ಉಪನ್ಯಾಸ ನೀಡುವರು.

ಪ್ರಶಸ್ತಿ ಪ್ರದಾನ:
ಸಿದ್ಧರಾಮ ಶಿವಾಚಾರ್ಯ ಸ್ವಾಮಿಗಳು ಶ್ರೀ ಮಹಾಂತೇಶ್ವರ ಕ್ಷೇತ್ರ ಚಿಣಮಗೇರಿ ಇವರಿಗೆ ‘ಶಿವಾಚಾರ್ಯ ರತ್ನ’, ಬೆಳಗಾವಿಯ ಡಾ. ಅನ್ನಪೂರ್ಣ ಹಿರೇಮಠ ಇವರಿಗೆ ‘ಸಾಹಿತ್ಯ ಸಿರಿ’, ಶಿವಮೊಗ್ಗದ ಕೆ.ಎಂ. ಸತೀಶ್ ಗೌಡ ಇವರಿಗೆ ‘ಸಾಧನ ಸಿರಿ’, ಜಮಖಂಡಿಯ ಸಿದ್ಧಪ್ಪ ಬಸಪ್ಪ ಕವಟಗಿ ಇವರಿಗೆ ‘ರಂಭಾಪುರಿ ಯುವಸಿರಿ’ ಹಾಗೂ ಶಾಸಕರಾದ ನಾಡೋಜ ಶ್ರೀ ಜಗದೀಶ ಗುಡಗುಂಟಿಮಠ ಇವರಿಗೆ ‘ವೀರಶೈವ ಧರ್ಮ ಸಿರಿ’ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಕೃತಿ ಬಿಡುಗಡೆ:
ಬಾಳಿಗೆ ಬೆಳಕು, ಸುಬೋಧ ಚಿಂತನೆ, ರಂಭಾಪುರಿ ಬೆಳಗು, 2027ರ ದಿನದರ್ಶಿಕೆ ಸೇರಿದಂತೆ ಹಲವಾರು ಕೃತಿಗಳು ಸಮಾರಂಭದಲ್ಲಿ ಬಿಡುಗಡೆಯಾಗಲಿವೆ. ಬೆಂಗಳೂರು ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯ ಅಧ್ಯಕ್ಷ ಸಿಂದಗಿ ಸಾರಂಗಮಠದ ಡಾ. ಪ್ರಭು ಸಾರಂಗದೇವ ಶಿವಾಚಾರ್ಯರು, ಗೌರವಾಧ್ಯಕ್ಷ ಎಡೆಯೂರು ರೇಣುಕ ಶಿವಾಚಾರ್ಯರು ಹಾಗೂ ಮುಕ್ತಿಮಂದಿರ ಕ್ಷೇತ್ರದ ವಿಮಲ ರೇಣುಕ ಮುಕ್ತಿಮುನಿ ಶಿವಾಚಾರ್ಯರು ಮೊದಲ್ಗೊಂಡು ನಾಡಿನ ಮಠಾಧೀಶರು ಸಮಾರಂಭದಲ್ಲಿ ಪಾಲ್ಗೊಳ್ಳುವರು.

ದಿನಾಂಕ 21ರಂದು ವಿಜಯ ದಶಮಿಯ ಅಂಗವಾಗಿ ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳವರ ಅಡ್ಡಪಲ್ಲಕ್ಕಿ ಮಹೋತ್ಸವ ಸಡಗರ ಸಂಭ್ರಮದಿಂದ ಜಮಖಂಡಿ ನಗರದ ಪ್ರಮುಖ ಬೀದಿಗಳಲ್ಲಿ ಜರುಗುವುದು. ಶಮೀ ಪೂಜೆಯ ನಂತರ ಜಗದ್ಗುರುಗಳು ಮಾನವ ಧರ್ಮ ವೇದಿಕೆಗೆ ಆಗಮಿಸಿ ಶಾಂತಿ ಸಂದೇಶ ಅನುಗ್ರಹಿಸುವರು. ಈ ಸಂದರ್ಭದಲ್ಲಿ ವಿಶೇಷ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಇರುತ್ತದೆ. ನಂತರ ಶಿಷ್ಯ ಸದ್ಭಕ್ತರಿಂದ ಶಮೀ ಕಾಣಿಕಾ ಸಮರ್ಪಣೆಗೆ ಅವಕಾಶ ಇರುತ್ತದೆ. ಅಂದು ಬೆಳಿಗ್ಗೆ ಶ್ರೀ ರಂಭಾಪುರಿ ಜಗದ್ಗುರುಗಳು ಇಷ್ಟಲಿಂಗ ಪೂಜೆಗಾಗಿ ಸ್ವತ: ಕುಂಭ ಹೊತ್ತು ಅಗ್ರೋದಕ ತರುವರು.

ಇಷ್ಟಲಿಂಗ ಮಹಾಪೂಜೆ:
ಪ್ರತಿ ದಿನ ಬೆಳಿಗ್ಗೆ 8 ಗಂಟೆಗೆ ಶ್ರೀ ರಂಭಾಪುರಿ ಜಗದ್ಗುರುಗಳು ಜಮಖಂಡಿ ಮೈಗೂರು ರಸ್ತೆಯಲ್ಲಿರುವ ಕಲೂತಿ ಕಲ್ಯಾಣ ಮಂಟಪದಲ್ಲಿ ವಿಶ್ವ ಕಲ್ಯಾಣ ಹಾಗೂ ಶಾಂತಿಗಾಗಿ ಇಷ್ಟಲಿಂಗ ಮಹಾಪೂಜೆ ನಡೆಸುವರು.

ನಜರ್ ಸಮರ್ಪಣೆ:
ಪ್ರತಿ ದಿನದ ಸಮಾರಂಭದ ಕೊನೆಗೆ ಶಿವಾಚಾರ್ಯರು, ಶ್ರೀ ಪೀಠದ ಸಿಬ್ಬಂದಿ, ಸಮಿತಿಯ ಸದಸ್ಯರು ಹಾಗೂ ಧರ್ಮಾಭಿಮಾನಿಗಳಿಂದ ಆಕರ್ಷಕ ನಜರ್ ಸಮರ್ಪಣೆ ನಡೆಯುವುದು. ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದ ಗೌರವಾಧ್ಯಕ್ಷರಾಗಿ ಕಲ್ಯಾಣಮಠ ಗೌರಿಶಂಕರ ಶಿವಾಚಾರ್ಯರು, ಸಂಸದ ಪಿ.ಸಿ.ಗದ್ದಿಗೌಡರು, ಗೋವಿಂದ ಕಾರಜೋಳ, ಸಚಿವ ಎಂ.ಬಿ. ಪಾಟೀಲ, ವಿಧಾನಪರಿಷತ್ ಉಪಸಭಾಪತಿ ಡಾ. ಉಮಾಶ್ರೀ ಅಧ್ಯಕ್ಷರಾಗಿ ಸಚಿವ ವಿಜಯಾನಂದ ಕಾಶಪ್ಪನವರ, ಕಾರ್ಯಾಧ್ಯಕ್ಷರಾಗಿ ಶಾಸಕ ನಾಡೋಜ ಜಗದೀಶ ಶಿವಯ್ಯ ಗುಡಗುಂಟಿ ಇವರು ಕಾರ್ಯ ನಿರ್ವಹಿಸಲಿದ್ದು ವಿವಿಧ ಸಮಿತಿಗಳನ್ನು ರಚಿಸಲಾಗಿದ್ದು ಸಿದ್ಧತೆ ಭರದಿಂದ ನಡೆದಿದೆ.


ಹಂಚಿಕೊಳ್ಳಿ

Leave a Reply

Your email address will not be published. Required fields are marked *