ಕಾಯಕದಲ್ಲೇ ಭಕ್ತಿ ಮೆರೆದ ರಥ ಶಿಲ್ಪಿ ಲೋಚನ್

ಹಂಚಿಕೊಳ್ಳಿ

ಈ ವಿಶಿಷ್ಟ ಪ್ರತಿಷ್ಠಾಪನೆ ಕರ್ನಾಟಕದಲ್ಲಿಯೇ ಮೊದಲು

ಧಾರವಾಡ
ಗಣೇಶೋತ್ಸವದ ಸಂಭ್ರಮದಲ್ಲಿ ಹೊಸ ಯಲ್ಲಾಪುರದ ಲಕಮನಹಳ್ಳಿ ಓಣಿ‌ ನಿವಾಸಿ ಪ್ರಸಿದ್ಧ  ರಥ‌ ಶಿಲ್ಪ ಲೋಚನ್ ಭಾತಖಂಡೆಯವರು ‘ಶ್ರೀಮಂತ ದಗಡುಶೇಟ್ ಹಲ್ವಾಯಿ’ ಗಣಪತಿಯನ್ನು ತಾವೇ ತಯಾರಿಸಿದ ರಥದಲ್ಲಿ ಕೂರಿಸಿ, ಕಾಯಕದಲ್ಲಿ ಭಗವಂತನ್ನು‌ ಕಾಣುತ್ತಿದ್ದಾರೆ.

ಇದುವರೆಗೂ ಇವರ ಕುಟುಂಬದ ಕೈಯಲ್ಲಿ 180ಕ್ಕೂ ಹೆಚ್ಚು ರಥಗಳು ಸಿದ್ಧವಾಗಿವೆ. 1982 ರಿಂದ  ದಿ. ರಾಜೇಂದ್ರಸಿಂಗ್ ಹನುಮಂತಸಿಂಗ್ ಭಾತಖಂಡೆ (127 ರಥಗಳು) ಅವರು ಈ ಸೇವೆಯಲ್ಲಿ‌ ತೊಡಗಿದ್ದು, 2007 ರಿಂದ ಅವರ ಮಗ ಲೋಚನ್ ಭಾತಖಂಡೆ ಯವರು ಮುಂದುವರಿಸಿಕೊಂಡು ಬಂದಿದ್ದಾರೆ.

ರಥಗಳ ಜತೆಗೆ ಪಲ್ಲಕ್ಕಿ, ದೇವರ ಪೀಠ, ಮಂಟಪ, ಆಸನಗಳೂ ತಯಾರಾಗುತ್ತಿವೆ. ಸೇವಾ ಮನೋಭಾವದಿಂದ ಪ್ರಾರಂಭವಾದ ಈ ಕಸುಬು, ಭಾತಖಂಡೆ ಕುಟುಂಬದ ಹೆಸರನ್ನು ನಾಡಿನಾದ್ಯಂತ ರಥಶಿಲ್ಪಿ ಎಂದು ಉತ್ತುಂಗಕ್ಕೆ ಏರಿಸಿದೆ.

ಈ ವೃತ್ತಿಯನ್ನು ಅವರು ಎಂದೂ ವ್ಯಾಪಾರ ಎಂದು ಭಾವಿಸಿಲ್ಲ. ಮಠಾಧೀಶರ ಬಳಿ ಇಂತಿಷ್ಟೇ ಹಣ ಕೊಡಿ ಎಂದು ಬೇಡಿಕೆ ಇಟ್ಟಿಲ್ಲ. ಭಕ್ತಿಯಿಂದ ನೀಡುವ ಸಂಭಾವನೆಯನ್ನು ಪ್ರಸಾದವೆಂದು ಸ್ವೀಕರಿಸಿ, ಇದನ್ನೇ ಸಮಾಜ ಸೇವೆ ಎಂದು ಮುಂದುವರಿಸಿಕೊಂಡು ಬಂದಿದ್ದಾರೆ.


ಹಂಚಿಕೊಳ್ಳಿ

Leave a Reply

Your email address will not be published. Required fields are marked *