ಸ್ಪರ್ಧಾತ್ಮಕ ಪರೀಕ್ಷೆಗಳ ಉಚಿತ ತರಬೇತಿ

ಹಂಚಿಕೊಳ್ಳಿ

ಧಾರವಾಡ
ನಗರದ ಮರಾಠಾ ವಿದ್ಯಾ ಪ್ರಸಾರಕ ಮಂಡಳದ ಸಂಭಾಜಿ ಮಹಾರಾಜ ಸಭಾಭವನದಲ್ಲಿ ಪಿಯುಸಿ ಹಾಗೂ ಪದವಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ವಿಶೇಷ ತರಬೇತಿ ಕಾರ್ಯಾಗಾರ ಜರುಗಿತು.

ಡಾ. ಮಯೂರ್ ಮೋರೆ ಫೌಂಡೇಶನ್, ಕ್ರ‍್ಯಾಕಿಟ್ ಅಕ್ಯಾಡೆಮಿ, ಛತ್ರಪತಿ ಶಿವಾಜಿ ಮಹಾರಾಜ ಕಲಾ, ವಾಣಿಜ್ಯ, ವಿಜ್ಞಾನ ಸ್ನಾತಕ ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ವತಿಯಿಂದ ಈ ಕಾರ್ಯಾಗಾರ ಆಯೋಜಿಸಿತ್ತು.

ಕಾರ್ಯಾಗಾರದಲ್ಲಿ ಕ್ರ‍್ಯಾಕಿಟ್ ಅಕ್ಯಾಡೆಮಿ ನಿರ್ದೇಶಕ ನವೀನ ಎಂ. ಮಾತನಾಡಿ, ಕೇಂದ್ರ ಸರ್ಕಾರದ ಎಸ್‌ಎಸ್‌ಸಿ, ರೈಲ್ವೆ, ಸೈನ್ಯ ಹಾಗೂ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಉದ್ಯೋಗಾವಕಾಶಗಳ ಮಾಹಿತಿ ನೀಡಿದರು. ಅಲ್ಲದೇ, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ವಿಧಾನಗಳ ಕುರಿತು ಉಪಯುಕ್ತ ತರಬೇತಿ ನೀಡಿದ ಅವರು, ಎರಡು ತಿಂಗಳ ಈ ಉಚಿತ ತರಬೇತಿ ಸದ್ಬಳಸಿಕೊಂಡು ಉದ್ಯೋಗ ಪಡೆಯುವಂತೆ ಕಿವಿಮಾತು ಹೇಳಿದರು.

ಕ್ರ‍್ಯಾಕಿಟ್ ಅಕ್ಯಾಡೆಮಿ ಸಂಸ್ಥಾಪಕ ಸಂತೋಷ ಹೊಂಗಲ್, ಮರಾಠಾ ಮಂಡಳದ ಆಡಳಿತಾಧಿಕಾರಿ ಡಾ. ಸುರೇಶ ತುವಾರ್, ಪ್ರಾಚಾರ್ಯ ಪ್ರೊ. ಎಂ.ಎಸ್. ಗಾಣಿಗೇರ ಹಾಗೂ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಇದ್ದರು.


ಹಂಚಿಕೊಳ್ಳಿ

Leave a Reply

Your email address will not be published. Required fields are marked *