ಹುಬ್ಬಳ್ಳಿ
ಧಾರವಾಡ ತಹಶೀಲ್ದಾರ ಲೋಕಾಯುಕ್ತ ಬಲೆಗೆ ಬಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಅಪೂರ್ಣ ಹಾಗೂ ತಪ್ಪು ಮಾಹಿತಿಗಳು ಹರಿದಾಡುತ್ತಿದ್ದು, ಅವುಗಳನ್ನು ನಂಬಬಾರದು ಎಂದು ಲೋಕಾಯುಕ್ತ ದೂರುದಾರ ಮಂಜುನಾಥ ಅರಳಿಕಟ್ಟಿ ಪರ ವಕೀಲ ಜಿ.ಆರ್. ಪಾಟೀಲ್ ಮನವಿ ಮಾಡಿದ್ದಾರೆ.
ಈ ಕುರಿತು ಅಧಿಕೃತ ಪ್ರಕಟಣೆ ನೀಡಿರುವ ಅವರು, ಸೆ. 16ರಂದು ನಡೆದ ಲೋಕಾಯುಕ್ತ ಟ್ರ್ಯಾಪ್ ಪ್ರಕರಣದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಅರಳಿಕಟ್ಟಿ ಅವರ ಕುರಿತು ತಪ್ಪು ಅಭಿಪ್ರಾಯ ಮೂಡಿಸುವಂತಹ ಹಲವು ಸಂಗತಿಗಳು ಪ್ರಸಾರವಾಗಿವೆ. ಆದರೆ, ಅರಳಿಕಟ್ಟಿ ಅವರು ಈವರೆಗೆ ಯಾವುದೇ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿಲ್ಲ. ವಕೀಲರ ಮೂಲಕ ಇದೇ ಮೊದಲ ಬಾರಿಗೆ ಅಧಿಕೃತ ಸ್ಪಷ್ಟೀಕರಣ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
15 ಎಕರೆ 34 ಗುಂಟೆಗೆ ಮಾತ್ರ ವ್ಯವಹಾರ
ಲೋಕಾಯುಕ್ತ ಅಧಿಕಾರಿಗಳು ಮಾಧ್ಯಮಗಳಿಗೆ ಮಾಹಿತಿ ನೀಡುವ ಸಂದರ್ಭದಲ್ಲಿ 33 ಎಕರೆ ಎಂದು ಹೇಳಿರಬಹುದು. ಆದರೆ, ವಾಸ್ತವವಾಗಿ ಅಂಗಡಿ ಕುಟುಂಬದಿಂದ 6 ಎಕರೆ 32 ಗುಂಟೆ ಜಮೀನನ್ನು ಎರಡು ಪ್ರತ್ಯೇಕ ನೋಂದಾಯಿತ ಕ್ರಯಪತ್ರಗಳ ಮೂಲಕ ಖರೀದಿಸಲಾಗಿದೆ. ಉಳಿದ 9 ಎಕರೆ 2 ಗುಂಟೆ ಜಮೀನಿಗೆ ಮಾತ್ರ ಕ್ರಯ ಒಪ್ಪಂದ ಮಾಡಿಕೊಳ್ಳಲಾಗಿದೆ. ಹೀಗಾಗಿ ಒಟ್ಟಾರೆ ವ್ಯವಹಾರ 15 ಎಕರೆ 34 ಗುಂಟೆಗೆ ಸೀಮಿತವಾಗಿದೆ ಎಂದು ವಕೀಲರು ಸ್ಪಷ್ಟಪಡಿಸಿದ್ದಾರೆ.
ಸರ್ಕಾರಿ ಖರಾಬು ಜಮೀನು ಖರೀದಿಸಿಲ್ಲ
ಯಾವುದೇ ಎ-ಖರಾಬು ಅಥವಾ ಬಿ-ಖರಾಬು ಸರ್ಕಾರಿ ಜಮೀನನ್ನು ಖರೀದಿಸಿಲ್ಲ ಹಾಗೂ ಖರೀದಿಸಲು ಪ್ರಯತ್ನಿಸಿಯೂ ಇಲ್ಲ. ಸರ್ಕಾರದಿಂದ ಅಂಗಡಿ ಕುಟುಂಬಕ್ಕೆ ಕಾನೂನು ಬದ್ಧವಾಗಿ ಮಂಜೂರಾಗಿದ್ದ 20 ಎಕರೆ 15 ಗುಂಟೆ ಕೃಷಿ ಜಮೀನಿನ ಪೈಕಿ 15 ಎಕರೆ 34 ಗುಂಟೆಗೆ ಮಾತ್ರ ವ್ಯವಹಾರ ಸೀಮಿತವಾಗಿದೆ. ಕಾನೂನು ಅಭಿಪ್ರಾಯ ಪಡೆದ ಬಳಿಕವೇ ಖರೀದಿ ಪ್ರಕ್ರಿಯೆ ನಡೆಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಬಸವರಾಜ ಅಂಗಡಿ ಹೇಳಿಕೆ ತಳ್ಳಿಹಾಕಿದ ವಕೀಲರು
ಶಿವಪುತ್ರಪ್ಪ ಅಂಗಡಿ ಅವರ ಪುತ್ರ ಬಸವರಾಜ ಅಂಗಡಿ ಮಾಧ್ಯಮಗಳ ಮುಂದೆ ನೀಡಿರುವ ಹೇಳಿಕೆಗಳ ಕುರಿತು ಪ್ರತಿಕ್ರಿಯಿಸಿರುವ ವಕೀಲರು, ಅವರೊಂದಿಗೆ ಯಾವುದೇ ವ್ಯವಹಾರ ಅಥವಾ ಮಾತುಕತೆ ನಡೆದಿಲ್ಲ. ಅವರ ಪಾಲಿನ ಆಸ್ತಿಯನ್ನು ಖರೀದಿಸಿಲ್ಲ ಹಾಗೂ ಕ್ರಯಪತ್ರದಲ್ಲಿಯೂ ಅವರ ಹೆಸರು ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
50 ಲಕ್ಷ ಹಣದ ಬಗ್ಗೆಯೂ ಸ್ಪಷ್ಟನೆ
ಲೋಕಾಯುಕ್ತರು ವಶಪಡಿಸಿಕೊಂಡಿರುವ ₹50 ಲಕ್ಷ ಹಣ ಅಕ್ರಮ ಹಣವಲ್ಲ ಎಂದು ವಕೀಲರು ತಿಳಿಸಿದ್ದಾರೆ. ಬ್ಯಾಂಕ್ ಸಾಲದ ಖಾತೆಯಿಂದ ನೇರವಾಗಿ ಹಣವನ್ನು ಡ್ರಾ ಮಾಡಲಾಗಿದ್ದು, ಈ ಕುರಿತು ಅಗತ್ಯ ಬ್ಯಾಂಕ್ ದಾಖಲೆಗಳನ್ನು ತನಿಖಾಧಿಕಾರಿಗಳಿಗೆ ನೀಡಲಾಗಿದೆ. ಹಣವನ್ನು ಮರಳಿ ಬ್ಯಾಂಕ್ ಖಾತೆಗೆ ಜಮೆ ಮಾಡುವಂತೆ ಮನವಿ ಮಾಡಲಾಗಿದೆ ಎಂದು ಹೇಳಿದ್ದಾರೆ.
ಒಟ್ಟಾರೆ, ತಮ್ಮ ಕಕ್ಷಿದಾರರ ಎಲ್ಲ ವಹಿವಾಟುಗಳು ಪಾರದರ್ಶಕವಾಗಿ ಹಾಗೂ ಕಾನೂನಿನ ಚೌಕಟ್ಟಿನಲ್ಲಿಯೇ ನಡೆದಿವೆ. ಆದ್ದರಿಂದ ಅಪೂರ್ಣ ಮಾಹಿತಿಯನ್ನು ಆಧರಿಸಿದ ಸಾಮಾಜಿಕ ಜಾಲತಾಣಗಳ ವರದಿಗಳನ್ನು ನಂಬಬಾರದು ಎಂದು ವಕೀಲ ಜಿ.ಆರ್. ಪಾಟೀಲ್ ಮನವಿ ಮಾಡಿದ್ದಾರೆ.

Hi sksuddimane.com,
Do you have any plans to update, revamp, or improve your website soon?
A modern, well-designed website can make a big difference in how your business is presented online and how effectively it converts visitors into customers.
Our team provides a range of digital services, including:
Website Design & Development
Website Redesign & Revamp
Mobile App Development
E-Commerce Website Development
SEO & Search Engine Optimization
Digital Marketing
Brand Promotion & Online Branding
Social Media Marketing
Website Speed & Performance Optimization
UI/UX Design
We focus on clean and professional design, mobile responsiveness, fast loading speed, SEO-friendly development, and a better user experience to help businesses strengthen their online presence and generate more leads.
If you’re interested, I can share some of our recent work along with a few pricing options based on your requirements.
Would you like me to send you some examples and a brief proposal?
Best regards,
Edward
Hi sksuddimane.com,
Is your business visible on AI platforms like ChatGPT, Gemini, and Perplexity?
We offer a FREE GEO Visibility Check to help you understand how your website may appear in AI search results and identify opportunities to improve your brand’s visibility.
We also provide SEO, website design, development, and digital marketing services.
Would you like me to share your free GEO check with you?
Best regards,
Nethanael