ಜಯ ಕರ್ನಾಟಕ ಜನಪರ ವೇದಿಕೆ 5ನೇ ವಾರ್ಷಿಕೋತ್ಸವ

ಹಂಚಿಕೊಳ್ಳಿ

ಧಾರವಾಡ
ಜಯ ಕರ್ನಾಟಕ ಜನಪರ ವೇದಿಕೆಯಿಂದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜಯಂತೋತ್ಸವ ಹಾಗೂ ವೇದಿಕೆಯ 5ನೇ ವಾರ್ಷಿಕೋತ್ಸವದ ಅಂಗವಾಗಿ ಜಯನಗರ ಕೆರೆಯಲ್ಲಿ ಶುಕ್ರವಾರ ಸಸಿ ನೆಡುವ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

ವೇದಿಕೆಯ ರಾಜ್ಯ ಉಪಾಧ್ಯಕ್ಷ ಮುತ್ತು ಬೆಳ್ಳಕ್ಕಿ ನೇತೃತ್ವದಲ್ಲಿ ಮಹಾತ್ಮ ಗಾಂಧೀಜಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪರಿಸರ ಸಂರಕ್ಷಣೆಯ ಸಂದೇಶದೊಂದಿಗೆ ಸಸಿ ನೆಡಲಾಯಿತು.

ಈ ಸಂದರ್ಭದಲ್ಲಿ ವೇದಿಕೆಯ ಪದಾಧಿಕಾರಿಗಳಾದ ಜಗದೀಶ ಜಾಧವ, ರವೀಂದ್ರ ಮಾನೆ, ಪ್ರಕಾಶ ಘಾಟಗೆ, ಸೋಮಶೇಖರ ಜಾಧವ, ಮಂಜುನಾಥ ಪಾಟೀಲ, ಸಾವಂತ ಕದಂಬ, ಅರ್ಜುನ ಪವಾರ, ಡಾ. ಶಂಕರಗೌಡ ಪಾಟೀಲ, ಡಾ. ಶರಣಬಸಪ್ಪ ಕಡ್ಬೂರ, ಪ್ರಮೋದ ಶೆಟ್ಟಿ, ಅನ್ವರ ನದಾಫ್, ರವಿ ಅಂಗಡಿ, ವಿವೇಕ ಕಡೇಮನಿ, ಮಹಾಂತೇಶ ಪೋಳ, ಗೀತಾ ಹಂಗರಕಿ, ಪ್ರೇಮಾ ಹೊಸಮನಿ, ಕಲಾವತಿ ಸವದತ್ತಿ, ಕುಸಮಾ ನವಲಗುಂದ ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.


ಹಂಚಿಕೊಳ್ಳಿ

Leave a Reply

Your email address will not be published. Required fields are marked *