ಜೀವ ಸಂಕುಲದ ಉಳಿವಿಗೆ ಆದ್ಯತೆ ನೀಡಿ

ಹಂಚಿಕೊಳ್ಳಿ

ಧಾರವಾಡ
ಜೀವ ಸಂಕುಲದ ಉಳಿವಿಗಾಗಿ ಸಸ್ಯ ಮತ್ತು ಮರಗಳನ್ನು ಬೆಳಿಸಬೇಕಾದ ಅನಿವಾರ್ಯತೆ ಇದೆ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಸಮಾಜ ವಿಜ್ಞಾನ ನಿಖಾಯದ ಡೀನ್ ಪ್ರೊ. ಸಿ. ಕೃಷ್ಣಮೂರ್ತಿ ಹೇಳಿದರು.

ಕರ್ನಾಟಕ ವಿಜ್ಞಾನ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ವತಿಯಿಂದ ಕಾಲೇಜಿನ ಆವರಣದಲ್ಲಿ ಆಯೋಜಿಸಿದ ಸಸಿ ನೆಡುವ ಕಾರ್ಯಕ್ರಮದಲ್ಲಿ ಸಸಿಗಳನ್ನು ‌ನೆಟ್ಟು ಮಾತನಾಡಿದರು.

ಪ್ರಸ್ತುತ ಪರಿಸರದ ಅಸಮತೋಲನದಿಂದ ನೈಸರ್ಗಿಕ ವಿಪತ್ತುಗಳು ಹೆಚ್ಚಾಗುತ್ತಿವೆ ಆದ್ದರಿಂದ ಹಸಿರು ಪರಿಸರವನ್ನು ಸಂರಕ್ಷಿಸಿ ಬೆಳಸಬೇಕಾಗಿದೆ ಎಂದ ಅವರು ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಸಸ್ಯ ಗಿಡಮರಗಳ ಮಹತ್ವವನ್ನು ಅರಿಯಬೇಕು ಎಂದರು.

ಕರ್ನಾಟಕ ವಿಶ್ವವಿದ್ಯಾಲಯದ ಸಮಾಜ ಕಲ್ಯಾಣ ಅಧಿಕಾರಿ ಡಾ. ಸಂಗಪ್ಪ ಚಲುವಾದಿ ಮಾತನಾಡಿ, ವಿಶ್ವವಿದ್ಯಾಲಯದ ಸಲಂಗ್ನ ಕಾಲೇಜುಗಳಲ್ಲಿ ಎನ್.ಎಸ್.ಎಸ್ ಚಟುವಟಿಕೆಗಳ ಮೂಲಕ ಸಸಿಗಳನ್ನು ನೆಡುವ ಯೋಜನೆ ಹಾಕಿಕೊಳ್ಳಲಾಗುವುದು ಎಂದರು.

ಕರ್ನಾಟಕ ವಿಜ್ಞಾನ ಕಾಲೇಜಿನ ಪ್ರಾಚಾರ್ಯ ಡಾ. ಎಂ.ಎಸ್. ಸಾಳುಂಕೆ ಮಾತನಾಡಿ, ಮುಂಬರುವ ದಿನಗಳಲ್ಲಿ ಕಾಲೇಜಿನ ಆವರಣದಲ್ಲಿ ಇನ್ನಷ್ಟು ವಿವಿಧ ಸಸಿಗಳನ್ನು ನೆಡುವುದು ಮತ್ತು  ಹಸಿರು ಕ್ಯಾಂಪಸ್ ಗೆ ಹೆಚ್ಚು ಆದ್ಯತೆ ನೀಡಲಾಗುವುದು ಎಂದರು.

ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಕಿರಣ ಕೊಲ್ಕಾರ, ಡಾ. ಕೆ. ಕೋಟ್ರೇಶ್, ಡಾ. ಡೋರಿಸ್ ಸಿಂಗ್, ಡಾ. ಎಲ್.ಟಿ. ನಾಯಕ, ಡಾ. ಮಂಜುನಾಥ ಅಸುಂಡಿ, ಡಾ. ಅಶೋಕ ಆಲದಕಟ್ಟಿ, ಡಾ. ನಾಗೇಶ ಕುಸಲ್ ಇದ್ದರು.


ಹಂಚಿಕೊಳ್ಳಿ

Leave a Reply

Your email address will not be published. Required fields are marked *