ಪ್ರಜ್ಞಾವಂತರ ಕ್ಷೇತ್ರದಲ್ಲೇ ಇಷ್ಟೊಂದು ತಿರಸ್ಕೃತ ಮತಗಳು!
ಹಂಚಿಕೊಳ್ಳಿಪಶ್ಚಿಮ ಪದವೀಧರ ಕ್ಷೇತ್ರದಲ್ಲಿ 10,245, ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ 1,873 ಮತಗಳು ತಿರಸ್ಕೃತ ಪದವೀಧರರು, ಶಿಕ್ಷಕರ ಮತದಾನದಲ್ಲೇ ಎಡವಟ್ಟೇಕೆ? ಪ್ರಜ್ಞಾವಂತ ಮತದಾರರ ಮತಪತ್ರಗಳಲ್ಲಿನ ತಪ್ಪುಗಳ ಬಗ್ಗೆ ಚರ್ಚೆ ಧಾರವಾಡವಿಧಾನ ಪರಿಷತ್ ಚುನಾವಣೆಯಲ್ಲಿ ಪ್ರಜ್ಞಾವಂತ ಮತದಾರರೆಂದೇ ಗುರುತಿಸಿಕೊಂಡಿರುವ ಪದವೀಧರರು ಮತ್ತು ಶಿಕ್ಷಕರು ಮತ ಚಲಾಯಿಸುವ ಕ್ಷೇತ್ರಗಳಲ್ಲಿಯೇ ದೊಡ್ಡ ಪ್ರಮಾಣದಲ್ಲಿ ಮತಗಳು ತಿರಸ್ಕೃತಗೊಂಡಿರುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ. ವಿದ್ಯಾವಂತರು, ಶಿಕ್ಷಕರು ಹಾಗೂ ಸಮಾಜಕ್ಕೆ ಮಾರ್ಗದರ್ಶನ ನೀಡುವ ವರ್ಗದ ಮತದಾರರು ಮತಪತ್ರದಲ್ಲಿ ಅಗತ್ಯ ಎಚ್ಚರಿಕೆ ವಹಿಸದಿರುವುದು ಏಕೆ ಎಂಬ ಪ್ರಶ್ನೆ ಸಾರ್ವಜನಿಕ…
