ರಥಬೀದಿಯಲ್ಲಿ ಕಂಗೊಳಿಸಿದ ಹಯಗ್ರೀವ ಸನ್ನಿಧಾನ; ಸಹಸ್ರಾರು ಭಕ್ತರಿಂದ ಭಕ್ತಿ ಸಮರ್ಪಣೆ
ಧಾರವಾಡ
ಮಧ್ವ ಜಯಂತಿ ಅಂಗವಾಗಿ ಬುಧವಾರ ಧಾರವಾಡದ ಮಾಳಮಡ್ಡಿಯಲ್ಲಿರುವ ಉತ್ತರಾದಿಮಠದ ಸರ್ವ ವಿದ್ಯಾಪ್ರದ ಹಯಗ್ರೀವ ಸನ್ನಿಧಾನದ ವತಿಯಿಂದ ನಗರದ ರಥಬೀದಿಯಲ್ಲಿ ಅದ್ದೂರಿ ಮೆರವಣಿಗೆ ಹಾಗೂ ಪಲ್ಲಕ್ಕಿ ಉತ್ಸವ ಭಕ್ತಿಭಾವದಿಂದ ಜರುಗಿತು.
ಧಾರ್ಮಿಕ ಸಂಭ್ರಮದೊಂದಿಗೆ ನಡೆದ ಉತ್ಸವದಲ್ಲಿ ಶ್ರೀ ಹಯಗ್ರೀವ ದೇವರ ಪಲ್ಲಕ್ಕಿ ಮೆರವಣಿಗೆ ಭಕ್ತರ ಗಮನ ಸೆಳೆಯಿತು. ಭಜನಾ ಮಂಡಳಿಗಳ ಭಕ್ತಿಗೀತೆ, ನಾಮಸ್ಮರಣೆ ಹಾಗೂ ಭಕ್ತರ ಪಾಲ್ಗೊಳ್ಳುವಿಕೆಯಿಂದ ರಥಬೀದಿಯಲ್ಲಿ ಆಧ್ಯಾತ್ಮಿಕ ವಾತಾವರಣ ನಿರ್ಮಾಣವಾಗಿತ್ತು. ಸಹಸ್ರಾರು ಭಕ್ತರು ಉತ್ಸವದಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದು ಭಕ್ತಿ ಸಮರ್ಪಿಸಿದರು.
ಈ ಸಂದರ್ಭದಲ್ಲಿ ಪಂಡಿತ ಪ್ರಹ್ಲಾದಾಚಾರ ಗಲಗಲಿ, ವಾದಿರಾಚಾರ ತಡಕೋಡ, ಕೇಶವಾಚಾರ, ಸಂದೀಪಾಚಾರ, ಪ್ರಮೋದಾಚಾರ, ಶ್ರೀನಿವಾಸ ಮಾನ್ವಿ, ಶ್ರೀನಿಧಿ ಆಚಾರ್, ಶಾಂತೇಶ ಆಚಾರ್, ಆರ್.ಎಂ. ಕುಲಕರ್ಣಿ, ಶ್ರೀಕಾಂತ ಕರ್ಜಗಿ, ಎಚ್.ಬಿ. ಕುಲಕರ್ಣಿ, ಪರ್ವತಿಕರ್, ವೆಂಕಟೇಶ ದೇಶಪಾಂಡೆ, ಶ್ರೀಹರಿ ಕೊಪ್ಪರ, ಆನಂದ ದೇಶಮುಖ, ವೇದವ್ಯಾಸ ಹುನಗುಂದ ಹಾಗೂ ಜಯತೀರ್ಥ ಗಲಗಲಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಭಜನಾ ಮಂಡಳಿಗಳ ಸದಸ್ಯರು, ಭಕ್ತವೃಂದ, ಯುವಾತ್ಮ ಹಾಗೂ ವಿಶ್ವ ಮಧ್ವ ಮಹಾ ಪರಿಷತ್ತಿನ ಸದಸ್ಯರು ಸೇರಿದಂತೆ ಅಪಾರ ಸಂಖ್ಯೆಯ ಭಕ್ತರು ಉತ್ಸವದಲ್ಲಿ ಭಾಗವಹಿಸಿದ್ದರು. ಧಾರ್ಮಿಕ ಉತ್ಸವದ ಬಳಿಕ ಭಕ್ತರಿಗೆ ಪ್ರಸಾದ ವಿತರಣೆ ನಡೆಯಿತು.
