ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಸಂಕ್ಷಿಪ್ತವಾಗಿ ನಡೆದ ಕಾರ್ಯಕ್ರಮ
ಧಾರವಾಡ
ಕರ್ನಾಟಕ ಸರ್ಕಾರದ ವತಿಯಿಂದ ಜಗದ್ಗುರು ಶ್ರೀಮನ್ ಮಧ್ವಾಚಾರ್ಯರ ಜಯಂತಿ ಆಚರಣೆಯ ಅಂಗವಾಗಿ ಧಾರವಾಡ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬುಧವಾರ ಜಯಂತಿ ಕಾರ್ಯಕ್ರಮವನ್ನು ಭಕ್ತಿಭಾವದಿಂದ ಆಚರಿಸಲಾಯಿತು.
ಅಪರ ಜಿಲ್ಲಾಧಿಕಾರಿ ಗೀತಾ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಗದ್ಗುರು ಶ್ರೀಮನ್ ಮಧ್ವಾಚಾರ್ಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗೌರವ ಸಮರ್ಪಿಸಲಾಯಿತು. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ಸಂಕ್ಷಿಪ್ತವಾಗಿ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಮಾಧ್ವ ಬ್ರಾಹ್ಮಣ ಸಭಾದ ಹಿರಿಯ ಉಪಾಧ್ಯಕ್ಷ ಹನುಮಂತ ಕೊಡಬಾಗಿ, ಪಂಡಿತ ಕೇಶವಾಚಾರ್ಯ ಕೆರೂರ ಹಾಗೂ ಪ್ರಹ್ಲಾದಾಚಾರ್ಯ ಗಲಗಲಿ ವೇದಿಕೆಯಲ್ಲಿದ್ದರು. ಶ್ರೀಮನ್ ಮಧ್ವಾಚಾರ್ಯರ ತತ್ವಾದರ್ಶಗಳನ್ನು ಸ್ಮರಿಸುವ ಮೂಲಕ ಕಾರ್ಯಕ್ರಮಕ್ಕೆ ಭಕ್ತಿಪೂರ್ಣವಾಗಿ ತೆರೆ ಎಳೆಯಲಾಯಿತು.
ಪಂಡಿತ ಸುರೇಶ ಆಚಾರ್ಯ ರಾಯಚೂರು, ಶ್ರೀನಿವಾಸ ಆಚಾರ್ಯ ಮಾನ್ವಿ, ಭೀಮಸೇನ ಆಚಾರ್ಯ ಮಳಗಿ, ಸುಮತಿ ರಾಯಚೂರು, ರವೀಂದ್ರ ದೇಶಪಾಂಡೆ, ಅರವಿಂದ ಕುಲಕರ್ಣಿ, ವೆಂಕಟೇಶ ಮಳಗಿ, ಆನಂದ ಗಂಭೀರ, ಶ್ರೀನಿವಾಸ ಪಾಟೀಲ ಹಾಗೂ ವೇದವ್ಯಾಸ ಹುನಗುಂದ ಸೇರಿದಂತೆ ಅನೇಕ ಮಾಧ್ವ ಭಗವದ್ಭಕ್ತರು, ಪಂಡಿತರು ಹಾಗೂ ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

