ಆಕರ್ಷಕ ನಗದು ಬಹುಮಾನಗಳ ‘ಧಾರವಾಡ ೧೦ಕೆ’ ಓಟದ ಸ್ಪರ್ಧೆ ನ. ೨೯ರಂದು

ಹಂಚಿಕೊಳ್ಳಿ

ಧಾರವಾಡ
ವರ್ಷದಿಂದ ವರ್ಷಕ್ಕೆ ಜನಪ್ರಿಯತೆ ಪಡೆಯುತ್ತಿರುವ ಧಾರವಾಡ ಜಿಲ್ಲಾ ಒಲಿಂಪಿಕ್ ಅಸೋಸಿಯೇಷನ್(ಡಿಡಿಒಎ) ಆಶ್ರಯದ `ಧಾರವಾಡ ೧೦ಕೆ’ ಓಟದ ಸ್ಪರ್ಧೆ ಇದೇ ನವಂಬರ್ ೨೯ರಂದು ನಡೆಯುವ ನಿರೀಕ್ಷೆಯಿದೆ.

ಮುಕ್ತ ವಿಭಾಗದಲ್ಲಿ ಪುರುಷ ಹಾಗೂ ಮಹಿಳೆಯರಿಗಾಗಿ ನಡೆಯಲಿರುವ ೧೦ ಕಿ.ಮೀ. ಓಟದ ಸ್ಪರ್ಧೆಯಲ್ಲಿ ವಿಜೇತರಾಗುವವರು ೧೦ ಸಹಸ್ರ ರೂಪಾಯಿಗಳ ನಗದು ಬಹುಮಾನ ಗಿಟ್ಟಿಸಲಿದ್ದಾರೆ. ಎರಡೂ ವಿಭಾಗಗಳಲ್ಲಿ ಮೊದಲ ೬ ಸ್ಥಾನ ಪಡೆಯುವವರೆಲ್ಲರೂ ಆಕರ್ಷಕ ನಗದು ಬಹುಮಾನಗಳ ಜೊತೆಗೆ ಪದಕ ಹಾಗೂ ಪ್ರಮಾಣ ಪತ್ರಗಳನ್ನೂ ಪಡೆದುಕೊಳ್ಳಲಿದ್ದಾರೆ.

ಈ ಸಲ ಹಿರಿಯ ಮಯೋಮಿತಿ ವರ್ಗದವರಿಗೂ ಅಂದೇ ಪ್ರತ್ಯೇಕ ಸ್ಪರ್ಧೆ ಏರ್ಪಡಿಸುವ ಉದ್ದೇಶವಿದ್ದು ಅಲ್ಲಿಯ ವಿಜೇತರೂ ಆಕರ್ಷಕ ನಗದು ಬಹುಮಾನ ಪಡೆಯಲಿದ್ದಾರೆ. ಇದೇ ಸಂದರ್ಭದಲ್ಲಿ ಧಾರವಾಡ ಜಿಲ್ಲಾ ಮಟ್ಟದ ೧೬ ವರ್ಷದವರೊಳಗಿನ ಬಾಲಕ-ಬಾಲಕಿಯರಿಗಾಗಿಯೂ ಪ್ರತ್ಯೇಕವಾಗಿ ೫ ಕಿ.ಮೀ. ಓಟದ ಸ್ಪರ್ಧೆ ಏರ್ಪಡಿಸಲಾಗುವುದಿದ್ದು ಇಲ್ಲೂ ಮೊದಲ ೬ ಸ್ಥಾನ ಸಂಪಾದಿಸುವವರು ಆಕರ್ಷಕ ನಗದು ಬಹುಮಾನ ಬಾಚಿಕೊಳ್ಳಲಿದ್ದಾರೆ.

ನಿನ್ನೆ ಶನಿವಾರ ಧಾರವಾಡ ಜಿಲ್ಲಾ ಒಲಿಂಪಿಕ್ ಅಸೋಸಿಯೇಷನ್(ಡಿಡಿಒಎ) ಅಧ್ಯಕ್ಷರೂ ಆಗಿರುವ ಮಾಜಿ ಮಹಾಪೌರ ಶಿವು ಹಿರೇಮಠ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಕುರಿತು ನಿರ್ಣಯವೊಂದನ್ನು ಕೈಕೊಳ್ಳಲಾಗಿದ್ದು, ಸ್ಪರ್ಧೆಯ ಕುರಿತಂತೆ ಹೆಚ್ಚಿನ ವಿವರಗಳನ್ನು ಇನ್ನೂ ಅಂತಿಮಗೊಳಿಸಬೇಕಿದೆ.


ಹಂಚಿಕೊಳ್ಳಿ

7 thoughts on “ಆಕರ್ಷಕ ನಗದು ಬಹುಮಾನಗಳ ‘ಧಾರವಾಡ ೧೦ಕೆ’ ಓಟದ ಸ್ಪರ್ಧೆ ನ. ೨೯ರಂದು”

  1. Good decision… let’s support and need more number of participants to make this event grand success & memorable one 👌👌

  2. ಹಿರಿಯ ಓಟಗಾರರಿಗೂ ಒಂದು ಒಳ್ಳೆ ಅವಕಾಶ

Leave a Reply

Your email address will not be published. Required fields are marked *