ಪರಿಸರ ಸ್ನೇಹಿ ಮಣ್ಣಿನ ಗಣಪ ವಿತರಣೆ

ಹಂಚಿಕೊಳ್ಳಿ

ಧಾರವಾಡ
ಮಾಜಿ ಸಚಿವ ವಿನಯ ಕುಲಕರ್ಣಿ ಅಭಿಮಾನಿ ಬಳಗದ ವತಿಯಿಂದ ಶ್ರೀ ಗೌರಿ ಗಣೇಶ ಹಬ್ಬದ ನಿಮಿತ್ತ ಸೋಮವಾರ ನಗರದ ರವಿವಾರ ಪೇಟೆಯಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ನೂರಾರು ಪರಿಸರ ಸ್ನೇಹಿ ಮಣ್ಣಿನ ಗಣಪತಿಗಳನ್ನು ವಿತರಿಸುವ ಮೂಲಕ ಪರಿಸರ ಸಂರಕ್ಷಣೆಯ ಸಂದೇಶ ಸಾರಿರುವುದು ಗಮನಾರ್ಹ.
ಈ ಮಹತ್ವದ ಕಾರ್ಯಕ್ರಮಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಯಿತು. ಮಣ್ಣಿನ ಗಣಪತಿ ಮನೆಗೆ ಬರಲಿ… ನಮ್ಮ ಪರಿಸರವೂ ಹಸಿರಾಗಲಿ ಎಂಬ ಸದುದ್ದೇಶದೊಂದಿಗೆ ನಡೆದ ಈ ಕಾರ್ಯಕ್ರಮವು ಪರಿಸರ ಜಾಗೃತಿಗೆ ಮಾದರಿಯಾಯಿತು.
ಈ ಸಂದರ್ಭದಲ್ಲಿ ಬಸವರಾಜ ಜಾಧವ, ಹಿದಾಯತ್ ರಾಯಚೂರು, ಕಲಂದರ್ ಜಾಗಿರದಾರ, ಆನಂದ ಸಿಂಗನಾಥ, ನಿಂಗಪ್ಪ ಬಾಗೋಜಿ, ಮಂಜುನಾಥ ಮಾನೆ, ಸ್ನೇಹ ಧಾರವಾಡಕರ, ಆದಿಲ್ ಮಸ್ತಾನವಾಲೆ, ಶಿವು ನಿಗದಿ, ಮೈಲಾರಿ ಚವ್ಹಾಣ, ಪ್ರತೀಕ ತೋಟದವರ, ಪ್ರಥಮ ಅಬೋಲೆ, ಚಾಂದಸಾಬ ಮುಲ್ಲಾ, ಪ್ರದೀಪ ಮರಿಬಸನವರ, ನಹೀಮ್ ಕಿತ್ತೂರ, ವಿನಾಯಕ ಹಾನಗಲ್, ಮಂಜುನಾಥ ಕರಾಡೆ ಸೇರಿದಂತೆ ಅನೇಕ ಅಭಿಮಾನಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.


ಹಂಚಿಕೊಳ್ಳಿ

Leave a Reply

Your email address will not be published. Required fields are marked *