ಸಿಎಂ ಭೇಟಿಯಾದ ವಿನಯ

ಹಂಚಿಕೊಳ್ಳಿ

ಧಾರವಾಡ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಮಾಜಿ ಸಚಿವ, ಶಾಸಕ ವಿನಯ ಕುಲಕರ್ಣಿ ಭೇಟಿ ಮಾಡಿ, ಧಾರವಾಡ ಗ್ರಾಮೀಣ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅಗತ್ಯವಿರುವ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿದರು.

ಮುಖ್ಯವಾಗಿ, ತುಪ್ಪರಿ ಹಳ್ಳದ ಸಂರಕ್ಷಣಾ ಕಾಮಗಾರಿ, ಹುಣಸಿಕಟ್ಟಿ ಗ್ರಾಮದ ಏತ ನೀರಾವರಿ ಯೋಜನೆ, ಧಾರವಾಡ ನಗರದ 1ರಿಂದ 9ನೇ ವಾರ್ಡ್‌ಗಳ ಯುಜಿಡಿ ಕಾಮಗಾರಿಗಳಿಗೆ ಅಗತ್ಯವಿರುವ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿಕೊಂಡರು.

ಈ ಕಾಮಗಾರಿಗಳಿಗೆ ಶೀಘ್ರ ಅನುದಾನ ದೊರೆತು ಕ್ಷೇತ್ರದ ಅಭಿವೃದ್ಧಿಗೆ ಮತ್ತಷ್ಟು ವೇಗ ಸಿಗುವ ವಿಶ್ವಾಸವಿದೆ ಎಂದು ವಿನಯ ಕುಲಕರ್ಣಿ ಹಂಚಿಕೊಂಡಿದ್ದಾರೆ.


ಹಂಚಿಕೊಳ್ಳಿ

Leave a Reply

Your email address will not be published. Required fields are marked *