ಶ್ರೀಗಳ ಪಟ್ಟಾಧಿಕಾರ ಮಹೋತ್ಸವ; ಉಚಿತ ಕಣ್ಣಿನ ತಪಾಸಣಾ ಶಿಬಿರ

ಹಂಚಿಕೊಳ್ಳಿ

ಧಾರವಾಡ
ಮೂರುಸಾವಿರ ವಿರಕ್ತಮಠದ ಪೀಠಾಧಿಪತಿ ಶ್ರೀ ಕುಮಾರ ವಿರೂಪಾಕ್ಷೇಶ್ವರ ಸ್ವಾಮೀಜಿ ಅವರ 25ನೇ ವರ್ಷದ ಪಟ್ಟಾಧಿಕಾರ ಮಹೋತ್ಸವ ಪ್ರಯುಕ್ತ ಉಪ್ಪಿನಬೆಟಗೇರಿಯ ಪತ್ರಿಕಾ ವಿತರಕರ ಬಳಗದಿಂದ ಪತ್ರಿಕಾ ದಿನಾಚರಣೆ, ಪತ್ರಿಕಾ ವಿತರಕರ ದಿನಾಚರಣೆ, ವಿತಕರಿಗೆ ಬ್ಯಾಗ್ ವಿತರಣೆ ಹಾಗೂ ಡಾ. ಎಂ.ಎಂ. ಜೋಶಿ ನೇತ್ರಾಲಯದಿಂದ ಉಚಿತ ಕಣ್ಣಿನ ತಪಾಸಣಾ ಶಿಬಿರವನ್ನು ತಾಲೂಕಿನ ಉಪ್ಪಿನಬೆಟಗೇರಿ ಗ್ರಾಮದ ಶ್ರೀಮಠದಲ್ಲಿ ಸೆ.30 ರಂದು ಬೆಳಿಗ್ಗೆ 10:00 ಗಂಟೆಗೆ ಆಯೋಜಿಸಲಾಗಿದೆ.

ಕುಮಾರ ವಿರೂಪಾಕ್ಷ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದು, ಕರ್ನಾಟಕ ಬಯಲು ಸೀಮೆ ಪ್ರದೇಶಾಭಿವೃದ್ದಿ ಮಂಡಳಿಯ ಮಾಜಿ ಅಧ್ಯಕ್ಷ ತವನಪ್ಪ ಅಷ್ಟಗಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಪತ್ರಕರ್ತ ಶ್ರೀಶೈಲ ಗೌರಿಮಠ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಕರ್ನಾಟಕ ಪತ್ರಿಕಾ ವಿತರಕರ ಒಕ್ಕೂಟದ ರಾಜ್ಯ ಉಪಾಧ್ಯಕ್ಷ ಪ್ರಶಾಂತಕುಮಾರ ಎನ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿಣಿ ಸದಸ್ಯ ಗಣಪತಿ ಗಂಗೊಳ್ಳಿ, ಜಿ.ಪಂ. ಮಾಜಿ ಉಪಾಧ್ಯಕ್ಷ ನಿಜನಗೌಡ ಪಾಟೀಲ, ಕಾಂಗ್ರೆಸ್ ಮುಖಂಡ ಮಂಜುನಾಥ ಸಂಕಣ್ಣವರ, ಗುತ್ತಿಗೆದಾರ ವರ್ಧಮಾನ ಅಷ್ಟಗಿ, ಉದ್ಯಮಿಗಳಾದ ಗಂಗಾಧರ ಹೂಲಿ, ಮಂಜುನಾಥ ಹಿರೇಮಠ ಆಗಮಿಸಲಿದ್ದಾರೆ.

ವಿಶೇಷ ಆಹ್ವಾನಿತರಾಗಿ ಗರಗ ಪೊಲೀಸ್ ಠಾಣೆಯ ಪಿಎಸ್ ಐ ಪ್ರವೀಣ ಗಂಗೋಳ, ಗ್ರಾ.ಪಂ.ಆಡಳಿತಾಧಿಕಾರಿ ಚಂದ್ರು ಪೂಜಾರ, ಹೆಸ್ಕಾಂ ಉಪವಿಭಾಗಾಧಿಕಾರಿ ಈರಣ್ಣ ಶಿಂದಗಿಮಠ, ಪಿಡಿಓ ಬಿ.ಎ. ಬಾವಾಕಾನವರ ಪಾಲ್ಗೊಳ್ಳಲಿದ್ದಾರೆ. ಇನ್ನು ವಿಶೇಷ ಆಮಂತ್ರಿತರಾಗಿ ಧಾರವಾಡದ ಪತ್ರಿಕಾ ವಿತರಕರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ನಾಗರಾಜ ಕುಲಕರ್ಣಿ, ಪತ್ರಕರ್ತರಾದ ಶಶಿಧರ ಬುದ್ನಿ, ಪ್ರವೀಣ ಓಂಕಾರಿ, ಶಿವಪ್ರಭು ಈಸರಗೊಂಡ, ಪ್ರಕಾಶ ಹೂಗಾರ, ರಮೇಶ ಓರಣಕರ, ಚನ್ನಬಸಪ್ಪ ಲಗಮಣ್ಣವರ ಭಾಗವಹಿಸಲಿದ್ದಾರೆ.

ಉಚಿತ ಕಣ್ಣಿನ ತಪಾಸಣಾ ಶಿಬಿರ
ಶ್ರೀಕುಮಾರ ವಿರೂಪಾಕ್ಷೇಶ್ವರ ಸ್ವಾಮೀಜಿ ಅವರ 25ನೇ ವರ್ಷದ ಪಟ್ಟಾಧಿಕಾರ ಮಹೋತ್ಸವ ಪ್ರಯುಕ್ತ ಇಲ್ಲಿಯ ಶ್ರೀಮಠದ ಆವರಣದಲ್ಲಿ ಬೆಳಿಗ್ಗೆ 11:00 ರಿಂದ ಮಧ್ಯಾಹ್ನ 3:00 ಗಂಟೆವೆರೆಗೆ ಡಾ.ಎಂ.ಎಂ.ಜೋಶಿ ನೇತ್ರಾಲಯದಿಂದ ಉಚಿತ ಕಣ್ಣಿನ ತಪಾಸಣೆ ಶಿಬಿರ ನಡೆಯಲಿದ್ದು, ವೈದ್ಯರ ತಂಡದಿಂದ ಕಣ್ಣಿನ ತಪಾಸಣೆ ಆಗಲಿದೆ. ಇನ್ನು ಪತ್ರಿಕಾ ವಿತರಕರ ದಿನಾಚರಣೆ ಪ್ರಯುಕ್ತ ವಿತಕರಿಗೆ ಬ್ಯಾಗ್ ವಿತರಣೆ ನಡೆಯಲಿದೆ.


ಹಂಚಿಕೊಳ್ಳಿ

Leave a Reply

Your email address will not be published. Required fields are marked *