ಕೃಷಿ ಮೇಳದ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ

ಹಂಚಿಕೊಳ್ಳಿ

ಧಾರವಾಡ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಶುಕ್ರವಾರದಿಂದ ನಾಲ್ಕು ದಿನಗಳ ವರೆಗೆ ನಡೆಯುತ್ತಿರುವ ಕೃಷಿ ಮೇಳದ ಕ್ಷಣಕ್ಷಣದ ಸುದ್ದಿ ಹಾಗೂ ವಿಶೇಷತೆಗಳು ನಿಮ್ಮ SKSUDDIMANE.COM ಅಲ್ಲಿ ಲಭ್ಯ

ಧಾರವಾಡ
ಕೃಷಿ ವಿಶ್ವವಿದ್ಯಾಲಯದ ರೈತ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ನಡೆಯುತ್ತಿರುವ ನಾಲ್ಕು ದಿನಗಳ ಕೃಷಿ ಮೇಳದ ಅಂಗವಾಗಿ ಆಯೋಜಿಸಿರುವ ಫಲಪುಷ್ಪ ಪ್ರದರ್ಶನಕ್ಕೆ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎನ್.ಬಿ. ಪ್ರಕಾಶ ಶುಕ್ರವಾರ ಚಾಲನೆ ನೀಡಿದರು.

ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಸೆ.25ರಿಂದ 28ರವರೆಗೆ ನಡೆಯಲಿರುವ ಕೃಷಿ ಮೇಳದಲ್ಲಿ ಫಲಪುಷ್ಪ ಪ್ರದರ್ಶನ ಪ್ರಮುಖ ಆಕರ್ಷಣೆಯಾಗಿ ಗಮನ ಸೆಳೆಯುತ್ತಿದೆ. ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ವಿವಿಧ ವಿಭಾಗಗಳ ಸಂಶೋಧಕರು ಕೈಗೊಂಡಿರುವ ಸಂಶೋಧನೆಗಳ ಫಲವಾಗಿ ಅಭಿವೃದ್ಧಿಪಡಿಸಲಾದ ವಿವಿಧ ಬಗೆಯ ಫಲ, ಪುಷ್ಪ ಹಾಗೂ ಕೃಷಿ ಉತ್ಪನ್ನಗಳನ್ನು ಪ್ರದರ್ಶನದಲ್ಲಿ ಅಚ್ಚುಕಟ್ಟಾಗಿ ಅಣಿಗೊಳಿಸಲಾಗಿದೆ.

ವಿವಿಧ ಬಗೆಯ ಹಣ್ಣುಗಳು, ಹೂವುಗಳು ಹಾಗೂ ಕೃಷಿ ಉತ್ಪನ್ನಗಳ ವೈವಿಧ್ಯವನ್ನು ಒಂದೇ ಸ್ಥಳದಲ್ಲಿ ವೀಕ್ಷಿಸುವ ಅವಕಾಶ ಕಲ್ಪಿಸಲಾಗಿದ್ದು, ರೈತರು, ವಿದ್ಯಾರ್ಥಿಗಳು, ಯುವಜನರು ಹಾಗೂ ಸಾರ್ವಜನಿಕರು ಪ್ರದರ್ಶನದತ್ತ ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ಕೃಷಿ ಕ್ಷೇತ್ರದಲ್ಲಿ ನಡೆಯುತ್ತಿರುವ ಸಂಶೋಧನೆಗಳು ಹಾಗೂ ಹೊಸ ತಳಿಗಳ ಕುರಿತು ಪ್ರದರ್ಶನದ ಮೂಲಕ ಮಾಹಿತಿ ನೀಡಲಾಗುತ್ತಿದೆ.
ಮೇಳಕ್ಕೆ ಆಗಮಿಸುವ ರೈತರಿಗೆ ಫಲ-ಪುಷ್ಪ ಬೆಳೆಗಳ ಕುರಿತು ವೈಜ್ಞಾನಿಕ ಮಾಹಿತಿ, ಹೊಸ ತಳಿಗಳ ಪರಿಚಯ ಹಾಗೂ ಆಧುನಿಕ ಕೃಷಿ ಪದ್ಧತಿಗಳ ಬಗ್ಗೆ ತಿಳಿದುಕೊಳ್ಳಲು ಪ್ರದರ್ಶನ ಸಹಕಾರಿಯಾಗಲಿದೆ.

ಈ ಸಂದರ್ಭದಲ್ಲಿ ಡಾ. ಎ.ಎಸ್. ಸಜ್ಜನ್, ಡಾ. ಆರ್.ಆರ್. ಹಂಚಿನಾಳ, ಜಯಶ್ರೀ ಶಿಂತ್ರಿ, ವೀರನಗೌಡ ಪೋಲಿಸಗೌಡರ, ಪಾರ್ವತಿ ಎಸ್. ಕುರ್ಲೆ, ರವಿಕುಮಾರ್ ಮಾಳಗೇರ, ಬಸವರಾಜ ಕುಂದಗೋಳಮಠ, ಮಾಲತೇಶ ಶ್ಯಾಗೋಟ, ಡಾ. ಎಂ.ವಿ. ಮಂಜುನಾಥ, ಡಾ. ಮಂಜುಳಾ, ಡಾ. ಟಿ.ಆರ್. ಶಶಿಧರ, ಡಾ. ಸುರೇಖಾ ಸಕನಗೌಡರ ಸೇರಿದಂತೆ ಕೃಷಿ ವಿಶ್ವವಿದ್ಯಾಲಯದ ಅಧಿಕಾರಿಗಳು, ವಿಜ್ಞಾನಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.


ಹಂಚಿಕೊಳ್ಳಿ

Leave a Reply

Your email address will not be published. Required fields are marked *