ಹುಬ್ಬಳ್ಳಿ
ವಾಣಿಜ್ಯ ನಗರಿ ಹುಬ್ಬಳ್ಳಿ ಗೋಕುಲ ರಸ್ತೆಯ ಪಾರ್ಚೂನ್ ಹೊಟೆಲ್ ಮಾಲೀಕರ ಅಣ್ಣನ ಮಗ ನೇಣಿಗೆ ಶರಣಾದ ಘಟನೆ ಶುಕ್ರವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.
ಗೋಕುಲ್ ರಸ್ತೆಯ ಆರ್.ಕೆ ನಗರದ ತಮ್ಮ ನಿವಾಸದಲ್ಲಿ ತನ್ನ ರೂಮಿನಲ್ಲಿ ನೇಣಿಗೆ ಶರಣಾಗಿದ್ದಾನೆ. ಸುಮಾರು 20 ವಯಸ್ಸಿನ ಚಂದ್ರು ದಂಡಿನ ಎಂದು ಗುರುತಿಸಲಾಗಿದೆ. ಆದಿತ್ಯ ಎಂದು ಇನ್ನೊಂದು ಹೆಸರಿನಿಂದ ಚಂದ್ರುನನ್ನು ಕರೆಯಲಾಗುತ್ತಿತ್ತು.
ಈ ಯುವಕ ಚಂದ್ರು ಹಿಂದೆ ಕೂಡಾ ಹಲವು ಬಾರಿ ಆತ್ಮಹತ್ಯೆಗೆ ಪ್ರಯತ್ನ ಮಾಡಿದ್ದ ಎಂಬ ಮಾಹಿತಿ ಪೊಲೀಸರಿಂದ ತಿಳಿದು ಬಂದಿದೆ. ಕೇವಲ ಎಸ್ಎಸ್ಎಲ್ಸಿ ವರೆಗೆ ಮಾತ್ರ ಅಭ್ಯಾಸ ಮಾಡಿದ್ದು, ಮಾನಸಿಕ ಸಮಸ್ಯೆಗೆ ಒಳಗಾಗಿದ್ದ ಎನ್ನುವ ಮಾಹಿತಿ ಲಭ್ಯವಾಗಿದೆ.
ಸ್ಥಳದಲ್ಲಿ ಗೋಕುಲ ರೋಡ ಪೊಲೀಸ್ ಠಾಣೆ ಪೊಲೀಸರು ಆಗಮಿಸಿದ್ದು, ಯಾವ ಕಾರಣಕ್ಕಾಗಿ ಯುವಕ ಆತ್ಮಹತ್ಯೆ ಮಾಡಿಕೊಂಡ ಎನ್ನುವ ಮಾಹಿತಿ ಕಲೆ ಹಾಕುತ್ತಿದ್ದಾರೆ.
