ಡಬ್ಲುಪಿಎಲ್ ಜ. ೧೪ ರಿಂದ ಹರಾಜು ಅ. ೨೮ರಂದು

ಹಂಚಿಕೊಳ್ಳಿ

ಮುಂಬೈ

ಮಹಿಳಾ ಪ್ರೀಮಿಯರ್ ಲೀಗ್(ಡಬ್ಲುಪಿಎಲ್)ನ ೫ನೇ ಆವೃತ್ತಿ ೨೦೨೭ರ ಜನವರಿ ೧೪ ರಿಂದ ಫೆಬ್ರುವರಿ ೭ರ ವರೆಗೆ ನಡೆಯಲಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿ.ಸಿ.ಸಿ.ಐ.) ಬುಧವಾರ ಪ್ರಕಟಿಸಿದೆ.

ಕಾರ್ಯಕ್ರಮದನ್ವಯ ಸಪ್ಟೆಂಬರ್ ೨೮ ರಂದು ಐದೂ ಫ್ರೆಂಚೈಸಿಗಳು ತಮ್ಮ ಹಾಲಿ ತಂಡದಲ್ಲಿ ಯಾರನ್ನು ಉಳಿಸಿಕೊಳ್ಳಬೇಕು ಎಂದು ನಿರ್ಧರಿಸಲಿದ್ದು, ಹೊಸ ತಂಡ ಕಟ್ಟುವ ಆಟಗಾರರ ಹರಾಜು ಪ್ರಕ್ರಿಯೆ ಅಕ್ಟೋಬರ್ ೨೮ರಂದು ಕೊಚ್ಚಿಯ ಗ್ಯಾಂಡ್ ಹಯಾತ್‌ನಲ್ಲಿ ನಡೆಯಲಿದೆ ಎಂದು ಬಿಸಿಸಿಐ ತಿಳಿಸಿದೆ.

ಮಹಿಳಾ ಪ್ರೀಮಿಯರ್ ಲೀಗ್‌ನ ೨೦೨೬ರ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ತಂಡವು ಫೈನಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೋಲಿಸಿ ೨ನೇ ಸಲ ಪ್ರಶಸ್ತಿ ಗೆದ್ದಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.

ಡಬ್ಲುಪಿಎಲ್‌ನ ಈ ಸಲದ ಆವೃತ್ತಿಯಲ್ಲೂ ಐದು ತಂಡಗಳಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಡೆಲ್ಲಿ ಕ್ಯಾಪಿಟಲ್ಸ್, ಮುಂಬೈ ಇಂಡಿಯನ್ಸ್, ಗುಜರಾತ ಜೈಂಟ್ಸ್ ಹಾಗೂ ಯು.ಪಿ. ವಾರಿಯರ್ಸ್ ಅಂಕಣದಲ್ಲಿರಲಿವೆ.

೨೦೨೩ರಲ್ಲಿ ಪ್ರಾರಂಭವಾದಾಗಿನಿಂದಲೂ ಡಬ್ಲುಪಿಎಲ್ ನಿತರಂತರವಾಗಿ ಬೆಳೆಯುತ್ತಿದ್ದು, ವಿಶ್ವದ ಪ್ರಮುಖ ಮಹಿಳಾ ಕ್ರಿಕೆಟ್ಟಿಗರ ಜೊತೆಗೆ ಭಾರತದ ಉದಯೋನ್ಮುಖ ಪ್ರತಿಭೆಗಳಿಗೂ ಬೃಹತ್ ವೇದಿಕೆ ಕಲ್ಪಿಸಿಕೊಟ್ಟಿದೆ.


ಹಂಚಿಕೊಳ್ಳಿ

Leave a Reply

Your email address will not be published. Required fields are marked *