ಧಾರವಾಡ
ರಾಷ್ಟ್ರೀಯ ಲೋಕ ಅದಾಲತ್ ಅಂಗವಾಗಿ ಸೆಪ್ಟೆಂಬರ್ 19ರಂದು ಧಾರವಾಡ ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ ಬಾಕಿ ಇದ್ದ 54,937 ಪ್ರಕರಣಗಳ ಪೈಕಿ 3,908 ಪ್ರಕರಣಗಳನ್ನು ಲೋಕ ಅದಾಲತ್ನಲ್ಲಿ ತೆಗೆದುಕೊಂಡು ಅವುಗಳ ಪೈಕಿ 2,160 ಬಾಕಿ ಇದ್ದ ಪ್ರಕರಣಗಳನ್ನು ಹಾಗೂ 31,090 ಪೂರ್ವ ವ್ಯಾಜ್ಯ ಪ್ರಕರಣಗಳನ್ನು ತೆಗೆದುಕೊಂಡು ಅವುಗಳ ಪೈಕಿ 27,531 ಪ್ರಕರಣಗಳನ್ನು ರಾಜೀ ಸಂಧಾನ ಮಾಡಿಸಲಾಗಿದೆ.
ವ್ಯಾಜ್ಯ ಪೂರ್ವ ಪ್ರಕರಣಗಳಲ್ಲಿ ಇತ್ಯರ್ಥ ಪಡಿಸಿಕೊಂಡ ಒಟ್ಟು ಮೊತ್ತ 29,11,872 ರೂಪಾಯಿಗಳು. ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದ್ದ ಪ್ರಕರಣಗಳಲ್ಲಿ ಇತ್ಯರ್ಥ ಪಡಿಸಿಕೊಂಡ ಒಟ್ಟು ಮೊತ್ತ 48,50,60,531 ರೂಪಾಯಿಗಳಾಗಿವೆ.
ಧಾರವಾಡ ಜಿಲ್ಲೆಯ ನ್ಯಾಯಾಲಯಗಳಲ್ಲಿ ವಿಚಾರಣೆಯಲ್ಲಿದ್ದ ವೈವಾಹಿಕ/ ಜೀವನಾಂಶ ಪ್ರಕರಣಗಳಲ್ಲಿ ನಡೆದ ರಾಜೀ ಸಂಧಾನದಲ್ಲಿ ಧಾರವಾಡ ಕೌಟುಂಬಿಕ ನ್ಯಾಯಾಲಯದಲ್ಲಿ ಒಟ್ಟು 09 ಪ್ರಕರಣಗಳಲ್ಲಿ ಯಶಸ್ವಿಯಾಗಿ ದಂಪತಿಗಳು ಒಂದಾಗಿ ಕೂಡಿಕೊಂಡಿರುತ್ತಾರೆ.
ಅದೇ ರೀತಿ ಹುಬ್ಬಳ್ಳಿಯ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದ್ದ ವೈವಾಹಿಕ/ ಜೀವನಾಂಶ ಪ್ರಕರಣಗಳಲ್ಲಿ ನಡೆದ ರಾಜೀ ಸಂಧಾನದಲ್ಲಿ ಹುಬ್ಬಳ್ಳಿಯ ಕೌಟುಂಬಿಕ ನ್ಯಾಯಾಲಯದಲ್ಲಿ ಒಟ್ಟು 12 ಪ್ರಕರಣಗಳಲ್ಲಿ ಯಶಸ್ವಿಯಾಗಿ ದಂಪತಿಗಳು ಒಂದಾಗಿ ಕೂಡಿಕೊಂಡಿರುತ್ತಾರೆ ಹಾಗೂ ಕುಂದಗೋಳ ನ್ಯಾಯಾಲಯದಲ್ಲಿ 2 ಪ್ರಕರಣಗಳಲ್ಲಿ ಯಶಸ್ವಿಯಾಗಿ ದಂಪತಿಗಳು ಒಂದಾಗಿ ಕೂಡಿಕೊಂಡಿರುತ್ತಾರೆ. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಎನ್. ವಿ. ವಿಜಯ ಅವರು ಎಲ್ಲ ಕುಟುಂಬಗಳಿಗೆ ಶುಭ ಹಾರೈಸಿದ್ದಾರೆ. 207 ಪ್ರಕರಣಗಳಲ್ಲಿ ಹಿರಿಯ ನಾಗರಿಕರು ರಾಜೀ ಸಂಧಾನದ ಮೂಲಕ ತಮ್ಮ ವಿವಾದಗಳನ್ನು ಇತ್ಯರ್ಥಪಡಿಸಿಕೊಂಡಿದ್ದಾರೆ.
