ಕೆ.ಇ. ಬೋರ್ಡ್ಸ್ ಪಿ.ಯು. ಕಾಲೇಜಿಗೆ ಕಬಡ್ಡಿ ಪ್ರಶಸ್ತಿ

ಹಂಚಿಕೊಳ್ಳಿ

ಧಾರವಾಡ: ಕೆ.ಇ. ಬೋರ್ಡಿನ ಮಾಳಮಡ್ಡಿಯ ಸಂಯುಕ್ತ ಪದವಿ ಪೂರ್ವ ಕಾಲೇಜು, ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ) ಹಾಗೂ ಸಪ್ತಾಪುರದ ಶ್ರೀ ಸತ್ಯ ಸಾಯಿ ಮಹಿಳಾ ಪದವಿ ಪೂರ್ವ ಕಾಲೇಜುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಧಾರವಾಡ ಶಹರ, ತಾಲೂಕಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ಕಬಡ್ಡಿ ಪಂದ್ಯಾವಳಿಯಲ್ಲಿ ಬಾಲಕರ ವಿಭಾಗದ ಪ್ರಶಸ್ತಿ ಗೆದ್ದುಕೊಂಡಿದೆ.

ನಾಯಕ ಯಲ್ಲಪ್ಪ ಸತಾಸಿನಿ, ಆನಂದ ಎಣ್ಣಿ ಹಾಗೂ ಓಂಕಾರ ಮಾದರ ಅವರುಗಳ ಉತ್ತಮ ಆಟದ ನೆರವಿನಿಂದ ಕೆ.ಇ. ಬೋರ್ಡ್ಸ್ ಪದವಿ ಪೂರ್ವ ಕಾಲೇಜು ಫೈನಲ್ ಪಂದ್ಯದಲ್ಲಿ ಪರಿಶ್ರಮ ಪಿ.ಯು. ಕಾಲೇಜನ್ನು ೧೭-೭ ಪಾಯಿಂಟ್‌ಗಳಿಂದ ಪರಾಭವಗೊಳಿಸಿತು. ಮಧ್ಯಂತರಕ್ಕೆ ವಿಜಯಿ ತಂಡ ೧೨-೪ ಪಾಯಿಂಟ್‌ಗಳಿಂದ ಮುಂದಿತ್ತು.

ಇದಕ್ಕೂ ಮೊದಲು ಸೆಮಿಫೈನಲ್ ಪಂದ್ಯಗಳಲ್ಲಿ ಮಾಳಮಡ್ಡಿಯ ಕೆ.ಇ. ಬೋರ್ಡ್ಸ್ ಪದವಿ ಪೂರ್ವ ಕಾಲೇಜು ಛತ್ರಪತಿ ಶಿವಾಜಿ ಪಿ.ಯು. ಕಾಲೇಜಿನ ಎದುರು ಜಯಿಸಿದ್ದರೆ, ಪರಿಶ್ರಮ ಪಿ.ಯು. ಕಾಲೇಜು ಸವದತ್ತಿ ರಸ್ತೆ ಕೆ.ಇ. ಬೋರ್ಡ್ಸ್ ಪಿ.ಯು. ಕಾಲೇಜನ್ನು ಸೋಲಿಸಿತ್ತು.

ಕೆ.ಇ. ಬೋರ್ಡಿನ ಕಾರ್ಯದರ್ಶಿ ಡಿ.ಎಸ್. ರಾಜಪುರೋಹಿತ ಹಾಗೂ ಕ್ರೀಡಾಭಿವೃದ್ಧಿ ಅಧಿಕಾರಿ ವಸಂತ ಮುರ್ಡೇಶ್ವರ ಮಂಗಳವಾರ ಆಟಗಾರರನ್ನು ಭೆಟ್ಟಯಾಗಿ ಅವರನ್ನು ಅಭಿನಂದಿಸಿದರು. ಪ್ರಾಚಾರ್ಯೆ ಡಾ. ಸುನೀತಾ ಕಡಪಟ್ಟಿ, ಹಿರಿಯ ಉಪನ್ಯಾಸಕರಾದ ರಮೇಶ ಮಾಂಗ, ಎಸ್.ಎಲ್. ಶೇಖರಗೋಳ ಹಾಗೂ ದೈಹಿಕ ಶಿಕ್ಷಣ ನಿರ್ದೇಶಕ ಮಹೇಶ ತೊಗಲಂಗಿ ಉಪಸ್ಥಿತರಿದ್ದರು.


ಹಂಚಿಕೊಳ್ಳಿ

Leave a Reply

Your email address will not be published. Required fields are marked *