ಹೂಗಾರ ಮಾದಯ್ಯನವರ ಜಯಂತೋತ್ಸವ

ಹಂಚಿಕೊಳ್ಳಿ

ಧಾರವಾಡ
ಜಿಲ್ಲಾ ಹೂಗಾರ ಸಮುದಾಯದ ವತಿಯಿಂದ 12ನೇ ಶತಮಾನದ ಶರಣರಲ್ಲಿ ಪ್ರಮುಖರಾದ ಹೂಗಾರ ಮಾದಯ್ಯನವರ ಜಯಂತೋತ್ಸವ ಅಂಗವಾಗಿ ಧಾರವಾಡ ಜಿಲ್ಲಾ ಹೂಗಾರ ಸಮುದಾಯದ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಮಕ್ಕಳಿಗೆ ಜಿಲ್ಲಾಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ದಿ. 4 .10.2026 ರಂದು ಬೆಳಿಗ್ಗೆ 11 ಗಂಟೆಗೆ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾಭವನದಲ್ಲಿ ಆಯೋಜಿಸಿದ್ದೇವೆ ಎಂದು ಜಿಲ್ಲಾ ಹೂಗಾರ ಸಮುದಾಯದ ಅಧ್ಯಕ್ಷ ಸುರೇಶ್ ಎಸ್ ಪೂಜಾರ ತಿಳಿಸಿದರು.

ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡುತ್ತಾ ಈ ಕಾರ್ಯಕ್ರಮಕ್ಕೆ ದಿವ್ಯ ಸಾನಿಧ್ಯವನ್ನು ಶ್ರೀ ಗುರುರಾಜೇಂದ್ರ ಶಿವಯೋಗಿ ಸ್ವಾಮಿಗಳು ಮಹಾ ಶಕ್ತಿ ಪೀಠ ನದಿ ಸಿನ್ನೂರು ಕಲಬುರ್ಗಿ ಆಗಮಿಸುವರು. ಕಾರ್ಯಕ್ರಮದ ಉದ್ಘಾಟನೆಯನ್ನು ಕೇಂದ್ರ ಸರ್ಕಾರದ ಶಿಕ್ಷಣ ಹಾಗೂ ಗ್ರಾಹಕ ವ್ಯವಹಾರಗಳು ಆಹಾರ ಮತ್ತು ಸಾರ್ವಜನಿಕ ವಿತರಣೆ ಇಲಾಖೆ ಸಚಿವರಾದ ಪ್ರಹ್ಲಾದ ಜೋಶಿ ಅವರು ಚಾಲನೆ ನೀಡುವರು.

ಮುಖ್ಯ ಅತಿಥಿಗಳಾಗಿ ಶಾಸಕರಾಸ ಅರವಿಂದ ಚಂದ್ರಕಾಂತ ಬೆಲ್ಲದ, ವಿನಯ ಕುಲಕರ್ಣಿ, ಎನ್. ಎಚ್. ಕೋನರೆಡ್ಡಿ, ಪಾಲಿಕೆ ಉಪಮಹಾಪೌರ ರತ್ನಬಾಯಿ ನಾಜರೇ, ಹುಡಾ ಅಧ್ಯಕ್ಷ ರಾಬರ್ಟ್ ದದ್ದಾಪುರಿ, ಬಸವರಾಜ ಹೂಗಾರ, ಮಾಜಿ ಮಹಾಪೌರ ವೀರೇಶ್ ಅಂಚಟಗೇರಿ, ತವಣಪ್ಪ ಅಷ್ಟಗಿ, ಸಿದ್ದರಾಮಣ್ಣ ನಡಕಟ್ಟಿ, ಕುಮಾರಿ ವಾಣಿ ಅಕ್ಕನವರು, ಭಾರತಿ ಎಸ್ ಭೂಯ್ಯಾರ, ಶೋಭಾ ಹೂಗಾರ, ಡಾ. ಎಸ್. ಎಸ್. ಹೂಗಾರ, ಲೋಚನೇಶ ಹೂಗಾರ, ಡಾ. ಗುರುನಾಥ ಹೂಗಾರ ಸೇರಿದಂತೆ ವಿವಿಧ ಮುಖಂಡರು ಭಾಗವಹಿಸುವರು ಎಂದರು.

ಈಗಾಗಲೇ ಧಾರವಾಡ ಜಿಲ್ಲಾ ಹೂಗಾರ ಸಮುದಾಯ ಹಾಗೂ ವಿವಿಧ ಸಂಘಟನೆಗಳ ಸಹಕಾರದಲ್ಲಿ ರಾಜ್ಯಮಟ್ಟದ ಸಾಂಪ್ರದಾಯಿಕ ಬಾಸಿಂಗ ತಯಾರಿಕೆ ಹಾಗೂ ಕುಲಕಸುಬು ಲಲಿತ ಕಲೆಗಳ ಪ್ರದರ್ಶನ ಕಾರ್ಯಕ್ರಮ ಧಾರವಾಡದಲ್ಲಿ ಆಯೋಜಿಸಿದ್ದು ಜೊತೆಗೆ ಈ ಹಿಂದೆ ಧಾರವಾಡ ಹೂಗಾರ ಸಮುದಾಯದ ವತಿಯಿಂದ ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಯಶಸ್ವಿಯಾಗಿ ಹಮ್ಮಿಕೊಳ್ಳಲಾಗಿತ್ತು.

ಈ ಹಿಂದಿನ ರಾಜ್ಯ ಸರ್ಕಾರ ಹಿಂದುಳಿದ ಹೂಗಾರ ಸಮುದಾಯದ ಬೆಳವಣಿಗೆಗಾಗಿ ಹೂಗಾರ ಅಭಿವೃದ್ಧಿ ನಿಗಮವನ್ನು ರಚನೆ ಮಾಡಿದ್ದು, ಆದರೆ ಪ್ರಸ್ತುತ ಕಾಲದಲ್ಲಿಯೂ ಸಹಿತ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ಮತ್ತು ಅನುದಾನವನ್ನಾಗಲಿ ನೀಡಿರುವುದಿಲ್ಲ, ಆದ್ದರಿಂದ ಪ್ರಸ್ತುತ ರಾಜ್ಯ ಸರ್ಕಾರ ಕೂಡಲೇ ಅಭಿವೃದ್ಧಿ ನಿಗಮಕ್ಕೆ ಹೂಗಾರ ಸಮಾಜದವರನ್ನೇ ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕು ಮತ್ತು ಸೂಕ್ತ ಅನುದಾನದ ವ್ಯವಸ್ಥೆಗೊಳಿಸಬೇಕು ಎಂದು ವಿನಯ ಪೂರಕವಾಗಿ ಕೋರುತ್ತೇವೆ.

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ರಮುಖ ವರ್ತುಲಕ್ಕೆ ಬಸವಾದಿ ಶರಣ ಹೂಗಾರ ಮಾದಯ್ಯನವರ ನಾಮಕರಣ ಮಾಡುವಂತೆ ಒತ್ತಾಯಿಸುವುದು, ಹೂಗಾರ ಸಮುದಾಯದ ವಿವಿಧ ಕುಲ ಕಸುಬುಗಳಿಗೆ ಕರಡಿಮಜಲು ಸಂಬಳ ವಾದ್ಯ, ಹೂಗಾರರ ಪ್ರಮುಖ ಉದ್ಯೋಗವಾದ ಬಾಸಿಂಗ್, ಹೂವಿನ ವ್ಯಾಪಾರಕ್ಕೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವುದು ಮತ್ತು ಮಹಾನಗರ ವ್ಯಾಪ್ತಿಯಲ್ಲಿ ಪಾಲಿಕೆಯ ಮಳೆಗೆಗಳನ್ನು ಒದಗಿಸುವಂತೆ ಮನವಿ ಜೊತೆಗೆ ಹೂಗಾರ ಸಮುದಾಯದ ಕುಲ ಕಸಬುದಾರರಿಗೆ ಅಗತ್ಯ ಮಾಶಾಸನ ಕಲ್ಪಿಸುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಸಮುದಾಯದ ಹಿರಿಯ ಮುಖಂಡ ನಾಗರಾಜ ಎಸ್ ಹೂಗಾರ ತಿಳಿಸಿದರು.

ಹೂಗಾರ ಸಮುದಾಯದ ಪ್ರತಿಭಾವಂತ ಯುವ ಸಮುದಾಯಕ್ಕೆ ಸಂಪನ್ಮೂಲ ವ್ಯಕ್ತಿಗಳಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸದರಿ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಆದವರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿಯನ್ನು ಸಂಯೋಜನಾತ್ಮಕವಾಗಿ ತರಬೇತಿ ನೀಡುವುದು, ಗ್ರಾಮೀಣ ಸಮುದಾಯದ ಹೂಗಾರ್ ಸಮಾಜದ ಮೂಲ ಕಸಬುಗಳನ್ನು ಮಾಡುವುದಕ್ಕೆ ಪೂರಕವಾದಂತ ಸಾಮಗ್ರಿಗಳನ್ನ ಪರಿಕರಗಳನ್ನು ನೀಡುವುದರ ಜೊತೆಗೆ ಮತ್ತು ಅದಕ್ಕೆ ಪೂರಕವಾದ ಅನುದಾನವನ್ನು ಕೊಡಿಸಲು ಕೂಡ ಪ್ರಯತ್ನ ಮಾಡಲಾಗುವುದು.

ಅರ್ಹ ಅಭ್ಯರ್ಥಿಗಳಿಗೆ ತರಬೇತಿ ಚಟುವಟಿಕೆ ಮತ್ತು ಪುನರ್ವಸ್ಥಿ ಕಲ್ಪಿಸುವ ಉದ್ದೇಶಕ್ಕಾಗಿ ವಿವಿಧ ಸಂಘಟನೆಗಳ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ನಿವೃತ್ತ ಡಿಡಿಪಿಐ ಡಾ. ಗುರುನಾಥ ಹೂಗಾರ ತಿಳಿಸಿದರು.

ಹೂಗಾರ ಸಮಾಜದ ಹಿರಿಯ ಮುಖಂಡ ಹಾಗೂ ಉಪಾಧ್ಯಕ್ಷರಾದ ಶ್ರೀ ಕಾಡ ಸಿದ್ದೇಶ್ವರ ಹೂಗಾರ ಇವರು ಮಾತನಾಡುತ್ತಾ ಹೂಗಾರ ಸಮುದಾಯದಲ್ಲಿ ದೇಶ ಸೇವೆ ಸಲ್ಲಿಸಿದಂತ ಮಾಜಿ ಯೋಧರಿಗೆ ಹಾಗೂ ಹೂಗಾರ ಸಮುದಾಯದ ಕಾಯಕಯೋಗಿಗಳಿಗೆ ಸತ್ಕರಿಸಿ ಗೌರವಿಸಲಾಗುವುದು ಎಂದು ತಿಳಿಸಿದರು.

ಧಾರವಾಡ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಸಮುದಾಯದ ಸ್ವಸಹಾಯ ಗುಂಪಿನ ಮಹಿಳೆಯರು ಮತ್ತು ಮಕ್ಕಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಧಾರವಾಡ ಜಿಲ್ಲಾ ಮಹಿಳಾಧ್ಯಕ್ಷೆ ಶಾಂತಾ ಎಸ್ ಹೂಗಾರ ತಿಳಿಸಿದರು.

ಈ ಕಾರ್ಯಕ್ರಮಕ್ಕೆ ಧಾರವಾಡ ಜಿಲ್ಲೆ ಸೇರಿದಂತೆ ವಿವಿಧ ಭಾಗಗಳಿಂದ ಮಹಿಳೆಯರು ಮಕ್ಕಳು ಕುಲ ಕಸುಬುದಾರರು ಭಾಗವಹಿಸುವರು ರಾಜ್ಯ ಮಹಿಳಾ ಪ್ರತಿನಿಧಿ ವೀಣಾ ಎಸ್ ಪೂಜಾರ, ಜಿಲ್ಲಾ ಹಿರಿಯ ಉಪಾಧ್ಯಕ್ಷ ಎಚ್. ಎಂ. ಹೂಗಾರ ಕಾರ್ಯಾಧ್ಯಕ್ಷ ಶಂಕರ ಎಂ ಹೂಗಾರ, ಜಿಲ್ಲಾ ಸಲಹಾ ಸಮಿತಿ ಅಧ್ಯಕ್ಷ ಎಸ್. ಆರ್. ಹೂಗಾರ, ಗೌರವಾಧ್ಯಕ್ಷ ಶಿವಾನಂದ ಪೂಜಾರ, ಜಿಲ್ಲಾ ಮಹಿಳಾ ಪ್ರಧಾನ ಕಾರ್ಯದರ್ಶಿ ಮಂಜುಳಾ ಎಸ್ ಹೂಗಾರ, ಹಿರಿಯರಾದ ಮಹಾಂತೇಶ್ ಹೂಗಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.


ಹಂಚಿಕೊಳ್ಳಿ

Leave a Reply

Your email address will not be published. Required fields are marked *