ಹುಬ್ಬಳ್ಳಿ-ಧಾರವಾಡ ಬಿಆರ್‌ಟಿಎಸ್ ಅವ್ಯವಸ್ಥೆ
ನಿತ್ಯ ಒಂದಿಲ್ಲೊಂದು ತಾಂತ್ರಿಕ ದೋಷದಿಂದ 4-5 ಬಿಆರ್‌ಟಿಎಸ್ ಬಸ್‌ಗಳು ಕೆಟ್ಟು ನಿಲ್ಲುತ್ತಿರುವುದು ಒಂದೆಡೆಯಾದರೆ, ಬಿಆರ್‌ಟಿಎಸ್ ಬಸ್ ವ್ಯವಸ್ಥೆಯೇ ಅವ್ಯವಸ್ಥೆಯ ಆಗರವಾಗಿದೆ. ಮುಂಗಡ ಹಣ ಪಾವತಿಸಿ ಟಿಕೆಟ್ ಪಡೆದು ಪ್ರಯಾಣಿಸುವವರು ಬಿಆರ್‌ಟಿಎಸ್ ಸೇವೆಗೆ ಹಿಡಿಶಾಪ ಹಾಕುವಂತಾಗಿದೆ. ಹುಬ್ಬಳ್ಳಿ-ಧಾರವಾಡ ಮಧ್ಯದಲ್ಲಿ ತ್ವರಿತ ಸಂಚಾರ ಸೇವೆ ಒದಗಿಸುವ ಉದ್ದೇಶದಿಂದ ಕೋಟ್ಯಂತರ ರೂ. ವೆಚ್ಚದಲ್ಲಿ ಪ್ರತ್ಯೇಕ ಕಾರಿಡಾರ್‌ನೊಂದಿಗೆ ಬಿಆರ್‌ಟಿಎಸ್ ಯೋಜನೆ ಜಾರಿಗೊಳಿಸಲಾಗಿದೆ. ಆದರೆ, ಪ್ರಯಾಣಿಕರಿಗೆ ಈ ತ್ವರಿತ ಸಂಚಾರ ಸೇವೆ ಅನುಕೂಲಕರವಾಗುತ್ತಿಲ್ಲ. 15-20 ಬಸ್ ದುರಸ್ತಿಗೆತ್ವರಿತ ಸಂಚಾರ ಸೇವೆ ಒದಗಿಸಲು ಪ್ರತಿ ಬಸ್‌ಗೆ…
