ನಾಗೋಯಾ ಏಷ್ಯನ್ ಗೇಮ್ಸ್-೨೦೨೬: ಕಬಡ್ಡಿಯಲ್ಲಿ ಭಾರತಕ್ಕೆ ಗೋಲ್ಡನ್ ಡಬಲ್
ಹಂಚಿಕೊಳ್ಳಿನಾಗೋಯಾಭರ್ಜರಿ ಪ್ರದರ್ಶನ ನೀಡಿದ ಭಾರತದ ಪುರುಷ ಹಾಗೂ ಮಹಿಳಾ ತಂಡಗಳೆರಡೂ ಕಬಡ್ಡಿಯಲ್ಲಿ ಎದುರಾಳಿ ರಿಪಬ್ಲಿಕ್ ಆಫ್ ಇರಾನ್‌ಗೆ ಚಳ್ಳೆ ಹಣ್ಣು ತಿನ್ನಿಸಿ ಚಿನ್ನದ ಪದಕಗಳನ್ನು ಬಾಚಿಕೊಂಡವು. ಟೋಕೈ ಸಿಟಿಜನ್ಸ್ ಜಿಮ್ನಾಷಿಯಂದಲ್ಲಿ ಮುಂಜಾನೆ ಪುಷ್ಪಾ ರಾಣಾ ನೇತೃತ್ವದ ಭಾರತದ ಮಹಿಳಾ ತಂಡ ಇರಾನ್ ಎದುರು ಕೇವಲ ಮೂರು ಪಾಯಿಂಟ್‌ಗಳ(೩೭-೩೪) ಗೆಲುವು ದಾಖಲಿಸಿದರೆ, ಮಧ್ಯಾಹ್ನ ಸುನೀಲ್ ಕುಮಾರ ಸಾರಥ್ಯದ ಭಾರತದ ಪುರುಷರ ತಂಡ ತೀವ್ರ ಪ್ರತಿರೋಧವೊಡ್ಡಿದ ಇರಾನ ಪುರುಷರ ತಂಡದ ಎದುರು ೪೦-೩೪ ಅಂತರದ ಗೆಲುವು ದಾಖಲಿಸಿತು. ೨೦೧೦, ೨೦೧೪…
