ಏಷ್ಯನ್ ಗೇಮ್ಸ್: ಮಲೇಷ್ಯಾ ಎದುರು ೫-೧ ಜಯಭೇರಿ, ಹಾಕಿ ಚಿನ್ನ ಉಳಿಸಿಕೊಂಡ ಹರ್ಮನ್‌ಪ್ರೀತ್ ಪಡೆ, ೨೦೨೮ರ ಒಲಿಂಪಿಕ್ಸ್‌ಗೆ ನೇರ ಪ್ರವೇಶ

ಹಂಚಿಕೊಳ್ಳಿ

ಹಂಚಿಕೊಳ್ಳಿಕಾಕಮಿಗಹರಾ(ಜಪಾನ)ಮಲೇಷ್ಯಾ ಎದುರು ೫-೧ ಗೋಲುಗಳ ಅಧಿಕಾರಯುತ ಜಯ ದಾಖಲಿಸಿದ ಹರ್ಮನ್‌ಪ್ರೀತ್ ಸಿಂಗ್ ಸಾರಥ್ಯದ ಭಾರತದ ಪುರುಷರ ಹಾಕಿ ತಂಡ ನಾಗೋಯಾದಲ್ಲಿ ನಡೆದಿರುವ ೨೦ನೇ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಬಾಚಿಕೊಂಡಿದೆಯಲ್ಲದೇ, ೨೦೨೮ರಲ್ಲಿ ಲಾಸ್ ಏಂಜೆಲ್ಸ್ನಲ್ಲಿ ನಡೆಯಲಿರುವ ಒಲಿಂಪಿಕ್ಸ್ ಕ್ರೀಡೆಗಳಿಗೆ ನೇರ ಪ್ರವೇಶ ದೊರಕಿಸಿಕೊಂಡಿದೆ. ಶನಿವಾರ ಇಲ್ಲಿಯ ಗಿಫು ಪ್ರಿಫೆಕ್ಟರಲ್ ಗ್ರೀನ್ ಸ್ಟೇಡಿಯಂನಲ್ಲಿ ನಡೆದ ಪ್ರಶಸ್ತಿ ಹೋರಾಟದಲ್ಲಿ ಹರ್ಮನ್‌ಪ್ರೀತ್ ಸಿಂಗ್ ಎರಡು ಗೋಲು ಬಾರಿಸಿದರೆ, ಜುಗರಾಜ ಸಿಂಗ್, ಹಾರ್ದಿಕ್ ಸಿಂಗ್ ಹಾಗೂ ಶಿಲಾನಂದ ಲಾಕ್ರಾ ತಲಾ ಒಂದೊಂದು ಯಶ…


ಹಂಚಿಕೊಳ್ಳಿ
Read More

೪೪ ವರ್ಷಗಳ ನಂತರ ಭಾರತದ ವನಿತೆಯರಿಗೆ ಏಷ್ಯನ್ ಹಾಕಿ ಚಿನ್ನ, ೨೦೨೮ರ ಒಲಿಂಪಿಕ್ಸ್‌ಗೆ ನೇರ ಪ್ರವೇಶ

ಹಂಚಿಕೊಳ್ಳಿ

ಹಂಚಿಕೊಳ್ಳಿನಾಗೋಯಾ(ಜಪಾನ)ಏಷ್ಯನ್ ಕ್ರೀಡೆಗಳಲ್ಲಿ ಮಹಿಳಾ ಹಾಕಿ ಚಿನ್ನಕ್ಕಾಗಿ ೪೪ ವರ್ಷಗಳ ಕಾಯುವಿಕೆ ಕೊನೆಗೂ ಮುಗಿದಿದೆ. ಶುಕ್ರವಾರ ನಡೆದ ಫೈನಲ್ಸ್ ನಲ್ಲಿ ಹಾಲಿ ಚಾಂಪಿಯನ್ ಚೀನದ ಎದುರು ೧-೦ ಗೋಲಿನ ರೋಚಕ ಗೆಲುವನ್ನು ದಾಖಲಿಸಿದ ಸಲಿಮಾ ಟೆಟೆ ಸಾರಥ್ಯದ ಭಾರತ ತಂಡ ಚಿನ್ನದ ಪದಕವನ್ನು ಬಾಚಿಕೊಂಡಿಲ್ಲದೇ ೨೦೨೮ರಲ್ಲಿ ಲಾಸ್ ಏಂಜೆಲ್ಸ್ ನಲ್ಲಿ ನಡೆಯಲಿರುವ ಒಲಿಂಪಿಕ್ಸ್ ‌ಗೂ ನೇರ ಪ್ರವೇಶ ದೊರಕಿಸಿಕೊಂಡಿತು. ಪಂದ್ಯದ ೧೦ನೇ ನಿಮಿಷದಲ್ಲಿ ಲಾಲ್ರೆಮ್‌ಸಿಯಾಮಿ ಹ್ಮಾರ್ಜೊತೆ ಬಾರಿಸಿದ ಗೋಲು ಪಂದ್ಯದ ಹಣೆಬರಹ ಬರೆಯಿತು. ಸಲಿಮಾ ಟೆಟೆ ನೀಡಿದ ನಿಖರ…


ಹಂಚಿಕೊಳ್ಳಿ
Read More

ಏಷ್ಯನ್ ಗೇಮ್ಸ್: ಶುಕ್ರವಾರ ಭಾರತಕ್ಕೆ ಮತ್ತೆ ೪ ಚಿನ್ನ, ಒಟ್ಟು ಸ್ವರ್ಣಗಳ ಸಂಖ್ಯೆ ೧೫ಕ್ಕೆ

ಹಂಚಿಕೊಳ್ಳಿ

ಹಂಚಿಕೊಳ್ಳಿನಾಗೋಯಾ೨೦ನೇ ಏಷ್ಯನ್ ಕ್ರೀಡಾಕೂಟದಲ್ಲಿ ಶುಕ್ರವಾರ ಭಾರತದ ಪಾಲಿಗೆ ನಿಜವಾಗಿಯೂ ಶುಭ ಶುಕ್ರವಾರ’ವಾಗಿತ್ತು. ಬಾಕ್ಸಿಂಗ್‌ನಲ್ಲಿ ಮೂರು ಹಾಗೂ ಕುಸ್ತಿಯಲ್ಲಿ ಒಂದು ಹೀಗೆ ಒಂದೇ ದಿನ(ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ ೩.೩೦ರ ವರೆಗೆ) ನಾಲ್ಕು ಚಿನ್ನದ ಪದಕಗಳನ್ನು ಬಾಚಿಕೊಂಡ ಭಾರತ ಒಟ್ಟು ೭೫ ಪದಕಗಳನ್ನು(೧೫ ಚಿನ್ನ, ೨೫ ಬೆಳ್ಳಿ ಹಾಗೂ ೩೫ ಕಂಚು) ಸಂಪಾದಿಸಿ ಪದಕಗಳ ಪಟ್ಟಿಯಲ್ಲಿ ೫ನೇ ಸ್ಥಾನಕ್ಕೇರಿತ್ತು. ದಿನದ ಪ್ರಾರಂಭದಲ್ಲಿ ತಮ್ಮ ೨೯ನೇ ಹುಟ್ಟು ಹಬ್ಬವನ್ನಾಚರಿಸಿಕೊಳ್ಳುತ್ತಿದ್ದ ಭಾರತದ ಅಗ್ರ ಬಾಕ್ಸರ್ ಲವ್ಲೀನಾ ಬೊರ್ಗೊಹೇನ್ ಮಹಿಳೆಯರ ೭೫ ಕೆ.ಜಿ….


ಹಂಚಿಕೊಳ್ಳಿ
Read More

ಏಷ್ಯನ್ ಗೇಮ್ಸ್ ಪುರುಷರ ಹಾಕಿ: ಬಂಗಾರದ ಬೇಟೆಗೆ ಹರ್ಮನ್ ಪಡೆ

ಹಂಚಿಕೊಳ್ಳಿ

ಹಂಚಿಕೊಳ್ಳಿಕಾಕಮಿಗಹರಾ(ಜಪಾನ)ಅಂತಿಮ ಕ್ಷಣದವರೆಗೂ ನಡೆದ ರೋಚಕ ಹಣಾಹಣಿಯಲ್ಲಿ ಕಟು ವೈರಿ ಪಾಕಿಸ್ತಾನಕ್ಕೆ ೪-೩ ಗೋಲುಗಳ ಸೋಲಿನ ಶಾಕ್’ ನೀಡಿದ ಹರ್ಮನ್‌ಪ್ರೀತ್ ಸಿಂಗ್ ನೇತೃತ್ವದ ಭಾರತ ನಾಗೋಯಾದಲ್ಲಿ ನಡೆದಿರುವ ೨೦ನೇ ಏಷ್ಯನ್ ಕ್ರೀಡಾಕೂಟದಲ್ಲಿ ಪುರುಷರ ಹಾಕಿ ಫೈನಲ್‌ಗೆ ಲಗ್ಗೆಯಿಟ್ಟಿದೆ. ಗಿಫು ಪ್ರಿಫೆಕ್ಚರಲ್ ಗ್ರೀನ್ ಸ್ಟೇಡಿಯಂನಲ್ಲಿ ಗುರುವಾರ ನಡೆದ ಮೊದಲ ಸೆಮಿಫೈನಲ್‌ನಲ್ಲಿ ಸಾಧಿಸಿದ ಈ ಸ್ಮರಣೀಯ ಗೆಲುವಿನೊಂದಿಗೆ ಭಾರತ, ದಿನಾಂಕ ೩ ರಂದು ನಡೆಯುವ ಬಂಗಾರದ ಬೇಟೆ’ಗೆ ಅರ್ಹತೆ ಗಳಿಸಿಕೊಂಡಿತಲ್ಲದೇ, ೨೦೨೮ರ ಲಾಸ್ ಏಂಜೆಲ್ಸ್ ಒಲಿಂಪಿಕ್ಸ್‌ಗೆ ನೇರ ಅರ್ಹತೆ ಸಂಪಾದಿಸಿಕೊಳ್ಳುವುದರಿಂದ ಇನ್ನೊಂದೇ…


ಹಂಚಿಕೊಳ್ಳಿ
Read More

ಏಷ್ಯನ್ ಗೇಮ್ಸ್-೨೦೨೬: ಭಾರತಕ್ಕೆ ೧೦ನೇ ಚಿನ್ನದ ಪದಕ

ಹಂಚಿಕೊಳ್ಳಿ

ಹಂಚಿಕೊಳ್ಳಿನಾಗೋಯಾಉತ್ಕೃಷ್ಟ ಪ್ರದರ್ಶನ ನೀಡಿದ ಭಾರತದ ಕ್ರೀಡಾಪಟುಗಳು ಬುಧವಾರ ಮುಂಜಾನೆ ಮತ್ತೆ ನಾಲ್ಕು ಚಿನ್ನದ ಪದಕಗಳಿಗೆ ಲಗ್ಗೆ ಹಾಕುವುದರೊಂದಿಗೆ ನಾಗೋಯಾದಲ್ಲಿ ನಡೆದಿರುವ ೨೦ನೇ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತ ಗಳಿಸಿದ ಚಿನ್ನದ ಪದಕಗಳ ಸಂಖ್ಯೆ ಹತ್ತಕ್ಕೆ ಏರಿದೆ. ಪ್ರತಿಯೊಂದು ಸಲವೂ `ಬುಲ್ಸ್ ಐಸ್’ಗೆ ಗುರಿಯಿಟ್ಟ ಸಾಹಿಲ್ ಜಾಧವ, ಗಣೇಶ ಮಣಿರತ್ನಮ್ ಟಿ. ಹಾಗೂ ಕುಶಾಲ ದಲಾಲ ಅವರಿಂದ ಕೂಡಿದ್ದ ಭಾರತದ ತಂಡ ಪುರುಷರ ಬಿಲ್ಗಾರಿಕೆ ಕಂಪೌಂಡ್ ಟೀಂ ಸ್ಪರ್ಧೆಯಲ್ಲಿ ಚೀನಾ ತಂಡವನ್ನು(೨೩೮-೨೩೯) ಒಂದೇ ಒಂದು ಪಾಯಿಂಟ್‌ನಿಂದ ಪರಾಭವಗೊಳಿಸಿ ಚಿನ್ನದ ಪದಕಕ್ಕೆ…


ಹಂಚಿಕೊಳ್ಳಿ
Read More

ಏಷ್ಯನ್ ಗೇಮ್ಸ್: ಭಾರತದ ಅಥ್ಲೆಟಿಕ್ಸ್ ಅಭಿಯಾನ ಸ್ವರ್ಣ ಪದಕದೊಂದಿಗೆ ಮುಕ್ತಾಯ

ಹಂಚಿಕೊಳ್ಳಿ

ಹಂಚಿಕೊಳ್ಳಿನಾಗೋಯಾಏಷ್ಯನ್ ಕ್ರೀಡಾಕೂಟದ ೨೦ನೇ ಆವೃತ್ತಿಯಲ್ಲಿ ಅಥ್ಲೆಟಿಕ್ಸ್ ಸ್ಪರ್ಧೆಗಳ ಕೊನೆಯ ದಿನವಾಗಿದ್ದ ಮಂಗಳವಾರದಂದು ಭಾರತ ಚಿನ್ನದ ಪದಕದೊಂದಿಗೆ ತನ್ನ ಅಥ್ಲೆಟಿಕ್ಸ್ ಅಭಿಯಾನಕ್ಕೆ ತೆರೆ ಎಳೆಯಿತು. ವಿಥ್ಯಾ ರಾಮರಾಜ್ ಸಾರಥ್ಯದ ಮಹಿಳೆಯರ ೪ ಷ ೪೦೦ ಮೀಟರ್ ರೀಲೆ ತಂಡ ಅದ್ಭುತ ಪ್ರದರ್ಶನ ನೀಡಿ ಭಾರತಕ್ಕೆ ಪ್ರಸಕ್ತ ಕ್ರೀಡೆಗಳ ಆರನೇ ಚಿನ್ನದ ಪದಕ ತಂದಿತ್ತಿತು. ಕಿರಣ್ ಪಹಲ್, ಅನುಭವಿ ಎಂ.ಆರ್. ಪೂವಮ್ಮ, ಪ್ರಾಚಿ ಹಾಗೂ ವಿಥ್ಯಾ ರಾಮರಾಜ್ ಅವರಿಂದ ಕೂಡಿದ್ದ ಭಾರತ ತಂಡ ೩ ನಿಮಿಷ ೨೯.೬೯ ಸೆಕಂದುಗಳಲ್ಲಿ ಗುರಿ…


ಹಂಚಿಕೊಳ್ಳಿ
Read More

ಏಷ್ಯನ್ ಗೇಮ್ಸ್: ಕೊನೆಗೂ ಬಂತು ಐದನೇ ಚಿನ್ನ, ಟ್ರ್ಯಾಪ್ ಶೂಟಿಂಗ್‌ನಲ್ಲಿ ನೀರು ಧಾಂಡಾ ಹೊಸ ಏಷ್ಯನ್ ದಾಖಲೆ

ಹಂಚಿಕೊಳ್ಳಿ

ಹಂಚಿಕೊಳ್ಳಿನಾಗೋಯಾಪುರುಷರ ಕಬಡ್ಡಿಯಲ್ಲಿಯ ಚಿನ್ನದ ಪದಕದ ಬಳಿಕ ನಾಗೋಯಾ ಎಷ್ಯನ್ ಕ್ರೀಡಾ ಕೂಟದಲ್ಲಿ `ಹೊನ್ನಿನ ಬರ’ ಎದುರಿಸುತ್ತಿದ್ದ ಭಾರತಕ್ಕೆ ಕೊನೆಗೂ ಟ್ರ್ಯಾಪ್ ಶೂಟರ್ ನೀರು ಧಾಂಡಾ ಬಂಗಾರ ಗೆದ್ದು ಕೊಟ್ಟು ಆ ಬರ ನೀಗಿಸಿಕೊಟ್ಟಿದ್ದಾರೆ. ಮಂಗಳವಾರ ಐಚಿ ಜನರಲ್ ಶೂಟಿಂಗ್ ಗ್ಯಾಲರಿಯಲ್ಲಿ ನಡೆದ ಮಹಿಳೆಯರ ಟ್ರ್ಯಾಪ್ ಶೂಟಿಂಗ್ ಫೈನಲ್‌ನಲ್ಲಿ ನೀರು ಧಾಂಡಾ ಹೊಸ ಏಷ್ಯನ್ ದಾಖಲೆಯೊಂದಿಗೆ ಚಿನ್ನದ ಪದಕ ಬಾಚಿಕೊಂಡಿದ್ದಾರೆ. ಅರ್ಹತಾ ಸುತ್ತಿನಲ್ಲಿ ೧೧೮ ಪಾಯಿಂಟ್‌ಗಳೋಡನೆ ಅಗ್ರ ಸ್ಥಾನ ಸಂಪಾದಿಸಿದ್ದ ನೀರು, ಫೈನಲ್ಸ್ನಲ್ಲಿ ೨೮ ಪಾಯಿಂಟ್ಸಳೊಂದಿಗೆ ಏಷ್ಯನ್ ದಾಖಲೆ…


ಹಂಚಿಕೊಳ್ಳಿ
Read More

ಏಷ್ಯನ್ ಗೇಮ್ಸ್: ಯಶ್‌ವೀರ್, ರೋಹಿತ್ಯಾದವ್‌ರಿಂದ ಪೋಡಿಯಂ ಫಿನಿಷ್’

ಹಂಚಿಕೊಳ್ಳಿ

ಹಂಚಿಕೊಳ್ಳಿನಾಗೋಯಾನಾಗೋಯಾದಲ್ಲಿ ನಡೆದಿರುವ ೨೦ನೇ ಏಷ್ಯನ್ ಕ್ರೀಡಾಕೂಟದಲ್ಲಿ ಸೋಮವಾರ ಭಾರತಕ್ಕೊಂದು ಸ್ಮರಣಿಯ ದಿನ. ಇಲ್ಲಿಯ ಮಿಜುಹೋ ಪಾರ್ಕ್ ಅಥ್ಲೆಟಿಕ್ಸ್ ಸ್ಟೇಡಿಯಂನಲ್ಲಿ ನಡೆದ ಪುರುಷರ ಜಾವೆಲಿನ್ ಎಸೆತದ ಸ್ಪರ್ಧೆಯಲ್ಲಿ ಭಾರತಕ್ಕೆ ಒಲಿಂಪಿಕ್ಸ್ ಚಿನ್ನ ದೊರಕಿಸಿಕೊಟ್ಟ ನೀರಜ್ ಛೋಪ್ರಾ ಅವರ ಅನುಪಸ್ಥಿತಿಯಲ್ಲೂ ಭಾರತದ ಇಬ್ಬರಿಗೆ ಪೋಡಿಯಂ ಫಿನಿಷ್’ನ ಭಾಗ್ಯ ಲಭಿಸಿತು. ಯಶ್‌ವೀರ್ ಸಿಂಗ್ ಭರ್ಚಿಯನ್ನು ೮೫.೭೨ ಮೀಟರ್ ದೂರ ಎಸೆದು ಬೆಳ್ಳಿಯ ಪದಕಕ್ಕೆ ಕೊರಳೊಡ್ಡಿದರೆ, ಭಾರತದವರೇ ಆದ ರೋಹಿತ್ ಯಾದವ ೮೪.೩೫ ಮೀಟರ್‌ಗಳ ಸಾಧನೆಯೊಂದಿಗೆ ಕಂಚಿನ ಪದಕದ ವಾರಸುದಾರರಾದರು. ಸದ್ಯ ವಿಶ್ವದ…


ಹಂಚಿಕೊಳ್ಳಿ
Read More

ಏಷ್ಯನ್ ಗೇಮ್ಸ್-2026 ಮೈದಾನಕ್ಕಿಳಿಯದೆಯೇ ಸೆಮಿಫೈನಲ್‍ಗೆ ಲಗ್ಗೆಯಿಟ್ಟ ಶ್ರೇಯಸ್ ಅಯ್ಯರ್ ಬಳಗ

ಹಂಚಿಕೊಳ್ಳಿ

ಹಂಚಿಕೊಳ್ಳಿನಿಸ್ಸೀನ್(ಜಪಾನ)ಮೈದಾನಕ್ಕೇ ಇಳಿಯದೇ ಶ್ರೇಯಸ್ ಅಯ್ಯರ್ ಸಾರಥ್ಯದ ಭಾರತದ ಪುರುಷರ ಕ್ರಿಕೆಟ್ ತಂಡ ನಾಗೋಯಾ ಏಷ್ಯನ್ ಕ್ರೀಡಾಕೂಟದಲ್ಲಿ ಸೆಮಿಫೈನಲ್‍ಗೆ ಮುನ್ನಡೆದಿದೆ. ಇಲ್ಲಿಯ ಕರೋಗಿ ಸ್ಪೋಟ್ರ್ಸ್ ಪಾರ್ಕ್‍ನಲ್ಲಿ ಸೋಮವಾರ ಭಾರತ ಹಾಗೂ ಅಫ್ಘಾನಿಸ್ತಾನಗಳ ನಡುವೆ ಎರಡನೇ ಕ್ವಾರ್ಟರ್‍ಫೈನಲ್ ಪಂದ್ಯ ನಡೆಯಬೇಕಿತ್ತಾದರೂ, ಹಿಂದಿನ ದಿನ ರಾತ್ರಿ ಬಿದ್ದ ಮಳೆ ಹಾಗೂ ಒದ್ದೆ ಮೈದಾನದ ಕಾರಣದಿಂದಾಗಿ ಪಂದ್ಯ ಸಾಧ್ಯವಾಗಲೇ ಇಲ್ಲ. ಕ್ರೀಡಾಕೂಟದ ನಿಯಮಾವಳಿಗಳ ಪ್ರಕಾರ ಐಸಿಸಿಯ ಟಿ20 ಕ್ರಿಕೆಟ್ ರ್ಯಾಂಕಿಂಗ್‍ನಲ್ಲಿ ವಿಶ್ವದ ಅಗ್ರ ಸ್ಥಾನದಲ್ಲಿರುವ ಭಾರತ 10ನೇ ಕ್ರಮಾಂಕ ಹೊಂದಿರುವ ಅಫ್ಘಾನ್ ತಂಡವನ್ನು…


ಹಂಚಿಕೊಳ್ಳಿ
Read More

ಬಾಂಗ್ಲಾದ ಎದುರು 10-0 ಗೆಲುವು, ಹರ್ಮನ್‍ಪ್ರೀತ್ ಸಿಂಗ್ ಪಡೆ ಸೆಮೀಸ್‍ಗೆ

ಹಂಚಿಕೊಳ್ಳಿ

ಹಂಚಿಕೊಳ್ಳಿನಾಗೋಯಾಗುಂಪು ಮಟ್ಟದ ಐದಕ್ಕೆ ಐದೂ ಪಂದ್ಯಗಳಲ್ಲಿ ಅಬ್ಬರಿಸಿ ಅಜೇಯವಾಗುಳಿದ ಹಾಲಿ ಚಾಂಪಿಯನ್ಸ್ ಭಾರತದ ಪುರುಷರ ಹಾಕಿ ತಂಡ ನಾಗೋಯಾ ಏಷ್ಯನ್ ಕ್ರೀಡಾಕೂಟದಲ್ಲಿ ಸೆಮಿಫೈನಲ್ಸ್‍ಗೆ ಲಗ್ಗೆಯಿಟ್ಟಿದೆ. ನಾಯಕ ಹರ್ಮನ್‍ಪ್ರೀತ್ ಸಿಂಗ್ ಅವರ ಭರ್ಜರಿ ಹ್ಯಾಟ್ರಿಕ್’ ನೆರವಿನೊಡನೆ ಭಾರತ ಸೋಮವಾರ ಕಕಾಮಿಗಹಾರಾ(ಗಿಫು) ಕವಾಸಕಿ ಜುಕೋ ಸ್ಟೇಡಿಯಂನಲ್ಲಿ ಆಡಲ್ಪಟ್ಟಎ’ ಗುಂಪಿನ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಬಾಂಗ್ಲಾದೇಶವನ್ನು 10-0 ಗೋಲುಗಳಿಂದ ಪರಾಭವಗೊಳಿಸಿತು. ಹರ್ಮನ್‍ಪ್ರೀತ್ ಸಿಂಗ್ ಪಂದ್ಯದ 27, 40 ಹಾಗೂ 45ನೇ ನಿಮಿಷಗಳಲ್ಲಿ ಗೋಲು ಬಾರಿಸಿದರೆ, ಅಭಿಷೇಕ(3ನೇ ನಿಮಿಷ), ಜುಗರಾಜ್(22ನೇ ನಿಮಿಷ),…


ಹಂಚಿಕೊಳ್ಳಿ
Read More