ಏಷ್ಯನ್ ಗೇಮ್ಸ್: ಕೊನೆಗೂ ಬಂತು ಐದನೇ ಚಿನ್ನ, ಟ್ರ್ಯಾಪ್ ಶೂಟಿಂಗ್‌ನಲ್ಲಿ ನೀರು ಧಾಂಡಾ ಹೊಸ ಏಷ್ಯನ್ ದಾಖಲೆ

ಹಂಚಿಕೊಳ್ಳಿ

ನಾಗೋಯಾ
ಪುರುಷರ ಕಬಡ್ಡಿಯಲ್ಲಿಯ ಚಿನ್ನದ ಪದಕದ ಬಳಿಕ ನಾಗೋಯಾ ಎಷ್ಯನ್ ಕ್ರೀಡಾ ಕೂಟದಲ್ಲಿ `ಹೊನ್ನಿನ ಬರ’ ಎದುರಿಸುತ್ತಿದ್ದ ಭಾರತಕ್ಕೆ ಕೊನೆಗೂ ಟ್ರ್ಯಾಪ್ ಶೂಟರ್ ನೀರು ಧಾಂಡಾ ಬಂಗಾರ ಗೆದ್ದು ಕೊಟ್ಟು ಆ ಬರ ನೀಗಿಸಿಕೊಟ್ಟಿದ್ದಾರೆ.

ಮಂಗಳವಾರ ಐಚಿ ಜನರಲ್ ಶೂಟಿಂಗ್ ಗ್ಯಾಲರಿಯಲ್ಲಿ ನಡೆದ ಮಹಿಳೆಯರ ಟ್ರ್ಯಾಪ್ ಶೂಟಿಂಗ್ ಫೈನಲ್‌ನಲ್ಲಿ ನೀರು ಧಾಂಡಾ ಹೊಸ ಏಷ್ಯನ್ ದಾಖಲೆಯೊಂದಿಗೆ ಚಿನ್ನದ ಪದಕ ಬಾಚಿಕೊಂಡಿದ್ದಾರೆ.

ಅರ್ಹತಾ ಸುತ್ತಿನಲ್ಲಿ ೧೧೮ ಪಾಯಿಂಟ್‌ಗಳೋಡನೆ ಅಗ್ರ ಸ್ಥಾನ ಸಂಪಾದಿಸಿದ್ದ ನೀರು, ಫೈನಲ್ಸ್ನಲ್ಲಿ ೨೮ ಪಾಯಿಂಟ್ಸಳೊಂದಿಗೆ ಏಷ್ಯನ್ ದಾಖಲೆ ನಿರ್ಮಿಸಿ, ಏಷ್ಯನ್ ಕ್ರೀಡೆಗಳ ಇತಿಹಾಸದಲ್ಲಿಯೇ ಟ್ರ್ಯಾಪ್ ವಿಭಾಗದಲ್ಲಿ ಚಿನ್ನ ಗೆದ್ದ ಮೊಟ್ಟ ಮೊದಲ ಭಾರತೀಯ ಮಹಿಳೆ ಎಂಬ ಹೊಸ ಇತಿಹಾಸ ಬರೆದಿದ್ದಾರೆ.

ಇವತ್ತು ಬೆಳಿಗ್ಗೆಯಷ್ಟೇ ಆಶಿಮಾ ಆಹ್ಲಾವತ್ ಹಾಗೂ ಮನಿಷಾ ಕೀರ್ ಅವರ ಜೊತೆ ಟ್ರ್ಯಾಪ್ ತಂಡ ಸ್ಪರ್ಧೆಯಲ್ಲಿ ಭಾರತಕ್ಕೆ ಬೆಳ್ಳಿಯ ಪದಕ ತಂದಿಟ್ಟಿದ್ದ ನೀರು ಧಾಂಡಾ, ೧೨೫ ಶಾಟ್‌ಗಳ ಅರ್ಹತಾ ಸುತ್ತಿನಲ್ಲಿ ಒಟ್ಟು ೩೨೮ ಪಾಯಿಂಟ್‌ಗಳೊಡನೆ ಕುವೈತ್ ಸವಾಲನ್ನು ಸಮರ್ಥವಾಗಿ ಹಿಮ್ಮೆಟ್ಟಿಸಿ ಬೆಳ್ಳಿಯ ಪದಕ ಖಚಿತ ಪಡಿಸಿಕೊಟ್ಟಿದ್ದರು.

ಹೂಡಾ ಪದಕ ಖಚಿತ:
ಮಹಿಳೆಯರ ಬಾಕ್ಸಿಂಗ್‌ನ ೬೫ ಕೆ.ಜಿ. ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ ಲಿ ಶು ಅವರನ್ನು ಸೋಲಿಸಿದ ಭಾರತದ ಪರ್ವೀನ್ ಹೂಡಾ ಪೈನಲ್ ತಲುಪಿದ್ದು, ದೇಶಕ್ಕೆ ಕನಿಷ್ಠ ಇನ್ನೊಂದು ಬೆಳ್ಳಿಯ ಪದಕವನ್ನು ಖಚಿತ ಪಡಿಸಿಕೊಟ್ಟಿದ್ದಾರೆ.


ಹಂಚಿಕೊಳ್ಳಿ

Leave a Reply

Your email address will not be published. Required fields are marked *