ನಿಸ್ಸೀನ್(ಜಪಾನ)
ಮೈದಾನಕ್ಕೇ ಇಳಿಯದೇ ಶ್ರೇಯಸ್ ಅಯ್ಯರ್ ಸಾರಥ್ಯದ ಭಾರತದ ಪುರುಷರ ಕ್ರಿಕೆಟ್ ತಂಡ ನಾಗೋಯಾ ಏಷ್ಯನ್ ಕ್ರೀಡಾಕೂಟದಲ್ಲಿ ಸೆಮಿಫೈನಲ್‍ಗೆ ಮುನ್ನಡೆದಿದೆ.
ಇಲ್ಲಿಯ ಕರೋಗಿ ಸ್ಪೋಟ್ರ್ಸ್ ಪಾರ್ಕ್‍ನಲ್ಲಿ ಸೋಮವಾರ ಭಾರತ ಹಾಗೂ ಅಫ್ಘಾನಿಸ್ತಾನಗಳ ನಡುವೆ ಎರಡನೇ ಕ್ವಾರ್ಟರ್‍ಫೈನಲ್ ಪಂದ್ಯ ನಡೆಯಬೇಕಿತ್ತಾದರೂ, ಹಿಂದಿನ ದಿನ ರಾತ್ರಿ ಬಿದ್ದ ಮಳೆ ಹಾಗೂ ಒದ್ದೆ ಮೈದಾನದ ಕಾರಣದಿಂದಾಗಿ ಪಂದ್ಯ ಸಾಧ್ಯವಾಗಲೇ ಇಲ್ಲ.
ಕ್ರೀಡಾಕೂಟದ ನಿಯಮಾವಳಿಗಳ ಪ್ರಕಾರ ಐಸಿಸಿಯ ಟಿ20 ಕ್ರಿಕೆಟ್ ರ್ಯಾಂಕಿಂಗ್‍ನಲ್ಲಿ ವಿಶ್ವದ ಅಗ್ರ ಸ್ಥಾನದಲ್ಲಿರುವ ಭಾರತ 10ನೇ ಕ್ರಮಾಂಕ ಹೊಂದಿರುವ ಅಫ್ಘಾನ್ ತಂಡವನ್ನು ಬದಿಗೊತ್ತಿ ಅಂತಿಮ ನಾಲ್ಕರ ಘಟ್ಟ ಪ್ರವೇಶಿಸಿತು.
ಇದಕ್ಕೂ ಮೊದಲು ಪಾಕಿಸ್ತಾನ ಹಾಗೂ ಹಾಂಗ್ ಕಾಂಗ್, ಚೀನಾ ನಡುವಿನ ಮೊದಲ ಕ್ವಾರ್ಟರ್ ಫೈನಲ್ ಪಂದ್ಯದ ಹಣೆಬರಹವೂ ಭಿನ್ನವಾಗಿರಲಿಲ್ಲ. ಟಾಸ್ ಸಹ ಕಾಣದೇ ರದ್ದಾದ ಈ ಪಂದ್ಯದಲ್ಲಿ ಐಸಿಸಿ ರ್ಯಾಂಕಿಂಗ್ ಪ್ರಕಾರ 6ನೇ ಸ್ಥಾನದಲ್ಲಿರುವ ಪಾಕಿಸ್ತಾನ ತಂಡ, 24ನೇ ಕ್ರಮಾಂಕ ಹೊಂದಿರುವ ಹಾಂಗ್ ಕಾಂಗ್, ಚೀನಾವನ್ನು ಬದಿಗೊತ್ತಿ ಸೆಮಿಫೈನಲ್ ಪ್ರವೇಶಿಸಿತು.
ಮಂಗಳವಾರ ಶ್ರೀಲಂಕಾ-ನೇಪಾಳಗಳ ನಡುವೆ 3ನೇ ಕ್ವಾರ್ಟರ್ ಫೈನಲ್ಸ್ ಪಂದ್ಯ ನಡೆಯಲಿದ್ದು ಇದರ ವಿಜೇತರನ್ನು ಭಾರತ ಗುರುವಾರದ ಮೊದಲ ಸೆಮಿಫೈನಲ್ಸ್‍ನಲ್ಲಿ ಎದುರಿಸಲಿದೆ.
ಮಂಗಳವಾರವೇ ನಡೆಯಲಿರುವ ಬಾಂಗ್ಲಾದೇಶ-ಮಲೇಷ್ಯಾಗಳ ನಡುವಿನ 4ನೇ ಕ್ವಾರ್ಟರ್ ಫೈನಲ್ಸ್ ಪಂದ್ಯದ ವಿಜೇತರನ್ನು ಗುರುವಾರ ಪಾಕಿಸ್ತಾನ ಎರಡನೇ ಸೆಮಿಫೈನಲ್‍ನಲ್ಲಿ ಎದುರಿಸಲಿದೆ.
