ರಣಜಿ: ಹಾಲಿ ರನ್ನರ್-ಅಪ್ ಕರ್ನಾಟಕಕ್ಕೆ ಸೋಲಿನ ಆತಂಕ, ಮತ್ತೆ ಕರುಣ್ ಆಸರೆ, ಶಿಖರ್‌ಗೆ ೬ ವಿಕೆಟ್

ಹಂಚಿಕೊಳ್ಳಿ

ಹಂಚಿಕೊಳ್ಳಿಮಲಪಾಡು(ವಿಜಯವಾಡ)ಕರ್ನಾಟಕದ ಅಗ್ರ ಪಂಕ್ತಿಯ ಬ್ಯಾಟಿಂಗ್‌ನಲ್ಲಿ ಮತ್ತೆ ಕುಸಿತ ಕಂಡಿದ್ದು, ಕಳೆದ ರಣಜಿ ಋತುವಿನಲ್ಲಿ ರನ್ನರ್-ಅಪ್ ಸ್ಥಾನದೊಂದಿಗೆ ಬೀಗಿದ್ದ ರಾಜ್ಯ ತಂಡ ಹೊಸ ಋತುವಿನ ಮೊದಲ ಪಂದ್ಯದಲ್ಲೇ ಸೋಲಿನ ಆತಂಕದಲ್ಲಿದೆ. ಆಂಧ್ರದ ಎದುರು ಇಲ್ಲಿ ನಡೆದಿರುವ ಎಲೀಟ್ ಗುಂಪಿನ ನಾಲ್ಕು ದಿನಗಳ ಪಂದ್ಯದ ಮೂರನೇ ದಿನದ ಕೊನೆಗೆ ತನ್ನ ಎರಡನೇ ಸರದಿಯ ಆರು ವಿಕೆಟ್‌ಗಳನ್ನು ಉಳಿಸಿಕೊಂಡಿರುವ ಕರ್ನಾಟಕ ಬುಧವಾರದ ಇಡೀ ದಿನದಾಟ ಬಾಕಿಯಿರುವಂತೆ ಕೇವಲ ೩೨ ರನ್‌ಗಳಿಂದ ಮಾತ್ರ ಮುಂದಿದೆ. ೧೪೪ ರನ್ ಲೀಡ್:ಮಂಗಳವಾರ ಮುಂಜಾನೆ ೬ ವಿಕೆಟ್‌ಗಳಿಗೆ…


ಹಂಚಿಕೊಳ್ಳಿ
Read More

ರಾಹುಲ್ ಶತಕ, ರೇವಂತ ಜೊತೆ ದ್ವಿಶತಕದ ಜೊತೆಯಾಟ, ಆಂಧ್ರಕ್ಕೆ ಮಹತ್ವದ ಲೀಡ್

ಹಂಚಿಕೊಳ್ಳಿ

ಹಂಚಿಕೊಳ್ಳಿಮಲಪಾಡು(ವಿಜಯವಾಡ)ಆರನೇ ಕ್ರಮಾಂಕದ ಬ್ಯಾಟರ್ ಶ್ರೀರಾಮ ವೆಂಕಟ ರಾಹುಲ್ ಅವರ ಸಮಯೋಚಿತ ಶತಕ ಹಾಗೂ ರೇವಂತ ರೆಡ್ಡಿ ಅವರ ಜೊತೆಗಿನ ಆರನೇ ವಿಕೆಟ್‌ಗೆ ಭರ್ಜರಿ ದ್ವಿಶತಕದ ಜೊತೆಯಾಟದ ನೆರವಿನಿಂದ ಆತಿಥೇಯ ಆಂಧ್ರ ಇಲ್ಲಿ ನಡೆದಿರುವ ರಣಜಿ ಟ್ರೋಫಿ ಎಲೀಟ್ ಗುಂಪಿನ ಪಂದ್ಯದಲ್ಲಿ ಕಳೆದ ಸಲದ ರನ್ನರ್-ಅಪ್’ ಕರ್ನಾಟಕದ ಮೇಲೆ ಮಹತ್ವದ ಮೊದಲ ಇನ್ನಿಂಗ್ಸ್ ಲೀಡ್ ಸಂಪಾದಿಸಿತು. ಆಂಧ್ರ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ಪಂದ್ಯದ ಮೊದಲ ದಿನವಾಗಿದ್ದ ಭಾನುವಾರದಂದು ಕರ್ನಾಟಕ ತನ್ನ ಮೊದಲ ಸರದಿಯಲ್ಲಿ ೨೭೪ಕ್ಕೆ ಆಲೌಟಾದ ನಂತರ ಎರಡನೇ…


ಹಂಚಿಕೊಳ್ಳಿ
Read More

ಮಿಂಚಿದ ಅಭಿಷೇಕ, ಅರ್ಷದೀಪ್; ಭಾರತಕ್ಕೆ ಗೆಲುವು, ಸರಣಿಯಲ್ಲಿ ೨-೧ ಮುನ್ನಡೆ

ಹಂಚಿಕೊಳ್ಳಿ

ಹಂಚಿಕೊಳ್ಳಿಇಂದೋರ್ಮೊದಲು ಅಭೀಷೇಕ ಶರ್ಮಾ ಬಿರುಸಿನ ಅರ್ಧ ಶತಕ ಹಾಗೂ ನಂತರ ಅರ್ಷದೀಪ್ ಪರಿಣಾಮಕಾರ ದಾಳಿಯ ನೆರವಿನಿಂದ ಭಾರತ ಭಾನುವಾರ ಇಲ್ಲಿ ನಡೆದ ಮೂರನೇ ಟಿ೨೦ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಪ್ರವಾಸಿ ವೆಸ್ಟ್ ಇಂಡೀಸ್ ತಂಡವನ್ನು ೧೪ ರನ್‌ಗಳಿಂದ ಸೋಲಿಸಿ ಐದು ಪಂದ್ಯಗಳ ಸರಣಿಯಲ್ಲಿ ೨-೧ ರಿಂದ ಮುನ್ನಡೆಯಿತು. ಇಲ್ಲಿಯ ಹೋಳ್ಕರ್ ಸ್ಟೇಡಿಯಂನಲ್ಲಿ ಮೊದಲು ಟಾಸ್ ಸೋತು ಬ್ಯಾಟ್ ಮಾಡಿದ ಭಾರತ ೨೦ ಓವರ್‌ಗಳಲ್ಲಿ ೨೨೩ಕ್ಕೆ ಆಲೌಟಾದರೆ, ಉತ್ತರವಾಗಿ ವಿಂಡೀಸ್ ೭ ವಿಕೆಟ್‌ಗಳಿಗೆ ೨೦೯ರ ಮೊತ್ತ ತಲುಪುವಲ್ಲಿ ಮಾತ್ರ ಯಶ…


ಹಂಚಿಕೊಳ್ಳಿ
Read More

ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿಯಿಂದ ಪಾಕಿಸ್ತಾನ ಔಟ್

ಹಂಚಿಕೊಳ್ಳಿ

ಹಂಚಿಕೊಳ್ಳಿನವದೆಹಲಿಪುರುಷರ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಪಂಜಾಬ್-೨೦೨೬ ಪಾಕಿಸ್ತಾನ ಅಧಿಕೃತವಾಗಿ ಹಿಂದೆ ಸರಿದಿದ್ದು, ಅದರ ಬದಲು ಬಾಂಗ್ಲಾದೇಶ ತಂಡವನ್ನು ಸೇರಿಸಲಾಗಿದೆ. ಇದೇ ತಿಂಗಳ ೨೭ರಿಂದ ಪಂದ್ಯಾವಳಿ ಜಲಂಧರ ಹಾಗೂ ಮೊಹಾಲಿಗಳಲ್ಲಿ ಎಕಕಾಲಕ್ಕೆ ಪ್ರಾರಂಭವಾಗಲಿದೆ. ಪಾಕಿಸ್ತಾನ ಹಿಂದೆಗೆದುಕೊಂಡಿರುವುದರ ಹಿನ್ನೆಲೆಯಲ್ಲಿ ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ಹಾಗೂ ಆತಿಥೇಯ ಭಾರತ ದಿನಾಂಕ ೨೭ರ ಉದ್ಘಾಟನಾ ಪಂದ್ಯವನ್ನು ಬಾಂಗ್ಲಾದೇಶದ ಎದುರು ಆಡಲಿದೆ. ನವಂಬರ್ ೫ರ ವರೆಗೆ ಜಲಂಧರಿನ ಒಲಿಂಪಿಯನ್ ಸುರ್ಜೀತ್ ಸಿಂಗ್ ಹಾಗೂ ಮೊಹಾಲಿಯ ಒಲಿಂಪಿಯನ್ ಬಲ್ಬೀರ್‌ಸಿಂಗ್ ಸೀನಿಯರ್ ಅಂತಾರಾಷ್ಟ್ರೀಯ ಹಾಕಿ…


ಹಂಚಿಕೊಳ್ಳಿ
Read More

೧೯ ವರ್ಷದವರೊಳಗಿನ ಕ್ರಿಕೆಟ್: ಕರ್ನಾಟಕದ ವನಿತೆಯರಿಗೆ ಸತತ ಎರಡನೇ ಗೆಲುವು

ಹಂಚಿಕೊಳ್ಳಿ

ಹಂಚಿಕೊಳ್ಳಿರೋಪರ್(ರೂಪನಗರ, ಪಂಜಾಬ)ಕೇರಳದ ಎದುರು ೪ ವಿಕೆಟ್‌ಗಳಿಂದ ಜಯಿಸಿದ ಕರ್ನಾಟಕದ ವನಿತೆಯರು ಬಿಸಿಸಿಐ ಆಶ್ರಯದ ೧೯ ವರ್ಷದವರೊಳಗಿನ ಮಹಿಳೆಯರ ಟಿ೨೦ ಕ್ರಿಕೆಟ್ ಟೂರ್ನಿಯಲ್ಲಿ ಶನಿವಾರ ಸತತ ಎರಡನೇ ಗೆಲುವು ದಾಖಲಿಸಿ ಪಾಯಿಂಟ್ ಪಟ್ಟಿಯಲ್ಲಿ `ಎ’ ಗುಂಪಿನ ಅಗ್ರಸ್ಥಾನಕ್ಕೇರಿದರು. ಇಲ್ಲಿಯ ಸರಕಾರಿ ಕಾಲೇಜು ಮೈದಾನದಲ್ಲಿ ಗೆಲುವಿಗೆ ಬೇಕಿದ್ದ ೧೨೮ ರನ್‌ಗಳನ್ನು ಕರ್ನಾಟಕದ ವನಿತೆಯರು ೬ ವಿಕೆಟ್‌ಗಳನ್ನು ಕಳೆದುಕೊಂಡು ೧೬.೫ ಓವರ್‌ಗಳಲ್ಲಿ ಸಂಪಾದಿಸಿದರು. ಪ್ರಾರಂಭಿಕ ಬ್ಯಾಟರ್ ರಚಿತಾ ಹತ್ವಾರ(೩೪, ೨೪ ಎಸೆತ, ೬ ಬೌಂಡರಿ), ಲಾವಣ್ಯ ಚಲನಾ(೨೮, ೨೫ ಎಸೆತ, ೪…


ಹಂಚಿಕೊಳ್ಳಿ
Read More

ಅನ್ವಯ್ ದ್ರಾವಿಡ್ ಬಿರುಸಿನ ಶತಕ, ಕರ್ನಾಟಕಕ್ಕೆ ವಿನೂ ಮಂಕಡ್ ಟ್ರೋಫಿಯಲ್ಲಿ ಮೊದಲ ಜಯ

ಹಂಚಿಕೊಳ್ಳಿ

ಹಂಚಿಕೊಳ್ಳಿವಿಶಾಖಪಟ್ಟಣ(ಆಂಧ್ರಪ್ರದೇಶ)ದಿ ವಾಲ್’ ಖ್ಯಾತಿಯ ರಾಹುಲ್ ದ್ರಾವಿಡ್‌ರ ಕಿರಿಯ ಪುತ್ರ ಹಾಗೂ ನಾಯಕ ಅನ್ವಯ ದ್ರಾವಿಡ್ ಬಿರುಸಿನ ಶತಕ ಸಿಡಿಸುವುದರೊಂದಿಗೆ ಕರ್ನಾಟಕ ತಂಡ ಬಿಸಿಸಿಐನ ೧೯ ವರ್ಷದವರೊಳಗಿನ ವಿನೂ ಮಂಕಡ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ‘ಇ’ ಗುಂಪಿನ ತನ್ನ ಎರಡನೇ ಪಂದ್ಯದಲ್ಲಿ ಚಂಡೀಗಢದ ಎದುರು ಬರೋಬ್ಬರಿ ೧೦೦ ರನ್‌ಗಳ ಗೆಲುವು ದಾಖಲಿಸಿದೆ. ನಗರದ ಡಾ. ವಾಯ್.ಎಸ್. ರಾಜಶೇಖರ ರೆಡ್ಡಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಶನಿವಾರ ಟಾಸ್ ಸೋತು ಬ್ಯಾಟಿಂಗಿಗೆ ಇಳಿಸಲ್ಪಟ್ಟ ಕರ್ನಾಟಕದ ಪರ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ಅನ್ವಯ…


ಹಂಚಿಕೊಳ್ಳಿ
Read More

ಅಯೋಧ್ಯೆ ರಾಮ ಮಂದಿರಕ್ಕೆ ಕಾಶಿ ಜಗದ್ಗುರುಗಳು-ಪೇಜಾವರ ಶ್ರೀಗಳ ಭೇಟಿ

ಹಂಚಿಕೊಳ್ಳಿ

ಹಂಚಿಕೊಳ್ಳಿಶ್ರೀರಾಮಜನ್ಮಭೂಮಿ ಕ್ಷೇತ್ರದಲ್ಲಿ ನಡೆದ ವಿಶೇಷ ಧನ್ವಂತರಿ ಹೋಮ, ಮತ್ತಿತರ ಧಾರ್ಮಿಕ ಕೈಂಕರ್ಯಗಳಲ್ಲಿ ಭಾಗಿ ಅಯೋಧ್ಯೆ(ಉ.ಪ್ರ.)ಶ್ರೀ ವಿವೇಕಾನಂದ ಸೇವಾ ಸಮಿತಿ ವತಿಯಿಂದ ಉತ್ತರಪ್ರದೇಶದ ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ಕ್ಷೇತ್ರದ ದೇವಾಲಯದಲ್ಲಿ ಹಮ್ಮಿಕೊಂಡಿದ್ದ ವಿಶೇಷ ಧನ್ವಂತರಿ ಹೋಮ, ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳಲ್ಲಿ ವೀರಶೈವ ಧರ್ಮದ ಪಂಚಪೀಠಗಳಲ್ಲಿ ಒಂದಾದ ಕಾಶಿ ಜ್ಞಾನಪೀಠದ ಹಿರಿಯ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಹಾಗೂ ಉಡುಪಿ ಪೇಜಾವರ ಅಧೋಕ್ಷಜಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರು ಪಾಲ್ಗೊಂಡಿದ್ದರು. ಕಾರ್ಯಕ್ರಮದ ನಂತರ ಕಾಶಿ ಜಗದ್ಗುರುಗಳು ರಾಮಜನ್ಮಭೂಮಿ ಮಂದಿರದ…


ಹಂಚಿಕೊಳ್ಳಿ
Read More

೧೪ ವಿಕೆಟ್ ಕಬಳಿಸಿದ ತನ್ಮಯ್ ಬಲೋಡಾ

ಹಂಚಿಕೊಳ್ಳಿ

ಹಂಚಿಕೊಳ್ಳಿಭಾರತಕ್ಕೆ ಆಸ್ಟ್ರೇಲಿಯಾ ಅಂಡರ್-೧೯ ತಂಡದೆದುರು ೧೦ ವಿಕೆಟ್ ಹಾಗೂ ೨-೦ ಸರಣಿ ಗೆಲುವು ಅಹಮದಾಬಾದತಾವಾಡಿದ ಮೊದಲ ಪಂದ್ಯದಲ್ಲೇ ಎಡಗೈ ಸ್ಪಿನ್ನರ್ ತನ್ಮಯ್ ಬಲೋಡಾ ೧೪ ವಿಕೆಟ್ ಕಬಳಿಸುವುದರೊಂದಿಗೆ, ಭಾರತದ ೧೯ ವರ್ಷದವರೊಳಗಿನ ತಂಡ ಇಲ್ಲಿ ನಡೆದ ಎರಡನೇ `ಯೂಥ್ ಟೆಸ್ಟ್’ನಲ್ಲಿ ಪ್ರವಾಸಿ ಆಸ್ಟ್ರೇಲಿಯಾ ೧೯ ವರ್ಷದವರೊಳಗಿನ ತಂಡವನ್ನು ೧೦ ವಿಕೆಟ್‌ಗಳಿಂದ ಹಣಿದು ಸರಣಿಯನ್ನು ೨-೦ ಅಂತರದಿAಲಂದ ತನ್ನದಾಗಿಸಿಕೊಂಡಿತು. ಅಮಾನತುಗೊಂಡ ರೋಹಿತ್ ಯಾದವ ಬದಲಿಗೆ ತಂಡಕ್ಕೆ ಸೇರ್ಪಡೆಯಾದ ತನ್ಮಯ್ ಬಲೋಡಾ ಎರಡನೇ ಸರದಿಯಲ್ಲೂ ಮಾರಕ ದಾಳಿ ನಿರ್ವಹಿಸಿ ೪೧…


ಹಂಚಿಕೊಳ್ಳಿ
Read More

ಸೌರವ್ ಗಂಗೂಲಿ ಈಗ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮುಖ್ಯ ಕೋಚ್

ಹಂಚಿಕೊಳ್ಳಿ

ಹಂಚಿಕೊಳ್ಳಿನವದೆಹಲಿಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಅವರು ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ನ ಮುಂದಿನ ಆವೃತ್ತಿಗಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದಾರೆ. ಸೌರವ ಗಂಗೂಲಿ ೨೦೧೯ರಿಂದಲೂ ಡೆಲ್ಲಿ ಕ್ಯಾಪಿಟಲ್ಸ್ ಜೊತೆ ನಿಕಟ ಸಂಪರ್ಕ ಹೊಂದಿದ್ದರೂ ಅದರ ಫ್ರೆಂಚೈಸಿಯೊಂದಿಗೆ ಇದು ಅವರ ಮೊದಲ ಅಧಿಕೃತ ಕೋಚಿಂಗ್ ಪಾತ್ರವಾಗಿದೆ. ತಂಡದ ಸಲಹೆಗಾರರಾಗಿ ಆಗ ತಂಡವನ್ನು ಸೇರಿಕೊಂಡಿದ್ದ ಅವರು ನಂತರ ಅದರ ಪುರುಷ ಹಾಗೂ ಮಹಿಳಾ ತಂಡಗಳ ಕ್ರಿಕೆಟ್ ನಿರ್ದೇಶಕರದೂ ಸೇರಿ ಹಲವಾರು ಪ್ರಮುಖ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಮುಖ್ಯ…


ಹಂಚಿಕೊಳ್ಳಿ
Read More

ಮುಕೇಶ್ ಕುಮಾರ ಮಾರಕ ದಾಳಿ, ಶೇಷ ಭಾರತಕ್ಕೆ ೩೧ನೇ ಇರಾಣಿ ಕಪ್ ಕಿರೀಟ, ಕನ್ನಡಿಗ ಸ್ಮರಣ್ ರವಿಚಂದ್ರನ್ ಪಂದ್ಯದ ಆಟಗಾರ

ಹಂಚಿಕೊಳ್ಳಿ

ಹಂಚಿಕೊಳ್ಳಿಶ್ರೀನಗರವೇಗಿ ಮುಕೇಶ್ ಕುಮಾರ್ ವೇಗದೆದುರು ರಣಜಿ ಚಾಂಪಿಯನ್ಸ್ ಜಮ್ಮು-ಕಾಶ್ಮೀರ ಬ್ಯಾಟರ್‌ಗಳು ತರಗೆಲೆಗಳಂತೆ ಉದುರುವುದರೊಂದಿಗೆ, ಶೇಷ ಭಾರತ ತಂಡ ಇರಾಣಿ ಕಪ್ ಕ್ರಿಕೆಟ್ ಪಂದ್ಯದಲ್ಲಿ ೧೬೭ ರನ್‌ಗಳ ಭರ್ಜರಿ ಜಯ ದಾಖಲಿಸಿ ದಾಖಲೆಯ ೩೧ನೇ ಸಲ ಪ್ರಶಸ್ತಿಯ ಮೇಲೆ ಹಕ್ಕು ಜಮಾಯಿಸಿತು. ಶೇರ್-ಎ-ಕಾಶ್ಮೀರ ಕ್ರೀಡಾಂಗಣದಲ್ಲಿ ಪಂದ್ಯದ ನಾಲ್ಕನೇ ದಿನ ಮುಕೇಶ್ ಕೇವಲ ೩೩ ರನ್ ನೀಡಿ ೬ ವಿಕೆಟ್ ಕಬಳಿಸುವುದರೊಂದಿಗೆ, ನಿಚ್ಚಳ ಗೆಲುವು ಸಾಧಿಸಲು ತನ್ನ ಎರಡನೇ ಸರದಿಯಲ್ಲಿ ೨೭೯ ರನ್ ಗಳಿಸಬೇಕಿದ್ದ ಆತಿಥೇಯ ತಂಡ ಭೋಜನ ವಿರಾಮದ…


ಹಂಚಿಕೊಳ್ಳಿ
Read More