ಪರಿಸರ ಸ್ನೇಹಿ ಮಣ್ಣಿನ ಗಣಪ ವಿತರಣೆ
ಧಾರವಾಡಮಾಜಿ ಸಚಿವ ವಿನಯ ಕುಲಕರ್ಣಿ ಅಭಿಮಾನಿ ಬಳಗದ ವತಿಯಿಂದ ಶ್ರೀ ಗೌರಿ ಗಣೇಶ ಹಬ್ಬದ ನಿಮಿತ್ತ ಸೋಮವಾರ ನಗರದ ರವಿವಾರ ಪೇಟೆಯಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ನೂರಾರು ಪರಿಸರ ಸ್ನೇಹಿ ಮಣ್ಣಿನ ಗಣಪತಿಗಳನ್ನು ವಿತರಿಸುವ ಮೂಲಕ ಪರಿಸರ ಸಂರಕ್ಷಣೆಯ ಸಂದೇಶ ಸಾರಿರುವುದು ಗಮನಾರ್ಹ.ಈ ಮಹತ್ವದ ಕಾರ್ಯಕ್ರಮಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಯಿತು. ಮಣ್ಣಿನ ಗಣಪತಿ ಮನೆಗೆ ಬರಲಿ… ನಮ್ಮ ಪರಿಸರವೂ ಹಸಿರಾಗಲಿ ಎಂಬ ಸದುದ್ದೇಶದೊಂದಿಗೆ ನಡೆದ ಈ ಕಾರ್ಯಕ್ರಮವು ಪರಿಸರ ಜಾಗೃತಿಗೆ ಮಾದರಿಯಾಯಿತು.ಈ ಸಂದರ್ಭದಲ್ಲಿ ಬಸವರಾಜ ಜಾಧವ, ಹಿದಾಯತ್…
